ಸುಳ್ಳು ಹೇಳುವುದು ಕಾಂಗ್ರೆಸ್‌ನ ಜಾಯಮಾನ: ಸಚಿವ ಗೋವಿಂದ ಕಾರಜೋಳ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. 

minister govind karajol outraged against congress at bagalkote gvd

ಲೋಕಾಪುರ (ಡಿ.25): ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಪಟ್ಟಣ ಪಂಚಾಯಿತಿಯಲ್ಲಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು ಕಾಂಗ್ರೆಸ್‌ ಪಕ್ಷದ ಸುಳ್ಳು ಪ್ರಚಾರಕ್ಕೆ ನಮ್ಮ ಕಾರ್ಯಕರ್ತರು ಸ್ಪಷ್ಟಉತ್ತರ ಕೊಡಬೇಕು. ನಮ್ಮ ಸರ್ಕಾರಗಳ ಜನಪರ ಕೆಲಸಗಳನ್ನು ತಿಳಿಸುವ ಕೆಲಸ ಮಾಡಬೇಕು ಕಾಂಗ್ರೆಸ್‌ ಪಕ್ಷದವರು ಹತ್ತು ಬಾರಿ ಸುಳ್ಳನ್ನು ಹೇಳಿ ಅದನ್ನು ಸತ್ಯವೆಂದು ಬಿಂಬಿಸಲು ಮುಂದಾಗಿದ್ದಾರೆ. ಆದರೆ, ಅದನ್ನು ಜನರು ನಂಬುತ್ತಿಲ್ಲ.

ಆದರೂ ಅದನ್ನು ತಪ್ಪಿಸಲು ನಾವು ಹೆಚ್ಚು ಜಾಗೃತರಾಗಬೇಕು, ಇದಕ್ಕಾಗಿ ನಮ್ಮ ವಿಷಯಗಳನ್ನು ಸಮರ್ಥವಾಗಿ ಹಾಗೂ ಸಕಾಲಿಕವಾಗಿ ಜನರಿಗೆ ತಲುಪಿಸಬೇಕು ಎಂದು ಕಿವಿಮಾತು ಹೇಳಿದರು. ಸರ್ಕಾರದ ಕಾರ್ಯಕ್ರಮಗಳು ಮತ್ತು ಪಕ್ಷದ ವಿಚಾರಧಾರೆಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಪಟ್ಟಣದಲ್ಲಿ ನಡೆದಿರುವ ಚರಂಡಿ ಮತ್ತು ರಸ್ತೆ ಕಾಮಗಾರಿಗಳ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾವುದೇ ಕಾಮಗಾರಿಗೆ ಎಲ್ಲರ ಸಹಕಾರ ಅತ್ಯಗತ್ಯ. ಪಟ್ಟಣ ಅಭಿವೃದ್ಧಿ ಮಾಡುವದೇ ನನ್ನ ಗುರಿ ಅಧಿಕಾರಿಗಳಿಗೆ ಪೂರ್ಣ ಮಾಹಿತಿಯನ್ನು ನೀಡಿದ್ದೇನೆ. 

ಕರ್ನಾಟಕಕ್ಕೆ ನೀರು ನಿಲ್ಲಿಸಲು ಯಾರಪ್ಪನಿಂದಲೂ ಆಗದು: ಸಚಿವ ಗೋವಿಂದ ಕಾರಜೋಳ

ಸರಕಾರದಿಂದ ಎಷ್ಟು ಹಣ ಬೇಕಾದರೂ ಕೊಡಲು ಸಿದ್ಧನಿದ್ದೇನೆ. ಆದರೆ, ತ್ವರಿತವಾಗಿ ಪಾರದರ್ಶಕವಾಗಿ ಕಾಮಗಾರಿಗಳು ನಡೆಯಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಹೇಳಿದರು. ಪಟ್ಟಣ ಪಂಚಾಯತಿ ಆದ ಮೇಲೆ ಸಾರ್ವಜನಿಕರಿಂದ ಸಾಕಷ್ಟುಸಮಸ್ಯೆಗಳು ಉದ್ಭವಾಗಿವೆ. ಅದನ್ನು ಸರಿಪಡಿಸಲು ಪ.ಪಂ. ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ನಿಮಗೆ ಬೇಕಾದ ಸವಲತ್ತುಗಳನ್ನು ನೀಡಲು ಸಿದ್ಧನಿದ್ದೇನೆ ಯಾವುದೇ ಹೇಳಿಕೆಗಳನ್ನು ನೀಡದೇ ಕಾರ್ಯಪ್ರವರ್ತರಾಗಿ ಕಾರ್ಯನಿರ್ವಹಿಸಬೇಕು ಎಂದರು. 

