Karnataka Politics: ಸಿದ್ದರಾಮಯ್ಯ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ

ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗ್ತೀವಿ ಎನ್ನುತ್ತಿರುವವರಿಗೆ ಕ್ಷೇತ್ರ ಹುಡುಕಾಡುವ ದೈನೇಸಿ ಸ್ಥಿತಿ ಏಕೆ ಬಂತು? ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಸ್ಪರ್ಧಿಸುವ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ್‌ ಸಿಂಹ ತಿರುಗೇಟು ನೀಡಿದರು.

Wich Is Siddaramaiah constituency   Ask Pratap Simha snr

  ಮೈಸೂರು (ಡಿ.13 ): ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗ್ತೀವಿ ಎನ್ನುತ್ತಿರುವವರಿಗೆ ಕ್ಷೇತ್ರ ಹುಡುಕಾಡುವ ದೈನೇಸಿ ಸ್ಥಿತಿ ಏಕೆ ಬಂತು? ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಸ್ಪರ್ಧಿಸುವ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ್‌ ಸಿಂಹ ತಿರುಗೇಟು ನೀಡಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Election)  ನಾವು ಯಾವುದೇ ಪ್ರಚಾರ ಮಾಡದಿದ್ದರೂ ಕುಳಿತುಕೊಂಡೇ ಗೆಲ್ಲುತ್ತೇವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Soddaramaiah)  ಹೇಳಿಕೆಗೆ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಕೋಲಾರಕ್ಕೆ ಹೋಗಲೋ, ವರುಣಕ್ಕೆ ಹೋಗಲೋ ಎನ್ನುತ್ತಿರುವ ಸಿದ್ದರಾಮಯ್ಯ, ವರುಣ ಕ್ಷೇತ್ರದ ಸಣ್ಣ ಸಣ್ಣ ಹಳ್ಳಿಗಳಿಗೆ ಏಕೆ ಭೇಟಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ವರುಣ ಬಿಟ್ಟು ಬೇರೆಲ್ಲಿಂದಾದರೂ ಸ್ಪರ್ಧಿಸಲಿ. ಮತ್ತೊಮ್ಮೆ ಬಾದಾಮಿಯಿಂದ ಸ್ಪರ್ಧಿಸಿ ಗೆಲ್ಲಲಿ. ಪ್ರತಿ ಚುನಾವಣೆಯಲ್ಲೂ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಡುವ ವ್ಯಕ್ತಿಯ ಮಾತಿಗೆ ಹೆಚ್ಚಿನ ಮನ್ನಣೆ ಕೊಡುವ ಅಗತ್ಯವಿಲ್ಲ ಎಂದರು.

ಗುಜರಾತ್‌ನಲ್ಲಿ ಕಳೆದ 27 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಇತಿಹಾಸದಲ್ಲೇ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಸಿದ್ದಾರೆ. ದೇಶದ ನಾಯಕ ಮೋದಿಯವರ ನಾಯಕತ್ವದ ಮೇಲೆ ಅಚಲವಾದ ವಿಶ್ವಾಸ ತೋರಿಸಿದ್ದಾರೆ. ಮೋದಿಯವರು ಕರ್ನಾಟಕಕ್ಕೆ ಬಂದಾಗಲೂ ಅವರ ಅಭಿಮಾನಿಗಳ ದೊಡ್ಡ ಗುಣ ಅವರ ಪರ ಧ್ವನಿ ಎತ್ತುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಮಂದಿಯನ್ನು ಕರ್ನಾಟಕದ ಜನ ಮೋದಿ ಅವರ ಹೆಸರಿನಲ್ಲಿ ಗೆಲ್ಲಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರವನ್ನು ಜನರು ಮುಂದುವರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೆ ಕಾಂಗ್ರೆಸ್‌ನಿಂದ ಗಾಳ

ಆನಂದ್‌ ಎಂ. ಸೌದಿ

ಯಾದಗಿರಿ(ಡಿ.10):  ಕಳೆದ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್‌ ತೊರೆದು ವಿವಿಧ ಪಕ್ಷ ಸೇರಿದ್ದ ಹಿರಿತಲೆ ಮುಖಂಡರಿಗೆ ಮತ್ತೆ ಮೂಲ ಪಕ್ಷಕ್ಕೆ ವಾಪಸ್‌ ಕರೆತರಲು ‘ಕೈ’ ಪಡೆ ಗಂಭೀರ ಚಿಂತನ-ಮಂಥನ ನಡೆಸಿದೆ. ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ಬೆಳವಣಿಗೆಗಳು ಕಾಂಗ್ರೆಸ್ಸಿಗೆ ವರದಾನವಾಗಲಿದೆ ಎಂಬ ಅಂಶಗಳನ್ನು ಆಂತರಿಕ ಸರ್ವೆಯಲ್ಲಿ ಕಂಡುಕೊಳ್ಳಲಾಗಿದೆ ಎನ್ನಲಾಗಿದೆ.

ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷರಾದ ಮೇಲೆ ಇಂತಹ ಚಟುವಟಿಕೆಗಳಿಗೆ ಮತ್ತಷ್ಟು ಜೀವ ಬಂದಿದೆ. ಇದಕ್ಕೆ ಅವರೂ ಸಹ ತಲೆಯಾಡಿಸಿದ್ದಾರೆನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ‘ಘರ್‌ ವಾಪ್ಸಿ’ ಕಾರ್ಯಕ್ರಮಗಳು ನಡೆದರೆ ಅಚ್ಚರಿ ಪಡೆಬೇಕಿಲ್ಲ.

TICKET FIGHT: ಕುತೂಹಲ ಮೂಡಿಸಿರುವ ಯಾದಗಿರಿ ಜಿಲ್ಲೆಯ ರಾಜಕೀಯ ಜಿದ್ದಾಜಿದ್ದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈಗಾಗಲೇ ಅನೇಕರನ್ನು ಸಂಪರ್ಕಿಸಿದ್ದು, ಮತ್ತೇ ಎಲ್ಲರೂ ಒಂದಾಗೋಣ ಎಂಬ ಸಂದೇಶ ಆಪ್ತ ವಲಯದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್‌ ಪಕ್ಷ ತ್ಯಜಿಸಿ ವಿವಿಧ ಪಕ್ಷಗಳಿಗೆ ಪಕ್ಷಾಂತರಗೊಂಡವರನ್ನು ಮನ ಓಲೈಸಲಾಗುತ್ತಿದೆ. ಸಮಾನಮನಸ್ಕರು ಒಂದಾದರೆ ಮತ್ತೇ ಹಿಂದಿನ ವೈಭವ ಮರುಕಳಿಸಬಹುದು ಎಂಬ ಮಾತುಗಳಿಂದ ಪಕ್ಷಾಂತರಿಗಳಲ್ಲಿಯೂ ಹೊಸ ಆಶಾಭಾವ ಮೂಡಿ, ಮತ್ತೆ ಮೂಲನೆಲೆಗೆ ವಾಪಸ್ಸಾಗಲು ಸಿದ್ಧತೆ ನಡೆಸಿದಂತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಅವರನ್ನು ಸಂಪರ್ಕಿಸಿರುವ ಡಿಕೆಶಿ, ಕಾಂಗ್ರೆಸ್‌ ರಾಜಕೀಯಕ್ಕೆ ಮರಳುವಂತೆ ಕೋರಿದ್ದಾರೆ ಎಂಬ ದಟ್ಟವಾದ ಮಾತುಗಳಿವೆ. ಡಾ. ರೆಡ್ಡಿ ಅವರ ಪುತ್ರಿ ಡಾ. ಅನುರಾಗಾ ಮೂಲಕ ಇಲ್ಲಿ ಮತ್ತೆ ಕೈಪಡೆ ನೆಲೆಯೂರಲು ಪ್ರಯತ್ನ ಸಾಗಿದೆ.

Assembly Election: ಯಾದಗಿರಿ ಕಾಂಗ್ರೆಸ್ ಟಿಕೆಟ್‌ಗೆ 17 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ..!

ಯಾದಗಿರಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅನೇಕರು ಅರ್ಜಿ ಸಲ್ಲಿಸಿದ್ದಾರಾದರೂ, ‘ಕೈ’ ಕಮಾಂಡ್‌ ಡಾ. ರೆಡ್ಡಿ ಅವರ ಪುತ್ರಿಯ ಚುನಾವಣೆ ಸ್ಪರ್ಧಿಸುವ ಅರ್ಜಿಯನ್ನು ಕರೆದು ಪಡೆದಿದ್ದು ವಿಶೇಷ. ಹಿಂದಿನ ಮರೆತು ಖರ್ಗೆಯವರು ಇದಕ್ಕೆ ಹಸಿರು ನಿಶಾನೆ ತೋರುವರೇ ಎಂಬ ಕುತೂಹಲ ಮೂಡಿದೆ. ಹಿರಿತನ ಕಡೆಗೆಣಿಸಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್‌ ಬಿಟ್ಟಿದ್ದೆ ಎಂದಿರುವ ಡಾ. ಮಾಲಕರೆಡ್ಡಿ, ಖರ್ಗೆಯವರ ವಿಚಾರದಲ್ಲಿ ನನಾಗವ ವೈಯಕ್ತಿಕ ದ್ವೇಷವೇ ಇಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios