Asianet Suvarna News Asianet Suvarna News

ಬಿಜೆಪಿಗರು ಪುಣ್ಯಾತ್ಮರು, ಕುಡ್ಲು, ಮಚ್ಚು ಹಿಡಿಯೋರಲ್ಲ: ಕೆ.ಸಿ.ನಾರಾಯಣಗೌಡ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ. ಮಂಡ್ಯ ಜಿಲ್ಲೆಯ ಮತ್ತಷ್ಟುನಾಯಕರು ಬಿಜೆಪಿ ಸೇರಲಿದ್ದಾರೆ. ಅವರ ಹೆಸರನ್ನು ಈಗಲೇ ಹೇಳುವುದಿಲ್ಲ: ಕೆ.ಸಿ.ನಾರಾಯಣಗೌಡ 

Minister KC Narayanagowda Talks Over BJP Leaders grg
Author
First Published Dec 13, 2022, 10:41 AM IST

ಮೈಸೂರು(ಡಿ.13):  ನಾವು 17 ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಬಿಜೆಪಿಗೆ ಸೇರ್ಪಡೆಯಾದ ಬಳಿಕ ನಮ್ಮನ್ನು ಪಕ್ಷ ಚೆನ್ನಾಗಿ ನಡೆಸಿಕೊಂಡಿದೆ. ಸಚಿವ ಸ್ಥಾನ ಕೊಟ್ಟು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ, ನಾವು ಬಿಜೆಪಿಯಲ್ಲೇ ಮುಂದುವರಿಯುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. 

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ. ಮಂಡ್ಯ ಜಿಲ್ಲೆಯ ಮತ್ತಷ್ಟುನಾಯಕರು ಬಿಜೆಪಿ ಸೇರಲಿದ್ದಾರೆ. ಅವರ ಹೆಸರನ್ನು ಈಗಲೇ ಹೇಳುವುದಿಲ್ಲ ಎಂದರು. ಬಿಜೆಪಿಗೆ ಸೇರ್ಪಡೆ ಆಗುವವರು ರೌಡಿಶೀಟರ್‌ಗಳು ಎಂಬ ಕಾಂಗ್ರೆಸ್‌ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಇರುವವರು ಪುಣ್ಯಾತ್ಮರು, ವಿದ್ಯಾವಂತರು, ತ್ಯಾಗಿಗಳು, ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳವರು. ಕುಡ್ಲು ಮಚ್ಚು ಹಿಡಿದಿರುವವರು ಬಿಜೆಪಿಯಲ್ಲಿಲ್ಲ. ಕುಡ್ಲು ಮಚ್ಚು ಹಿಡಿಯುವವರು ಯಾವ ಪಕ್ಷದಲ್ಲಿದ್ದಾರೆಂದು ಎಲ್ಲರಿಗೂ ಗೊತ್ತಿದೆ ಎಂದರು.

