ಜೆರೋಸಾ ಶಾಲೆ ವಿವಾದ: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ, ಬಹಿರಂಗಕ್ಕೆ ಶಾಸಕ ಕಾಮತ್ ಆಗ್ರಹ..!
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಗೆ ತನಿಖೆಯ ಪ್ರಾಥಮಿಕ ವರದಿಯನ್ನು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ್ ಸಲ್ಲಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಗೆ ವರದಿ ಸಲ್ಲಿಕೆಯಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಮಾ.07): ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗಿದೆ. ಐಎಎಸ್ ಅಧಿಕಾರಿ ಡಾ.ಆಕಾಶ್.ಎಸ್ ವರದಿ ಸಲ್ಲಿಕೆ ಮಾಡಿದ್ದಾರೆ.
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಗೆ ತನಿಖೆಯ ಪ್ರಾಥಮಿಕ ವರದಿಯನ್ನು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ್ ಸಲ್ಲಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಗೆ ವರದಿ ಸಲ್ಲಿಕೆಯಾಗಿದೆ. ಮೂರು ದಿನಗಳ ಕಾಲ ಮಂಗಳೂರಿನಲ್ಲಿದ್ದು ತನಿಖೆ ನಡೆಸಿದ್ದ ಐಎಎಸ್ ಅಧಿಕಾರಿ ಡಾ.ಆಕಾಶ್, ಫೆ.19, 20, 21 ರಂದು ಮಂಗಳೂರಿನಲ್ಲಿ ತನಿಖೆ ನಡೆಸಿದ್ದರು. ದ.ಕ ಡಿಡಿಪಿಐ ಕಚೇರಿಯಲ್ಲಿ ಮಕ್ಕಳು, ಪೋಷಕರು ಹಾಗೂ ಇಲಾಖೆ ಅಧಿಕಾರಿಗಳ ವಿಚಾರಣೆ ಮಾಡಿದ್ದರು. ಲಿಖಿತ ಹೇಳಿಕೆಗಳನ್ನು ಐಎಎಸ್ ಅಧಿಕಾರಿ ಡಾ.ಆಕಾಶ್.ಎಸ್ ಗೆ ಸಲ್ಲಿಸಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು, ಜೆರೋಸಾ ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ದ ಶ್ರೀರಾಮನ ಅವಹೇಳನ ಆರೋಪದ ತನಿಖೆ ನಡೆಸಿದ್ದರು. ಭಾರೀ ವಿವಾದ ಸೃಷ್ಟಿಸಿದ್ದ ಜೆರೋಸಾ ಶಾಲೆಯ ಪ್ರಕರಣದಲ್ಲಿ ಪ್ರತಿಭಟನೆ ಮಾಡಿದ್ದ ಶಾಸಕ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ವಿರುದ್ದ ಪ್ರಕರಣ ದಾಖಲಾಗಿತ್ತು. ವಿವಾದವಾಗ್ತಿದ್ದಂತೆ ಐಎಎಸ್ ಅಧಿಕಾರಿಯನ್ನ ಸರ್ಕಾರ ತನಿಖೆಗೆ ನೇಮಿಸಿತ್ತು. ಇದೀಗ ಸಮಗ್ರ ತನಿಖೆಯ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಮಂಗಳೂರು: ಕಡಬ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ, ದುಷ್ಕರ್ಮಿಯ ಬಗ್ಗೆ ಸಿಸಿಟಿವಿಯಲ್ಲಿ ಮಹತ್ವದ ಸಾಕ್ಷಿ!