ಮತದಾರ ಯಾದಿಯಲ್ಲಿ ಪಕ್ಷದ ಕಾರ್ಯಕರ್ತರ ಹೆಸರನ್ನು ತೆಗೆಯಲು ಅರ್ಜಿ ಕೊಡುತ್ತಿರುವುದು ಕಂಡು ಬಂದಿದೆ. ಇದರ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಸಂಬಂಧಪಟ್ಟಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೇನೆ ಎಂದರು. ಜಾಲಿಕಟ್ಟಿ ಬಿ.ಕೆ. ಹಾಗು ಜಾಲಿಕಟ್ಟಿಕೆ.ಡಿ. ಗ್ರಾಮಗಳ ಪಹಣಿ ಉತಾರೆ ಕುರಿತು ಕೇಳಿದ ಸಾರ್ವಜನಿಕರು ಪ.ಪಂ. ಅಧಿಕಾರಿಗಳಿಂದ ಸ್ಪಷ್ಟಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಸಚಿವರ ಮುಂದೆ ತಮ್ಮ ಗ್ರಾಮದ ಅಳಲನ್ನು ತೋಡಿಕೊಂಡಿದ್ದು ಕಂಡು ಬಂದಿತು. ಆದಷ್ಟು ಬೇಗ ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಜಿ.ಪಂ ಮಾಜಿ ಸದಸ್ಯರಾದ ಬಿ.ವಿ.ಹಲಕಿ, ಭೀಮನಗೌಡ ಪಾಟೀಲ, ಯಮನಪ್ಪ ಹೊರಟ್ಟಿ, ಬಿ.ಎಲ್‌.ಬಬಲಾದಿ, ಹಣಮಂತಗೌಡ ಪಾಟೀಲ, ವಕೀಲರಾದ ಸಂಗಮೇಶ ಪಲ್ಲೇದ, ಸದಾಶಿವ ಹಗ್ಗದ, ವಿನೋದ ಘೋರ್ಪಡೆ, ಹಣಮಂತ ಕುಡಚಿ, ಅರುಣ ಮುಧೋಳ, ವಸಂತಗೌಡ ಪಾಟೀಲ, ದುರ್ಗಪ್ಪ ಮಾದರ, ಮಂಜುನಾಥ ಪಾಟೀಲ, ತಹಶೀಲ್ದಾರ ವಿನೋದ ಹತ್ತಳ್ಳಿ, ಮುಧೋಳ ನಗರಸಭೆ ಪೌರಾಯುಕ್ತ ಶಿವಪ್ಪ ಅಂಬಿಗೇರ, ತಾ.ಪಂ ಇಒ ಕಿರಣ ಘೋರ್ಪಡೆ, ಸಿಪಿಐ ಅಯ್ಯನಗೌಡ ಪಾಟೀಲ, ಪಪಂ ಅಧಿಕಾರಿ ಮಾರುತಿ ನಡುವಿನಕೇರಿ, ಪಿಎಸೈ ಮಲ್ಲಿಕಾರ್ಜುನ ಬಿರಾದರ ಮತ್ತಿತರು ಇದ್ದರು.

ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿ: ಪ್ರತಿಯೊಬ್ಬ ಮಕ್ಕಳು ಉತ್ತಮವಾದ ಶಿಕ್ಚಣ ಪಡೆದು ಸುಸಂಸ್ಕೃತರಾಗಿ ಪ್ರಪಂಚದಲ್ಲಿ ಉನ್ನತ ಸ್ಥಾನವನ್ನು ಹೊಂದಬೇಕೆಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಸಮೀಪದ ಮುದ್ದಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯ 1.27 ಕೋಟಿ ಅನುದಾನದಡಿ ನೂತನ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಉದ್ಘಾಟನೆ ಹಾಗೂ ಹೆಬ್ಬಾಳ ಗ್ರಾಮದ ಎಸ್‌ಸಿ ಮತ್ತು ಎಸ್‌ಟಿ ಫಲಾನುಭಾವಿಗಳ ಜಮಿನುಗಳಿಗೆ .2.38 ಕೋಟಿ ವೆಚ್ಚದಲ್ಲಿ ಕೊಳವೆಬಾವಿ ಕೊರೆಯುವ ಕಾಮಗಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅವರು ಇಂದು ಮುಧೋಳ ತಾಲೂಕಿನ ಬಡವರ 10 ಸಾವಿರ ಮಕ್ಕಳು ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಂದು ಕಾಲದಲ್ಲಿ ಒಂದು ಕಾಲದಲ್ಲಿ ಶ್ರೀಮಂತರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಕಳುಹಿಸಲು ನಿರಾಕರಿಸುತ್ತಿದ್ದರು. ಅವರೇ ಇಂದು ತಮ್ಮ ಮಕ್ಕಳನ್ನು ವಸತಿ ಶಾಲೆಗೆ ಸೇರಿಸಲು ನನ್ನ ಜೊತೆ ಜಗಳವಾಡುವಂತಾಗಿದೆ ಕಾರಣ ವಸತಿ ಶಾಲೆಗಳಲಿನ ಮೂಲಭೂತ ಸೌಕರ್ಯ, ಗುಣಮಟದ ಶಿಕ್ಷಣ, ಸುಸಜ್ಜಿತ ಶಾಲಾ ಕಟ್ಟಡ ನೀಡಿರುವುದರಿಂದ ಶ್ರೀಮಂತರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಲು ಇಂದು ಪೈಪೋಟಿ ನಡೆಸಿದ್ದಾರೆ.

