ಕರ್ನಾಟಕ, ಹಿಮಾಚಲ ಗೆಲ್ಲಿಸಿದ ಮಲ್ಲಿಕಾರ್ಜುನ ಖರ್ಗೆಗೆ I-N-D-I-A ಕೂಟದ ಮುಖ್ಯಸ್ಥ ಸ್ಥಾನ!
ಇಂಡಿಯಾ ಮೈತ್ರಿ ಪಕ್ಷಗಳ ಒಕ್ಕೂಟದ ಸಭೆ ಮುಂಬೈನಲ್ಲಿ ಇಂದು ಆರಂಭಗೊಳ್ಳುತ್ತಿದೆ. ಇಂಡಿಯಾ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆಗೆ ಬಾಸ್ ಪಟ್ಟ ನೀಡಲು ಎಲ್ಲಾ ತಯಾರಿ ನಡೆದಿದೆ.

ಮುಂಬೈ(ಆ.31) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಒಂದಾಗಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟ ಇಂದು ಮುಂಬೈನಲ್ಲಿ ಸಭೆ ಸೇರಿದೆ. ಪಾಟ್ನಾ, ಬೆಂಗಳೂರು ಬಳಿಕ ನಡೆಯುತ್ತಿರುವ ಮೂರನೇ ಸಭೆ ಇದಾಗಿದೆ. ಈ ಸಭೆಯಲ್ಲಿ ಸೀಟು ಹಂಚಿಕೆ, ಮೈತ್ರಿ ಒಕ್ಕೂಟದ ಮುಖ್ಯಸ್ಥ, ಸಂಚಾಲಕ, ಲಾಂಛನ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳು ಹೊರಬೀಳಲಿದೆ. ಇದೀಗ ಇಂಡಿಯಾ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಸ್ಥರಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಇಂದು ನಡೆಯುವ ಸಭೆಯಲ್ಲಿ ಖರ್ಗೆ ಹೆಸರನ್ನು ಪ್ರಸ್ತಾಪಿಸಲು ಕಾಂಗ್ರೆಸ್ ಹಾಗೂ ಯುಪಿಎ ಮೈತ್ರಿ ಕೂಟದ ಪಕ್ಷಗಳು ಮುಂದಾಗಿದೆ. ಇದರ ಹಿಂದೆ ಕಾಂಗ್ರೆಸ್ ಮತ್ತೊಂದು ಪ್ಲಾನ್ ಆಡಗಿದೆ.
ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ಎರಡು ದಿನಗಳ ಕಾಲ ಮುಂಬೈನಲ್ಲಿ ಇಂಡಿಯಾ ಒಕ್ಕೂಟ ಸಭೆ ನಡೆಯಲಿದೆ. 27ಕ್ಕೂ ಹೆಚ್ಚು ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ. ಯುಪಿಎ ಒಕ್ಕೂಟದ ಪಕ್ಷಗಳೆಲ್ಲಾ ಇದೀಗ ಇಂಡಿಯಾ ಒಕ್ಕೂಟದ ಭಾಗವಾಗಿದೆ. ಇಂಡಿಯಾ ಒಕ್ಕೂಟದ ಅತೀ ದೊಡ್ಡಪಕ್ಷವಾಗಿರುವ ಕಾಂಗ್ರೆಸ್ ತನ್ನ ಅಧಿಪತ್ಯ ಉಳಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆಯನ್ನು ಮೈತ್ರಿ ಒಕ್ಕೂಟದ ಮುಖ್ಯಸ್ಥ ಸ್ಥಾನಕ್ಕೆ ಪ್ರಸ್ತಾಪಿಸಲು ಮುಂದಾಗಿದೆ. ಇಂಡಿಯಾ ಒಕ್ಕೂಟದ ಇತರ ಪಕ್ಷಗಳು ಖರ್ಗೆ ಹೆಸರಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಸ್ಥರಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಇಂಡಿಯಾ ಕೂಟಕ್ಕೆ ಅಶೋಕ ಚಕ್ರ ಇಲ್ಲದ ತ್ರಿವರ್ಣ ಧ್ವಜ, ಸಂಚಾಲಕನಾಗುವ ಆಸೆಯಿಲ್ಲ ಎಂದ ನಿತೀಶ್
ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಸ್ಥ ಪಟ್ಟ ನೀಡಿ, ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ಹಾಗೂ ಯುಪಿಎ ಮಿತ್ರ ಪಕ್ಷಗಳು ತಯಾರಿ ನಡೆಸಿದೆ. ಇತ್ತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆವು ಸಂಚಾಲಕ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ.