Karnataka politics: 'ಬಿಜೆಪಿಯಲ್ಲಿ ನಾನು ಅಕ್ರಮವಾಗಿದ್ದೇನೆ : ಕಮಲ ತೊರೆದು ಕೈನತ್ತ

ಕೆಸಿಎನ್‌ ವಿರುದ್ಧ ಜೆಡಿಎಸ್‌ ಆಕ್ರೋಶ

ಕೆ.ಆರ್‌.ಪೇಟೆ: ಮಾಜಿ ಸಚಿವ ಎಚ್‌.ಡಿ.ರೇವಣ್ಣರ ಬಗ್ಗೆ ಲಘು ಹೇಳಿಕೆ ನೀಡಿರುವ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡರ ವಿರುದ್ಧ ತಾಲೂಕು ಜೆಡಿಎಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಹೋಟೆಲ… ರಾಮದಾಸ್‌ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಹಾಗೂ ತಾಲೂಕು ಜೆಡಿಎಸ್‌ ವೀಕ್ಷಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಜೆಡಿಎಸ್‌ ತ್ಯಜಿಸಿದ ದಿನದಿಂದಲೂ ನಾರಾಯಣಗೌಡ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಇದ್ದಾರೆ. ಇವರ ಅಸಂಬದ್ಧ ಮಾತುಗಳಿಗೆ 2023ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಎಲ.ದೇವರಾಜು ಮಾತನಾಡಿ, ದೇವೇಗೌಡ ಕೃಪಾಕಟಾಕ್ಷದಿಂದ ನಾರಾಯಣಗೌಡ ಎರಡು ಅವಧಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಲ್ಲೂ ಇದ್ದವನನ್ನು ಕರೆತಂದು ಕ್ಷೇತ್ರದ ಶಾಕರನ್ನಾಗಿಸಿದ್ದು ದೇವೇಗೌಡರ ಕುಟುಂಬ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅಭಿವೃದ್ಧಿಗೆ ಜೆಡಿಎಸ್‌ ನಾಯಕರು ಸಹಕರಿಸದಿದ್ದರೆ ನಾರಾಯಣಗೌಡ ಎರಡನೇ ಅವಧಿಗೆ ಸಿ.ಫಾರಂ ತಂದು ಜೆಡಿಎಸ್‌ ಚಿಹ್ನೆಯ ಮೇಲೆ ಸ್ಪರ್ಧಿಸುವ ಅಗತ್ಯವಾದರೂ ಏನಿತ್ತು. ರೇವಣ್ಣ ನಮ್ಮನ್ನು ದನಗಳನ್ನು ಗದರುವಂತೆ ಗದರುತ್ತಿದ್ದರು ಹೇಳುತ್ತಾರೆ. ಇವರಿಗೆ ಆತ್ಮ ಗೌರವವಿದಿದ್ದರೆ ರೇವಣ್ಣ ಗದರಿದ ತಕ್ಷಣವೇ ಪಕ್ಷ ಬಿಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್‌. ಪೇಟೆ ಕ್ಷೇತ್ರಕ್ಕೆ ಸಚಿವರಾಗಿ ನಾರಾಯಣಗೌಡ ಮಾಡಲಾಗದಷ್ಟುಅಭಿವೃದ್ಧಿ ಕೆಲಸಗಳನ್ನು ದೇವೇಗೌಡರ ಕುಟುಂಬ ಮಾಡಿದೆ. ಸಚಿವರಾಗಿ ಕೆ.ಸಿ.ನಾರಾಯಣಗೌಡ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿಲ್ಲ. ಜೆಡಿಎಸ್‌ನಲ್ಲಿದ್ದಾಗ ಅಭಿವೃದ್ಧಿಗೆ ರೇವಣ್ಣ ಸಹಕರಿಸಲಿಲ್ಲ ಎಂದು ದೂರುತ್ತಿರುವ ನೀವು ಈಗ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

Karnataka Politics: ಸಿದ್ದರಾಮಯ್ಯ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದೀರಿ. ಅತಿವೃಷ್ಟಿಯಿಂದ ಹಾನಿಗೀಡಾದ ರಸ್ತೆಗಳು, ಸೇತುವೆಗಳು ಮತ್ತು ಒಡೆದು ಹೋದ ಕೆರೆಗಳ ಪುನರ್‌ ನಿರ್ಮಾಣಕ್ಕೆ ಮುಂದಾಗಿಲ್ಲ. ಬಿಜೆಪಿ ಸೇರಿದ ಮೇಲೂ ರೇವಣ್ಣ ನಿಮ್ಮ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆಯೇ?. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದ್ದರೂ ಕೆಲಸ ಮಾಡಲಾಗದ ನೀವು ಕ್ಷೇತ್ರದಲ್ಲಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದೀರಿ. ಜೆಡಿಎಸ್‌ ವರಿಷ್ಠರ ಬಗ್ಗೆ ಅಸಂಬದ್ಧ ಮಾತುಗಳನ್ನು ಆಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್‌ ವಕ್ತಾರ ಜಿ.ಪಿ.ಅಶ್ವಿನ್‌ಕುಮಾರ್‌, ರಾಜ್ಯ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಶೀಳನೆರೆ ಮೋಹನ್‌, ಮನ್ಮುಲ್‌ ನಿರ್ದೇಶಕ ಎಚ್‌.ಟಿ.ಮಂಜು, ಮುಖಂಡರಾದ ಬಸ್‌ ಕೃಷ್ಣೇಗೌಡ, ಬಸ್‌ ಸಂತೋಷ್‌ಕುಮಾರ್‌, ಬಿ.ಎಂ.ಕಿರಣ್‌, ಅಕ್ಕಿಹೆಬ್ಬಾಳು ರಘು, ಎಂ.ಬಿ.ಹರೀಶ್‌, ಮಲ್ಲೇನಹಳ್ಳಿ ಮೋಹನ್‌, ಬಲ್ಲೇನಹಳ್ಳಿ ರಾಮಚಂದ್ರ, ತೆರ್ನೇನಹಳ್ಳಿ ಬಲದೇವ್‌, ಅಗ್ರಹಾರಬಾಚಹಳ್ಳಿ ನಾಗೇಶ್‌, ದರ್ಶನ್‌ ಸೇರಿದಂತೆ ಹಲವರು ಇದ್ದರು.
 

Follow Us:
Download App:
  • android
  • ios