ರಾಜ್ಯಪಾಲರ ವಿರುದ್ಧ ಕಾನೂನು ಮಿತಿಯೊಳಗೆ ಹೇಳಿಕೆ ಕೊಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ಕೋಲ್ಕತಾ: ರಾಜ್ಯಪಾಲರ ವಿರುದ್ಧ ಕಾನೂನು ಮಿತಿಯೊಳಗೆ ಹೇಳಿಕೆ ಕೊಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ರಾಜ್ಯಪಾಲ ಆನಂದ್ ಬೋಸ್ ಬಗ್ಗೆ ಅಪಮಾನಕರ ಅಥವ ತಪ್ಪು ಹೇಳಿಕೆ ನೀಡದಂತೆ ಮಮತಾ ಸೇರಿ ಟಿಎಂಸಿಯ ಮೂವರ ವಿರುದ್ಧ ಆ.14ರಂದು, ಬೋಸ್‌ ಹಾಕಿದ್ದ ಮಾನಹಾನಿ ದಾವೆ ವಿಚಾರಣೆ ವೇಳೆ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು.

ಆ ಆದೇಶವನ್ನು ಬದಲಿಸಿದ ನ್ಯಾ। ಐ.ಪಿ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ, ಕಾನೂನಿನ ಮಿತಿಯೊಳಗೆ ಮಾನಹಾನಿಯಾಗದಂತೆ ರಾಜ್ಯಪಾಲರನ್ನು ಟೀಕಿಸುವ ಅಧಿಕಾರವನ್ನು ದೀದಿಗೆ ನೀಡಿದೆ.

ನೀಟ್‌ ವಿರುದ್ಧ 3ನೇ ರಾಜ್ಯದಿಂದ ನಿರ್ಣಯ ಅಂಗೀಕಾರ; ಕರ್ನಾಟಕ, ತಮಿಳುನಾಡಿಗೆ ಕೈಜೋಡಿಸಿದ್ಯಾರು?