ಅತ್ತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಪ್ರಧಾನಿ ಅಭ್ಯರ್ಥಿರೇಸ್‌ನಲ್ಲಿದ್ದಾರೆ. ಆಪ್ ಕೆಲ ಮುಖಂಡರು, ವಕ್ತಾರರು ಕೇಜ್ರಿವಾಲ್ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ತ ಎಂದಿದ್ದಾರೆ. ಕಾಂಗ್ರೆಸ್, ಜೆಡಿಯು, ಟಿಎಂಸಿ ಹಾಗೂ ಆಪ್ ಪಕ್ಷಗಳು ಪ್ರಮುಖ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ.
ಮೊದಲ ದಿನದ ಸಭೆಯಲ್ಲಿ ಹಲವು ಪ್ರಸ್ತಾಪಗಳು ಚರ್ಚೆಯಾಗಲಿದೆ. ಎರಡನೇ ದಿನದಲ್ಲಿ ಅಂತಿನ ನಿರ್ಣಯ ಘೋಷಣೆಯಾಗಲಿದೆ. ಇನ್ನು ಇಂದು ಇಂಡಿಯಾ ಬ್ಲಾಕ್ ಒಕ್ಕೂಟದ ಥೀಮ್ ಸಾಂಗ್ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಲಾಂಛನ ಸೇರಿದಂತೆ ಇತರ ವಿಚಾರಗಳು ಇಂದು ಚರ್ಚೆ ನಡೆಸಿ ನಾಳೆ ಘೋಷಣೆಯಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಸೋಲಿಸಲು ಯಾವ ವಿಚಾರಗಳ ಕುರಿತುವಿಪಕ್ಷಗಳು ಒಕ್ಕೊರಲ ಹೋರಾಟ ಮಾಡಬೇಕು ಅನ್ನೋ ವಿಚಾರಗಳು ಇಂದು ಚರ್ಚೆಯಾಗುತ್ತಿದೆ.
ವಿವಾದದ ಬಳಿಕ ಇಂಡಿಯಾ ಪೋಸ್ಟರ್‌ಗೆ ಕೇಜ್ರಿವಾಲ್ ಫೋಟೋ ಸೇರಿಸಿದ ಇಂಡಿಯಾ ಕೂಟ
ಪ್ರಧಾನಿ ಅಭ್ಯರ್ಥಿ ಕುರಿತು ಇಂಡಿಯಾ ಒಕ್ಕೂಟದ ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ಪ್ರಮುಖ ಉದ್ಧವ ಠಾಕ್ರೆ, ‘ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ ಆಗಿಲ್ಲ. ನಮ್ಮಲ್ಲಿ ಸಾಕಷ್ಟುಅರ್ಹರಿದ್ದಾರೆ. ಆದರೆ ಬಿಜೆಪಿಯಲ್ಲಿ ಒಬ್ಬರೇ ಅರ್ಹ’ ಎಂದು ಮೋದಿಗೆ ಚಾಟಿ ಬೀಸಿದ್ದಾರೆ. ಇಂಡಿಯಾ ಒಕ್ಕೂಟ ಸಮರ್ಥ ನಾಯಕರ ಮೈತ್ರಿಯಾಗಿದೆ. ಯಾರೊಬ್ಬರಿಗೆ ಜೋತು ಬೀಳುವ ಪಕ್ಷವಲ್ಲ ಎಂದಿದ್ದಾರೆ.