ಕಾಂಗ್ರೆಸ್ ಸರ್ಕಾರ ರಾಮನನ್ನು ಬೇಕಾದ್ರೆ ಬಿಡ್ತಾರೆ, ಟೀಚರ್ ಅನ್ನ ರಕ್ಷಿಸ್ತಾರೆ: ಕಾಮತ್ ಕಿಡಿ
ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪದ ವರದಿ ಬಹಿರಂಗಕ್ಕೆ ಶಾಸಕ ಕಾಮತ್ ಆಗ್ರಹಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ನೀಡಿದ್ದಾರೆ. ಐಎಎಸ್ ಅಧಿಕಾರಿ ಆಕಾಶ್ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಅಧಿಕಾರಿ ಕೊಟ್ಟ ವರದಿಯನ್ನು ಸರ್ಕಾರ ಮಾಧ್ಯಮದ ಮುಂದೆ ಬಹಿರಂಗ ಮಾಡಬೇಕು. ಈ ವರದಿಯನ್ನು ಮಂತ್ರಿಗಳು, ಅಧಿಕಾರಿಗಳು ಬದಲಿಸಿ ವರದಿ ಕೊಡಬಹುದು. ಕಾಂಗ್ರೆಸ್ ಸರ್ಕಾರ ರಾಮನನ್ನು ಬೇಕಾದ್ರೆ ಬಿಡ್ತಾರೆ, ಟೀಚರ್ ಅನ್ನ ಬದುಕಿಸ್ತಾರೆ. ಕೊಟ್ಟಂಥ ವರದಿ ಬಹಿರಂಗ ಆಗಲಿ, ಮಾಧ್ಯಮಗಳ ಎದುರು ಹೇಳಲಿ. ಅಧಿಕಾರಿ ಎದುರು ಶಿಕ್ಷಕರು, ಮಕ್ಕಳು, ಪೋಷಕರು ಹೇಳಿಕೆ ಕೊಟ್ಟಿದ್ದಾರೆ. ಅದೇ ಹಸ್ತಾಕ್ಷರದ ವರದಿ ಸರ್ಕಾರ ಬಹಿರಂಗ ಮಾಡಲಿ. ನ್ಯಾಯಯುತವಾಗಿ ವರದಿ ತನಿಖೆ ಮಾಡಿ ಶಿಕ್ಷೆ ಕೊಡಲಿ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಯನ್ನ ಕಾಂಗ್ರೆಸ್ ನವರು ಇಲ್ಲ ಅಂದರು. ಆದರೆ ಈಗ ಎಫ್ಎಸ್ ಎಲ್ ವರದಿ ಬಳಿಕ ಅವರ ಪೂರ್ವಗ್ರಹ ಬಯಲಾಗಿದೆ. ಹಾಗಾಗಿ ಜೆರೋಸಾ ವರದಿಯಲ್ಲಿ ಪಿತೂರಿ ಮಾಡದೇ ಮಕ್ಕಳ ಭಾವನೆಗಳನ್ನು ಗೌರವಿಸಿ. ಇವರ ವರದಿ ಆಧಾರದಲ್ಲಿ ಶಿಕ್ಷಣ ಇಲಾಖೆ ಆದೇಶ ಕೊಡಲಿ. ಆಡಳಿತದ ಹಸ್ತಕ್ಷೇಪ ಮಾಡಿ ಯಾರ ಪರವೂ ಆದೇಶ ಮಾಡಬಹುದು. ನನ್ನ ಪ್ರಕಾರ ಸರ್ಕಾರ ಆ ಟೀಚರ್ ಪರ ಆದೇಶ ಕೊಡಬಹುದು. ಪಾಕ್ ಪರ ಘೋಷಣೆಯಲ್ಲೂ ಇದು ಬಯಲಾಗಿದೆ. ಕಾಂಗ್ರೆಸ್ ನ ಕೃಪಾಪೋಷಿತರು ಟೀಚರ್ ಬಳಿ ತೆರಳಿ ಸತ್ಯಶೋಧನೆ ಮಾಡಿದ್ರು. ಸರ್ಕಾರದ ಇದನ್ನ ಬಿಟ್ಟು ಟೀಚರ್ ವಿರುದ್ದವಾಗಿ ಆದೇಶ ಕೊಡಲಿ. ಪೊಲೀಸ್ ಇಲಾಖೆಗೂ ಹೆತ್ತವರು ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಶಿಕ್ಷಣ ಇಲಾಖೆ ಅನುಮತಿ ಕೇಳ್ತಾ ಇದಾರೆ. ನ್ಯಾಯ ಸಮ್ಮತವಾದ ವರದಿಯನ್ನು ಸರ್ಕಾರ ಬಹಿರಂಗ ಮಾಡಲಿ ಎಂದಿದ್ದಾರೆ.