Asianet Suvarna News Asianet Suvarna News

ರೌಡಿ ಶೀಟರ್‌ಗಳು ಬಾಲ ಬಿಚ್ಚದಂತೆ ಹತೊಟಿಗೆ ತನ್ನಿ: ಸಚಿವ ಪ್ರಿಯಾಂಕ್‌ ಖರ್ಗೆ

ಚಿತ್ತಾಪುರ ತಾಲೂಕು ಶಾಂತಿ ಸುವ್ಯವಸ್ಥೆಯ ಕ್ಷೇತ್ರವಾಗಿದ್ದು ಇಲ್ಲಿ ಕೆಲವರು ಬಂದು ಪ್ರತಿಭಟನೆ ನೆಪದಲ್ಲಿ ಬಂದು ಪ್ರಚೋದನಾಕಾರಿ ಭಾಷಣ ಮಾಡಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದು ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಂಡು ಒದ್ದು ಒಳಗಡೆ ಹಾಕಿ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಪೊಲೀಸ್‌ ಅಧಿ​ಕಾರಿಗಳಿಗೆ ಸೂಚಿಸಿದರು.

Minister Priyank Kharge Slams On BJP At Kalaburagi gvd
Author
First Published Aug 30, 2023, 11:35 PM IST

ಚಿತ್ತಾಪುರ (ಆ.30): ಚಿತ್ತಾಪುರ ತಾಲೂಕು ಶಾಂತಿ ಸುವ್ಯವಸ್ಥೆಯ ಕ್ಷೇತ್ರವಾಗಿದ್ದು ಇಲ್ಲಿ ಕೆಲವರು ಬಂದು ಪ್ರತಿಭಟನೆ ನೆಪದಲ್ಲಿ ಬಂದು ಪ್ರಚೋದನಾಕಾರಿ ಭಾಷಣ ಮಾಡಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದು ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಂಡು ಒದ್ದು ಒಳಗಡೆ ಹಾಕಿ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಪೊಲೀಸ್‌ ಅಧಿ​ಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿ​ಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಣಿಕಂಠ ರಾಠೋಡ್‌ ಬಂಧನದ ನೆಪದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿ ಅಲ್ಲಿ ಕೊಮು ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ. 

ತಾಲೂಕಿನಲ್ಲಿ ರೌಡಿ ಶೀಟರ್‌ಗಳು ಬಾಲ ಬಿಚ್ಚದಂತೆ ಹತೊಟಿಗೆ ತನ್ನಿ ಎಂದು ಪೊಲೀಸ್‌ ಇಲಾಖೆಗೆ ಖಡಕ್‌ ಸೂಚನೆ ನೀಡಿದರು. ಚಿತ್ತಾಪುರ ತಾಲೂಕು ಐತಿಹಾಸಿಕ ಪ್ರದೇಶವಾಗಿದ್ದು ಇಲ್ಲಿ ಸಾಕಷ್ಟುಜಲ ಮೂಲಗಳು ಹಾಗೂ ಕಲ್ಯಾಣಿಗಳು ಇದ್ದು ಇವುಗಳನ್ನು ಸಂರಕ್ಷಿಸಿ ಪುನಶ್ಚೇತನಗೊಳಿಸುವ ಕೆಲಸ ಆಗಬೇಕಿದೆ. ಇದರಿಂದ ತಾಲೂಕಿನಲ್ಲಿ ಸ್ವಲ್ಪ ಮಟ್ಟದಲ್ಲಿಯಾದರೂ ನೀರಿನ ಬವಣೆ ತಪ್ಪಿಸಲು ಸಾಧ್ಯವಿದ್ದು, ಈ ಕುರಿತಾಗಿ ಸಣ್ಣ, ಬೃಹತ್‌ ನೀರಾವರಿ ಇಲಾಖೆ, ಕೆಬಿಜೆಎನ್‌ಎಲ್‌, ಕೆಎನ್‌ಎಲ್‌ ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯವರು ಜಿಂಟಿಯಾಗಿ ಒಂದು ನೀಲನಕ್ಷೆ ತಯಾರಿಸಿ ಅವುಗಳಿಗೆ ಪುನರುಜ್ಜೀ​ವನ ಗೊಳಿಸಲು ಪ್ರಯತ್ನಿಸಿ ಎಂದ​ರು.

ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಮುಂದಾ​ಗಿ: ಸಚಿವ ಪ್ರಿಯಾಂಕ್‌ ಖರ್ಗೆ

ತಾಲೂಕು ಸಮಗ್ರ ಅಭಿವೃದ್ಧಿಗೊಳಿಸಲು ಮುಂದಿನ ಐದು ವರ್ಷಗಳ ಅವ​ಧಿಗಾಗಿ ನೂತನ ಯೊಜನೆಗಳ ಬಗ್ಗೆ ಪರಿಕಲ್ಪನೆ ಹೊಂದಿ ಅದರಂತೆ ವರದಿ ತಯಾರಿಸಲು ಕಳೆದ ಸಭೆಯಲ್ಲಿ ಸೂಚಿಸಿದ್ದೆ. ಆದರೆ, ಬಹುತೇಕ ಅಧಿ​ಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇದೆ. ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದೇನೆ. ಈ ಅಧಿವ​ಯಲ್ಲಿ ನಾನು ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಬೇಕಾಗಿದೆ. ಈ 5 ವರ್ಷದ ಅವಧಿ​ಯಲ್ಲಿ ಕೆಲಸಗಳು ಆಗದೇ ಇದ್ದರೆ ಮುಂದೆ ಎಂದೂ ಆಗುವುದಿಲ್ಲ. ತಾಲೂಕಿನ ಎಲ್ಲಾ ಅ​​ಧಿಕಾರಿಗಳ ಸಹಕಾರ ಅಗತ್ಯವಾಗಿದೆ. ಇದನ್ನು ಅರಿತು ಎಲ್ಲಾ ಅಧಿ​ಕಾರಿಗಳು ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.

ಹೈ-ಕ ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿ: ಸಚಿವ ಪ್ರಿಯಾಂಕ್‌ ಸ್ಫೋಟಕ ಹೇಳಿಕೆ

ನಾನು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿ ಶಾಲಾ ಕಟ್ಟಡಗಳ ನಿರ್ಮಾಣಕ್ಕಾಗಿ ಕೊಟಿಗಟ್ಟಲೆ ಅನುದಾನವನ್ನು ನೀಡುತ್ತಿದ್ದು ಕಳಪೆ ಕಾಮಗಾರಿ ಆಗುತ್ತಿರುವ ದೂರುಗಳು ಬರುತ್ತಿವೆ. ಕಟ್ಟಡ ನಿರ್ಮಾಣವಾಗಿ 4 ವರ್ಷ ಆಗಿಲ್ಲಾ ಅದು ಸೊರುತ್ತಿದೆ. ಇದೇನಾ ನಿಮ್ಮ ಇಲಾಖೆಗಳ ಗುಣಮಟ್ಟದ ಕಾಮಗಾರಿ ಎಂದು ಪ್ರಶ್ನಿಸಿದರು. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೋಳಿ ಎಂದು ಸೂಚಿಸಿದರು. ತಾಲೂಕಿನಲ್ಲಿ ಮಳೆಯ ಅಭಾವದಿಂದಾಗಿ ಉದ್ದು ಹಾಗೂ ಹೆಸರು ಸಂಪೂರ್ಣ ಹಾನಿಯಾಗಿದೆ. ತೊಗರಿ ಶೇ.100ರಷ್ಟು ಬಿತ್ತನೆಯಾಗಿದೆ ಆದರೆ ಇನ್ನೊಂದು ವಾರದೊಳಗೆ ಮಳೆ ಬೀಳದೆ ಇದ್ದರೆ ತೊಗರಿ ಬೆಳೆಯು ಕೂಡಾ ಹಾನಿಯಾಗುವ ಸಂಭವವಿದೆ ಎಂದು ಕೃಷಿ ಅಧಿ​ಕಾರಿ ಸಭೆಗೆ ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಅತೀ ಅವಶ್ಯವಾಗಿರುವ ಶಿಕ್ಷಣ, ಆರೊಗ್ಯ, ಸಮಾಜ ಕಲ್ಯಾಣ, ಪಶು ಇಲಾಖೆ, ಕೃಷಿ, ತೊಟಗಾರಿಕೆ, ಅರಣ್ಯ ದಂತಹ ಇಲಾಖೆಯವರು ಜನರ ನಾಡಿ ಮಿಡಿತ ಅರಿತು ಕೆಲಸವನ್ನು ಮಾಡಬೇಕು ಸೂಚಿಸಿದರು.

Follow Us:
Download App:
  • android
  • ios