ನೀಟ್ ವಿರುದ್ಧ 3ನೇ ರಾಜ್ಯದಿಂದ ನಿರ್ಣಯ ಅಂಗೀಕಾರ; ಕರ್ನಾಟಕ, ತಮಿಳುನಾಡಿಗೆ ಕೈಜೋಡಿಸಿದ್ಯಾರು?
ಆಗ ನಾವೂ ನೀಟ್ ವಿರೋಧಿಸಿದ್ದೆವು. ಆದರೆ ನಂತರ ಮೋದಿ ಮನಸ್ಸು ಬದಲಿಸಿ ನೀಟ್‌ಗೆ ಕೈಜೋಡಿಸುವಂತೆ ನಮಗೆ ಮನವೊಲಿಸಿದ್ದರು’ ಎಂದು ಆರೋಪಿಸಿದರು
ಕೋಲ್ಕತಾ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ರದ್ದುಗೊಳಿಸಿ ರಾಜ್ಯಗಳಿಗೇ ಪ್ರವೇಶ ಪರೀಕ್ಷೆ ನಡೆಸುವ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪಶ್ಚಿಮ ಬಂಗಾಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.ಇದರೊಂದಿಗೆ ತಮಿಳುನಾಡು ಹಾಗೂ ಕರ್ನಾಟಕದ ಬಳಿಕ ಇಂಥ ನಿರ್ಣಯ ಅಂಗೀಕರಿಸಿದ 3ನೇ ರಾಜ್ಯ ಎನ್ನಿಸಿಕೊಂಡಿದೆ. ಈ ಮೂಲಕ ನೀಟ್ ವಿಚಾರದಲ್ಲಿ ರಾಜ್ಯ-ಕೇಂದ್ರ ಸಂಘರ್ಷ ತಾರಕಕ್ಕೇರಿದೆ. ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರದ ವೇಳೆ ಮಾತನಾಡಿದ ಬೃತ್ಯ ಬಸು, ‘ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರೇ ನೀಟ್ ಅನ್ನು ಕೇಂದ್ರ ಸರ್ಕಾರ ನಡೆಸಬಾರದು ಎಂದು ವಾದಿಸಿದ್ದರು. ಆಗ ನಾವೂ ನೀಟ್ ವಿರೋಧಿಸಿದ್ದೆವು. ಆದರೆ ನಂತರ ಮೋದಿ ಮನಸ್ಸು ಬದಲಿಸಿ ನೀಟ್‌ಗೆ ಕೈಜೋಡಿಸುವಂತೆ ನಮಗೆ ಮನವೊಲಿಸಿದ್ದರು’ ಎಂದು ಆರೋಪಿಸಿದರು.
4 ವಿಪಕ್ಷ ಸಿಎಂ ಬಹಿಷ್ಕಾರ:
ಈ ನಡುವೆ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಲತಾಯಿ ಧೋರಣೆ ತಾಳಿದೆ ಎಂದು ಆರೋಪಿಸಿ ಜು.27ರಂದು ನಡೆಯಲಿರುವ ನೀತಿ ಆಯೋಗದ ಸಭೆ ಬಹಿಷ್ಕರಿಸುವುದಾಗಿ ಆಂಧ್ರ ಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಸೆಕ್ಯುರಿಟಿಯನ್ನು ಕರೆಯಿರಿ, ಇವ್ರನ್ನ ಹೊರಗೆ ಹಾಕಿ; ನೀಟ್ ವಿಚಾರಣೆ ವೇಳೆ ಹಿರಿಯ ವಕೀಲರಿಗೆ ಎಚ್ಚರಿಸಿದ ಸಿಜೆಐ
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ 5 ವರ್ಷ ಜೈಲು
ನೀಟ್ ಪರೀಕ್ಷಾ ಅಕ್ರಮಗಳ ಕೇಂದ್ರಬಿಂದು ಆಗಿರುವ ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ ಹಾಗೂ ಇತರ ಅಕ್ರಮ ಎಸಗಿದರೆ ಕಠಿಣ ಶಿಕ್ಷೆ ವಿಧಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾದವರಿಗೆ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 10 ಲಕ್ಷ ದಂಡ ವಿಧಿಸಲಾಗುತ್ತದೆ. ಬಿಹಾರ ಸಾರ್ವಜನಿಕ ಪರೀಕ್ಷೆಗಳ (ಪಿಇ) (ಅನ್ಯಾಯ ವಿಧಾನಗಳ ತಡೆ) ಮಸೂದೆ, 2024 ಅನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಅವರು ಮಂಡಿಸಿದರು ಮತ್ತು ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಧ್ವನಿ ಮತದಿಂದ ಅಂಗೀಕರಿಸಲಾಯಿತು.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್ ಪರೀಕ್ಷೆಯ ಎಲ್ಲಾ ಉತ್ತರ ಪತ್ರಿಕೆಗಳ ಅಂಕಗಳನ್ನು ಮರುರಣಿಕೆ ಮಾಡಲಾಗುವುದು. ಹೊಸ ಮೆರಿಟ್ ಪಟ್ಟಿಯನ್ನು ಎರಡು ದಿನಗಳಲ್ಲಿ ಪ್ರಕಟ ಮಾಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೇಳಿದೆ.
ನೀಟ್ ರದ್ದು ಮಾಡಿ ತನ್ನದೇ ಪರೀಕ್ಷೆಗೆ ಮುಂದಾದ ಕರ್ನಾಟಕ, ಮರು ಪರೀಕ್ಷೆಗೆ ಸುಪ್ರೀಂ ನಿರಾಕರಣೆ