ಕರ್ನಾಟಕಕ್ಕೆ ನೀರು ನಿಲ್ಲಿಸಲು ಯಾರಪ್ಪನಿಂದಲೂ ಆಗದು: ಸಚಿವ ಗೋವಿಂದ ಕಾರಜೋಳ
ನೆರೆಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ನಾಟಕ ವಿರುದ್ಧ ಹೇಳಿಕೆ ನೀಡಿದ ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್ ಜನಪ್ರತಿನಿಧಿಯಾಗಲು ಆಯೋಗ್ಯ. ಕರ್ನಾಟಕಕ್ಕೆ ಲಭ್ಯವಾಗಬೇಕಿರುವ ನೀರನ್ನು ನಿಲ್ಲಿಸಲು ಅವನ ಅಪ್ಪನಿಂದಲೂ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಸುವರ್ಣಸೌಧ (ಡಿ.22): ನೆರೆಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ನಾಟಕ ವಿರುದ್ಧ ಹೇಳಿಕೆ ನೀಡಿದ ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್ ಜನಪ್ರತಿನಿಧಿಯಾಗಲು ಆಯೋಗ್ಯ. ಕರ್ನಾಟಕಕ್ಕೆ ಲಭ್ಯವಾಗಬೇಕಿರುವ ನೀರನ್ನು ನಿಲ್ಲಿಸಲು ಅವನ ಅಪ್ಪನಿಂದಲೂ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಣೆಕಟ್ಟು ಎತ್ತರ ಹೆಚ್ಚಿಸಿ, ಕರ್ನಾಟಕಕ್ಕೆ ನೀರು ಬಿಡಬಾರದು ಎಂಬ ಹೇಳಿಕೆ ಮತ್ತು ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿರುವುದು ಖಂಡನಾರ್ಹ.
ನೀರು ಅವರ ಆಸ್ತಿಯಲ್ಲ, ಅವರ ಅಪ್ಪನ ಆಸ್ತಿಯೂ ಅಲ್ಲ. ಅಣೆಕಟ್ಟು ಎತ್ತರ ಹೆಚ್ಚಳ ಮಾಡುವುದು ಆತನಿಗೆ ಸಂಬಂಧಿಸಿದ್ದಲ್ಲ. ಅಣೆಕಟ್ಟು ಅವರಿಗೆ ಸೇರಿದ್ದಲ್ಲ. ಸದನದಲ್ಲಿ ಸರಿಯಾಗಿ ಮಾತನಾಡಬೇಕು ಎಂದು ಹೇಳಿದರು. ಗೂಂಡಾಗಿರಿ ನಡವಳಿಕೆ ಸರಿಯಲ್ಲ. ಆತ ಸುಸಂಸ್ಕೃತರಾಗಿದ್ದರೆ ಮಾತ್ರ ಸಮಾಜ ಸೇವೆಗೆ ಯೋಗ್ಯ. ಇಲ್ಲವೆಂದರೆ ಬಸ್ ಸ್ಟಾ್ಯಂಡ್‌ನಲ್ಲಿರುವುದಕ್ಕೆ ಯೋಗ್ಯನಿದ್ದಾನೆ. ಗಡಿಯಲ್ಲಿ ನೆಲೆಸಿರುವವರು ನೆಮ್ಮದಿಯಿಂದ ಇದ್ದಾರೆ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿರುವವರಿಗೆ ಸಮಸ್ಯೆಯಾಗಲಿದೆ. ಎರಡು ರಾಜ್ಯದವರಿಗೂ ಯಾವುದೇ ರೀತಿಯ ಸಮಸ್ಯೆಯಾಗಬಾರದು. ಪ್ರವಾಸಿಗರು, ಕೂಲಿ-ನಾಲಿ ಮಾಡುವವರಿಗೆ ತೊಂದರೆಯಾಗಬಾರದು.
ಕರ್ನಾಟಕಕ್ಕೆ ನೀರು ಬಂದ್: ಮಹಾರಾಷ್ಟ್ರ ಸಚಿವ ಶಂಭುರಾಜ್ ಧಮಕಿ
ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದರು. ಗಡಿ ಜತೆಗೆ ನೀರಿನ ಕ್ಯಾತೆ ತೆಗೆಯಲಾಗಿದೆ. ನೀರನ್ನು ತಡೆಯುವುದಕ್ಕೆ ಕೆಟ್ಟಭಾಷೆಯಲ್ಲಿ ಹೇಳುವುದಾದರೆ ಅವರ ಅಪ್ಪನಿಂದಲೂ ಸಾಧ್ಯವಿಲ್ಲ. ನೀರಿನ ವಿಚಾರದ ನ್ಯಾಯಾಧಿಕರಣದಲ್ಲಿ ತೀರ್ಮಾನವಾಗಿದೆ. ನೀರಿನ ಸಂಬಂಧ ಯಾರು ಹೇಳಿದ್ದಾರೋ, ಅದು ಅವರ ಅಪ್ಪನಿಂದಲೂ ಸಾಧ್ಯವಿಲ್ಲ. ಅವನೊಬ್ಬ ಮೂರ್ಖ ಎಂದು ವಾಗ್ದಾಳಿ ನಡೆಸಿದರು. ನಮ್ಮ ನೆಲದಲ್ಲಿರುವವರ ಭಾಷೆ, ಮರಾಠಿಯಾಗಿರಬಹುದು. ಆದರೆ, ಅವರು ಕನ್ನಡ ತಾಯಿಯ ಮಕ್ಕಳು. ಇದನ್ನು ಈಗಾಗಲೇ ಸಾಬೀತು ಮಾಡಿ ತೋರಿಸಿದ್ದಾರೆ. ವಿಶ್ವಕನ್ನಡ ಸಮ್ಮೇಳನ ಮತ್ತು ಚುನಾವಣೆ ವೇಳೆಯಲ್ಲಿ ಸಾಬೀತು ಮಾಡಿದ್ದಾರೆ. ಎಂಇಎಸ್ ಪುಂಡರನ್ನು ಗೆಲ್ಲಿಸಿಲ್ಲ. ಎಲ್ಲರನ್ನು ಹೊರಗಟ್ಟಿದ್ದಾರೆ ಎಂದರು.
ವರಿಷ್ಠರು ಒಪ್ಪಿದರೆ ಜಾರಕಿಹೊಳಿ, ಈಶ್ವರಪ್ಪಗೆ ಶೀಘ್ರ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ
ಬೊಮ್ಮಾಯಿ ಬೆಂಕಿ ಹಚ್ಚಿದ್ದಾರೆ: ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಗಡಿವಿವಾದದ ಕುರಿತು ಉದ್ಧವ್ ಠಾಕ್ರೆ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ದೇಶದ ಗಡಿಯಲ್ಲಿ ಭಾರತಕ್ಕೆ ಚೀನಾ ಪ್ರವೇಶಿಸಿದಂತೆ, ಮಹಾರಾಷ್ಟ್ರವು ಕರ್ನಾಟಕ ಪ್ರವೇಶಿಸಲಿದೆ’ ಎಂದಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚೀನಾದಂತೆ ನಾವು ಕರ್ನಾಟಕ ಪ್ರವೇಶಿಸಲಿದ್ದೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ, ನಾವು ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಕಿಡಿಕಾರಿದರು. ಅಲ್ಲದೆ, ‘ಮಹಾರಾಷ್ಟ್ರ ಸರ್ಕಾರ ಈ ವಿಚಾರದಲ್ಲಿ ದುರ್ಬಲವಾಗಿದೆ’ ಎಂದೂ ಆರೋಪಿಸಿದರು.