ಇಂಡಿಯಾ ಕೂಟಕ್ಕೆ ಅಶೋಕ ಚಕ್ರ ಇಲ್ಲದ ತ್ರಿವರ್ಣ ಧ್ವಜ, ಸಂಚಾಲಕನಾಗುವ ಆಸೆಯಿಲ್ಲ ಎಂದ ನಿತೀಶ್
ಆ.30ರ ಇಂಡಿಯಾ ಕೂಟದ ಸಭೆಯಲ್ಲಿ ಇಂಡಿಯಾ ಕೂಟದ ಹೊಸ ಬಾವುಟ ಅನಾವರಣ. ಅಶೋಕ ಚಕ್ರ ಇಲ್ಲದ ತ್ರಿವರ್ಣ ಧ್ವಜ ಸಾಧ್ಯತೆ. ಈ ನಡುವೆ ನಿತೀಶ್ ಕುಮಾರ್ ಇಂಡಿಯಾ ಕೂಟದ ಸಂಚಾಲಕ ಆಗುವ ಉದ್ದೇಶ ಇಲ್ಲ ಎಂದಿದ್ದಾರೆ.

ನವದೆಹಲಿ (ಆ.29): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿ ಅಧಿಕಾರಕ್ಕೇರಲು ಸಜ್ಜಾಗಿರುವ 26 ವಿಪಕ್ಷಗಳ ಕೂಟ ‘ಇಂಡಿಯಾ’, ‘ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜ’ವನ್ನು ತನ್ನ ಧ್ವಜವನ್ನಾಗಿ ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ. ಈ ಬಗ್ಗೆ ಮುಂಬೈನಲ್ಲಿ ಮಾಸಾಂತ್ಯಕ್ಕೆ ನಡೆಯುವ ಕೂಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿಪಕ್ಷಗಳ ‘ಇಂಡಿಯನ್ ನ್ಯಾಷನಲ್ ಡೆವಲೆಪ್‌ಮೆಂಟ್ ಇನ್‌ಕ್ಲೂಸಿವ್ ಅಲಯನ್ಸ್’ಗೆ ಬೆಂಗಳೂರಿನ ಸಭೆಯಲ್ಲಿ ‘ಇಂಡಿಯಾ’ ಎಂದು ನಾಮಕರಣ ಮಾಡಲಾಗಿದೆ. ಆ.31 ಮತ್ತು ಸೆ.1ರಂದು ಮುಂಬೈಯಲ್ಲಿ ನಡೆಯುವ ಸಭೆಯಲ್ಲಿ ಕೂಟಕ್ಕೆ ಧ್ವಜವನ್ನು ಅಳವಡಿಸುವ ಪ್ರಸ್ತಾಪದ ನಾಯಕರು ಚರ್ಚಿಸಲಿದ್ದು, ಕೇಸರಿ, ಬಿಳಿ ಹಸಿರಿನ ಭಾರತದ ಧ್ವಜದ ಬಣ್ಣಗಳುಳ್ಳ ಅಶೋಕ ಚಕ್ರ ರಹಿತ ಧ್ವಜದ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.
ಟೆಕ್ ದೈತ್ಯ ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ರೂ ಪ್ಯಾಕೇಜ್ ಉದ್ಯೋಗ ಪಡೆದ
ಇಂಡಿಯಾ ಕೂಟದ ಸಂಚಾಲಕ ಆಗುವ ಉದ್ದೇಶ ಇಲ್ಲ: ನಿತೀಶ್
ಪಟನಾ: 26 ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸಂಚಾಲಕರನ್ನಾಗಿ ತಮ್ಮನ್ನು ನೇಮಿಸಲಾಗುತ್ತದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ನನಗೆ ಯಾವುದೇ ವೈಯಕ್ತಿಕ ಮಹಾತ್ವಾಕಾಂಕ್ಷೆಗಳಿಲ್ಲ. ಬಿಜೆಪಿ ವಿರುದ್ಧ ಗರಿಷ್ಠ ಸಂಖ್ಯೆಯ ಪಕ್ಷಗಳನ್ನು ಸಂಘಟಿಸುವುದು ಮಾತ್ರ ನನ್ನ ಏಕೈಕ ಉದ್ದೇಶ’ ಎಂದಿದ್ದಾರೆ.
ಅಲ್ಲದೇ ‘ನನಗೆ ಯಾವುದೇ ಆಸೆ ಇಲ್ಲ. ಮುಝೆ ಕುಛ್ ನಹಿ ಚಾಯಿಯೇ (ನನಗೆ ಏನೂ ಬೇಡ) ಬೇರೆಯವರಿಗೆ ಈ ಜವಾಬ್ದಾರಿ ನೀಡಬಹುದು. ‘ಇಂಡಿಯಾ’ ಕೂಟದ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ನಾವು ಮುಂಬೈಯಲ್ಲಿ ಸಭೆ ಸೇರಲಿದ್ದೇವೆ’ ಎಂದಿದ್ದಾರೆ.
ಆ.31 ಮತ್ತು ಸೆ.1 ರಂದು 2 ದಿನಗಳ ಕಾಲ ಮುಂಬೈಯಲ್ಲಿ ‘ಇಂಡಿಯಾ’ ಕೂಟದ ಸಭೆ ನಡೆಯಲಿದ್ದು, ಈ ವೇಳೆ ಕೂಟದ ಪ್ರಮುಖ ಹುದ್ದೆಗಳಿಗೆ ನಾಯಕರನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಸೆಂಬರಲ್ಲೇ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ಲಾನ್, ಬಿಜೆಪಿಯಿಂದ ಎಲ್ಲಾ ಕಾಪ್ಟರ್
2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎದುರಿಸಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಬ್ಲಾಕ್‌ನ ಲೋಗೋವನ್ನು ಮುಂದಿನ ವಾರ ಮುಂಬೈನಲ್ಲಿ ನಡೆವ ಒಕ್ಕೂಟದ 2ನೇ ಸಭೆಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಹಾಗೂ ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಇಂಡಿಯಾ ಕೂಟದ ಲೋಗೋ ಹೇಗಿರಬೇಕು ಚರ್ಚೆಗಳು ನಡೆಯುತ್ತಿವೆ. ನಾವು 140 ಕೋಟಿ ಭಾರತೀಯರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಲೋಗೋ ನಮ್ಮ ದೇಶವನ್ನು, ಅದರ ಏಕತೆಯನ್ನು ಸೂಚಿಸುತ್ತದೆ ಮತ್ತು ಅಗತ್ಯವಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ 28 ಪ್ರತಿಪಕ್ಷಗಳ ನಾಯಕರು ಆ.31 ಮತ್ತು ಸೆ.1ರಂದು ಉಪನಗರದ ಐಷಾರಾಮಿ ಹೋಟೆಲ್ ಗ್ರ್ಯಾಂಡ್ ಹಯಾತ್‌ನಲ್ಲಿ ನಡೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯನ್ನು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ ಠಾಕ್ರೆ ಆಯೋಜಿಸಲಿದ್ದಾರೆ ಎಂದು ರಾವುತ್ ಹೇಳಿದ್ದಾರೆ.