ಬಿಜೆಪಿ ಕಾಲದಲ್ಲೂ ಬಾಂಬ್‌ ಸ್ಫೋಟ ಆಗಿಲ್ಲವೇ?: ದಿನೇಶ್‌ ಗುಂಡೂರಾವ್‌

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಯಾವುದೇ ಒತ್ತಡ, ಸೂಚನೆ ಪಕ್ಷದಿಂದ ಬಂದಿಲ್ಲ. ಕೆಲ ಕ್ಷೇತ್ರಗಳಿಂದ ಶಾಸಕರು, ಸಚಿವರು ಸ್ಪರ್ಧಿಸುವ ಕುರಿತು ಚರ್ಚೆಯಾಗುತ್ತಿದೆ. ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷ ಸ್ಪರ್ಧಿಸುವಂತೆ ಸೂಚಿಸಿದರೆ ಅಸಮಾಧಾನ ಯಾಕೆ ಎಂದು ಪ್ರಶ್ನಿಸಿದ ಗುಂಡೂರಾವ್ 

Minister Dinesh Gundu Rao Slams BJP grg

ಮಂಗಳೂರು(ಮಾ.10): ಬಿಜೆಪಿ ಸರ್ಕಾರ ಇದ್ದಾಗಲೂ ಹಲವು ಬಾರಿ ಬಾಂಬ್ ಸ್ಫೋಟ ಪ್ರಕರಣಗಳು ನಡೆದಿವೆ. ಈಗ ನಾವು ಆಡಳಿತದಲ್ಲಿದ್ದೇವೆ, ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ರಾಷ್ಟ್ರೀಯ ತನಿಖಾ ತಂಡ, ರಾಜ್ಯ ಪೊಲೀಸರು ಸೇರಿಕೊಂಡು ತನಿಖೆ ಮಾಡುತ್ತಿದ್ದಾರೆ. ಇದು ಸೂಕ್ಷ್ಮ ಹಾಗೂ ಗಂಭೀರ ವಿಷಯವಾದ ಕಾರಣ ಸರ್ಕಾರ ಯಾವುದೇ ರೀತಿಯ ನಿರ್ಲಕ್ಷ್ಯ ತೋರುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಕಾಲದಲ್ಲಿ ಬಿಜೆಪಿ ಕಚೇರಿ ಸಮೀಪವೇ ಬಾಂಬ್ ಸ್ಫೋಟವಾಗಿತ್ತು. ಶಿವಾಜಿ ನಗರ, ಚರ್ಚ್ ಸ್ಟ್ರೀಟ್ ಹಾಗೂ ಅನೇಕ ಕಡೆ ಬಾಂಬ್ ಸ್ಫೋಟವಾಗಿತ್ತು. ಈ ಬಗ್ಗೆ ಹಚ್ಚು ಚರ್ಚಿಸುವ ಅಗತ್ಯ ಇಲ್ಲ ಎಂದರು. ಇದೀಗ ಕೆಫೆ ಬಾಂಬ್ ಮತ್ತು ಪಾಕ್ ಪರ ಘೋಷಣೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕದ ಹೆಸರು ಹಾಳು ಮಾಡುತ್ತಿದೆ. ಜನರಲ್ಲಿ ಭಯ ಸೃಷ್ಟಿಸಬೇಕು, ಜನ ಇಲ್ಲಿಗೆ ಬಾರದಂತೆ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಬಾಂಬ್ ಬೆಂಗಳೂರು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.

ಜೆರೋಸಾ ಶಾಲೆ ವಿವಾದ: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ, ಬಹಿರಂಗಕ್ಕೆ ಶಾಸಕ ಕಾಮತ್ ಆಗ್ರಹ..!

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಯಾವುದೇ ಒತ್ತಡ, ಸೂಚನೆ ಪಕ್ಷದಿಂದ ಬಂದಿಲ್ಲ. ಕೆಲ ಕ್ಷೇತ್ರಗಳಿಂದ ಶಾಸಕರು, ಸಚಿವರು ಸ್ಪರ್ಧಿಸುವ ಕುರಿತು ಚರ್ಚೆಯಾಗುತ್ತಿದೆ. ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷ ಸ್ಪರ್ಧಿಸುವಂತೆ ಸೂಚಿಸಿದರೆ ಅಸಮಾಧಾನ ಯಾಕೆ ಎಂದು ಗುಂಡೂರಾವ್ ಪ್ರಶ್ನಿಸಿದರು.

Latest Videos
Follow Us:
Download App:
  • android
  • ios