Asianet Suvarna News Asianet Suvarna News

ಜೆಡಿಎಸ್ ಜೋಕರ್ ಇದ್ದಂತೆ; ರಮ್ಮಿ, ಸೆಟ್‌ಗೂ ಸೇರಿಸಹುದು: ರಾಜಣ್ಣ!

ಜೆಡಿಎಸ್‌ ಜೋಕರ್‌ ಇದ್ದಂತೆ. ಇಸ್ಪೀಟ್‌ ಆಟದಲ್ಲಿರುವಂತೆ ಜೆಡಿಎಸ್‌ ಅನ್ನು ಹೇಗಾದರೂ ಹೊಂದಿಸಿಕೊಳ್ಳಬಹುದು. ಇತ್ತ ರಮ್ಮಿ ಆಡುವುದಕ್ಕೆ, ಅತ್ತ ಸೆಟ್ ಆಟಕ್ಕೂ ಸೇರಿಸಿಕೊಳ್ಳಬಹುದು ಎಂದು ವ್ಯಂಗ್ಯವಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ 

minister kn rajanna slams karnataka jds grg
Author
First Published Aug 6, 2024, 11:48 AM IST | Last Updated Aug 6, 2024, 1:01 PM IST

ಮದ್ದೂರು(ಆ.06): ಜೆಡಿಎಸ್‌ ಜೋಕರ್‌ ಇದ್ದಂತೆ. ಇಸ್ಪೀಟ್‌ ಆಟದಲ್ಲಿರುವಂತೆ ಜೆಡಿಎಸ್‌ ಅನ್ನು ಹೇಗಾದರೂ ಹೊಂದಿಸಿಕೊಳ್ಳಬಹುದು. ಇತ್ತ ರಮ್ಮಿ ಆಡುವುದಕ್ಕೆ, ಅತ್ತ ಸೆಟ್ ಆಟಕ್ಕೂ ಸೇರಿಸಿಕೊಳ್ಳಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ. 

ಸೋಮವಾರ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಮೇಲೆ ನನಗೇನೂ ದ್ವೇಷವಿಲ್ಲ. ಆದರೆ, ಜೆಡಿಎಸ್‌ನಲ್ಲಿರುವ ಅಪ್ಪ-ಮಗನೇ ನನ್ನ ಟಾರ್ಗೆಟ್ ಎಂದು ಹೇಳಿದ್ದರು. 

ಅಪೆಕ್ಸ್ ಬ್ಯಾಂಕ್‌ನಲ್ಲಿ ಸಾಲ ನೀಡುವಲ್ಲಿ ಗೋಲ್‌ಮಾಲ್..? ಸಿದ್ದರಾಮಯ್ಯ ಸರ್ಕಾರದ ಮತ್ತೊಬ್ಬ ಸಚಿವನಿಗೆ ಸಂಕಷ್ಟ !

ಆ ಮಾತನ್ನು ಜೆಡಿಎಸ್‌ನವರು ಈಗ ಮರೆತಿದ್ದಾರೆ. ಬಿಜೆಪಿ-ಜೆಡಿಎಸ್‌ನವರು ಮೈತ್ರಿಯೋ, ಮದುವೆಯೋ ಏನೋ ಆಗಿದ್ದಾರೆ. ಈ ಮೈತ್ರಿ ಅದೆಷ್ಟು ದಿನ ಉಳಿಯುವುದೋ ನೋಡೋಣ ಎಂದು ಕುಟುಕಿದರು.

Latest Videos
Follow Us:
Download App:
  • android
  • ios