ನಾನು ಮುಧೋಳ ಕ್ಷೇತ್ರದ ಶಾಸಕನಾದ ಮೇಲೆ ತಾಲೂಕಿನಲ್ಲಿ 76 ಪ್ರೌಢಶಾಲೆಗಳನ್ನು, 5 ಪದವಿಪೂರ್ವ ಕಾಲೇಜುಗಳನ್ನು, 3 ಪದವಿ ಕಾಲೇಜನ್ನು, 35 ಹಾಸ್ಟೇಲ್‌ಗಳನ್ನು ಮತ್ತು 1 ಪಾಲಿಟೆಕ್ನಿಕ ಕಾಲೇಜನ್ನು ನಿರ್ಮಾಣ ಮಾಡಿ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದೆ. ನಾನು ಪ್ರಥಮ ಬಾರಿಗೆ ಶಾಸಕನಾದಾಗ 80 ಹಳ್ಳಿಗಳಲ್ಲಿ ಕುಡಿಯಲು ಟ್ಯಾಂಕರ್‌ ಮೂಲಕ ನೀರನ್ನು ಪೂರೈಸುವ ವ್ಯವಸ್ಥೆಯಿತ್ತು. ಬಂಜರವಿದ್ದ ಜಮೀನುಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಿ ಎಲ್ಲ ರೈತರ ಜಮೀನುಗಳನ್ನು ನೀರಾವರಿ ಮಾಡಿದ್ದೇನೆ.

ಸಿದ್ದು ತಮ್ಮ ಆಡಳಿತದಲ್ಲಿ ಬೆಳಗಾವಿ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ?: ಸಚಿವ ಕಾರಜೋಳ

ಪ್ರತಿ ವರ್ಷ 5 ಲಕ್ಷ ಟನ್‌ ಬೆಳೆಯುತ್ತಿದ ಕಬ್ಬನ್ನು ಇಂದು 1 ಕೋಟಿ ಟನ್‌ ಬೆಳೆಯುವಂತೆ ಮಾಡಿದ್ದೇನೆ. ಪ್ರತಿಯೊಬ್ಬರ ಜಮೀನುಗಳ ಮುಂದೆ ರಸ್ತೆಗಳನ್ನು ಮಾಡಿ ರೈತರ ಜಮೀನುಗಳಿಗೆ ಬೆಲೆ ಹೆಚ್ಚು ಬರುವಂತೆ ಮಾಡಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಕಸಬಾ ಜಂಬಗಿ ಗ್ರಾಮದ ರುದ್ರಮುನಿ ಶಿವಾಚಾರ್ಯರ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡರಾದ ಕಲ್ಲಪ್ಪ ಸಬರದ, ರಾಮಣ್ಣ ತಳೇವಾಡ, ಕುಮಾರ ಹುಲಕುಂದ, ರಾಜು ಯಡಹಳ್ಳಿ, ಹಣಮಂತ ತುಳಸಿಗೇರಿ, ಕೆ.ಆರ್‌.ಮಾಚಪ್ಪನವರ, ಸಂಜು ತಳೆವಾಡ, ತಹಶೀಲ್ದಾರ ವಿನೋದ ಹತ್ತಳ್ಳಿ, ತಾ.ಪಂ ಇಒ ಕಿರಣ ಘೋರ್ಪಡೆ ಹಾಗೂ ಗ್ರಾಮಸ್ಥರು ಇದ್ದರು.

Latest Videos
Follow Us:
Download App:
  • android
  • ios