ಬೆಂಗಳೂರು, (ಫೆ.03): ಮೈತ್ರಿ ಪಕ್ಷಗಳು ಲೋಕಸಭಾ ಚುನಾವಣೆಯನ್ನು ಜೊತೆಗೂಡಿ ಎದುರಿಸಲು ಚಿಂತನೆ ನಡೆಸಿವೆ. ಆದ್ರೆ ಮಂಡ್ಯ ಮತ್ತು ಹಾಸನ ಕ್ಷೇತ್ರಗಳ ಉಭಯ ಕಾರ್ಯಕರ್ತರಲ್ಲಿ ಅಪಸ್ವರ ಕೇಳಿಬಂದಿದೆ.

ಈಗಾಗಲೇ ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್ ಹೆಸರು ಚರ್ಚೆಯಲ್ಲಿದೆ. ಆದ್ರೆ ಸುಮಲತಾ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರಾ? ಅಥವಾ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರಾ ಎನ್ನುವುದು ಇನ್ನು ನಿಗೂಢವಾಗಿಯೇ ಉಳಿದಿದೆ. 

ಮಂಡ್ಯದಲ್ಲಿ ಸುಮಲತಾ ಹವಾ ಎದ್ದಿದ್ದು ಹೇಗೆ? ಇಲ್ಲಿದೆ ಕುತೂಹಲದ ಸಂಗತಿ

ಸಮಲತಾ ಅವರನ್ನು ತಮ್ಮ ಪಕ್ಷದಿಂದ ಅಖಾಡಕ್ಕಿಳಿಸಲು ಕಾಂಗ್ರೆಸ್ ತೆರೆಮರೆಯ ಕಸರತ್ತು ನಡೆಸಿದರೆ, ಮತ್ತೊಂದೆಡೆ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿಸಲು ಚಿಂತನೆ ನಡೆಸಿದೆ. 

ಕೊನೆಗಳಿಗೆಯಲ್ಲಿ ಸುಮಲತಾ ಮಂಡ್ಯದಿಂದ ಸ್ಪರ್ಧಿಸುವುದು ಖಚಿತವಾದರೆ, ಜೆಡಿಎಸ್‌ ಟಿಕೆಟ್ ನೀಡದರೂ ಆಶ್ಚಯಪಡಬೇಕಿಲ್ಲ.

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಬಿಗ್ ಟ್ವಿಸ್ಟ್: ಸುಮಲತಾಗೆ ಬಿಜೆಪಿ ಬೆಂಬಲ?

ಸುಮಾಲತಾರನ್ನ ಸೆಳೆಯಲು ಬಿಜೆಪಿ ಪ್ಲಾನ್
ದೋಸ್ತಿಗಳಿಗೆ ಟಕ್ಕರ್ ನೀಡಲು ಇದೀಗ ಬಿಜೆಪಿ ಎಂಟ್ರಿ ಕೊಟ್ಟಿದ್ದು, 2019ರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಂಡ್ಯದ ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​​ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಮಲ ಪಾಳಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. 

ಮಂಡ್ಯದಲ್ಲಿ ‘ಗೆಲ್ಲುವ ಕುದುರೆ’ಗೆ ಟಿಕೆಟ್! ಸಿದ್ದು ಕಣ್ಣು ಯಾರ ಮ್ಯಾಲೆ?

ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸುಮಲತಾ ಅವರ ಬಳಿ ಮಾತನಾಡುವಂತೆ ಮಾಜಿ‌ ಡಿಸಿಎಂ ಆರ್​ ಅಶೋಕ್​ ಹಾಗೂ ​ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ.

 ಒಂದು ವೇಳೆ ಸುಮಲತಾ ಬಿಜೆಪಿಯಿಂದ ಕಣಕ್ಕಿಳಿಯಲು ಒಪ್ಪಿದ್ರೆ ಬಿಜೆಪಿಯಿಂದ ಟಿಕೆಟ್​ ನೀಡಲು ರಾಜ್ಯಾಧ್ಯಕ್ಷರು ಸಮ್ಮಿತಿಸಿದ್ದಾರೆ ಎನ್ನಲಾಗಿದೆ.

ಮಂಡ್ಯ ಕ್ಷೇತ್ರದ ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಹೇಳಿದ್ದೇನು..?

ಸುಳಿವು ಕೊಟ್ಟ ಆರ್. ಅಶೋಕ್
ಹೌದು....ಅಂಬರೀಶ್ ಅವರು ಕಾಂಗ್ರೆಸ್‌ನಲ್ಲಿದ್ದಿರುವುದು ನಿಜ. ಆದ್ರೆ ರಾಜಕೀಯ ನಿಂತ ನೀರಲ್ಲ. ಸಮಲತಾ ಅಂಬರಿಶ್ ಅವರು ಮಂಡ್ಯ ಲೋಕಸಭಾ ಟಿಕೆಟ್‌ಗಾಗಿ ನಮ್ಮ ಬಳಿ ಬಂದಿಲ್ಲ. ಒಂದು ವೇಳೆ ಬಂದರೆ ಬಿಜೆಪಿ ಸ್ವಾಗತಸುತ್ತೇವೆ ಎಂದು ಹೇಳಿದ್ದಾರೆ.

ಅಂಬರೀಶ್ ಅವರ ವರ್ಚಸ್ಸಿನಲ್ಲಿ ಸುಮಲತಾ ಅವರ ಗೆಲುವು ಸಲಭವಾಗಲಿದೆ ಎನ್ನುವುದು ಮೂರು ಪಕ್ಷಗಳು ಅರಿತಿವೆ. ಈ ಹಿನ್ನಲೆಯಲ್ಲಿ ಟಿಕೆಟ್ ನೀಡಲು ನಾ ಮುಂದು ತಾ ಮುಂದು ಅಂತ ದುಂಬಾಲು ಬಿದ್ದಿವೆ.

'ಅಂಬರೀಶ್‌ರನ್ನ ಹೊತ್ತು ಮೆರೆದಾಡಿದ್ದೇವೆ ಇನ್ನೇನು ಮಾಡ್ಬೇಕು, JDS ಅಭ್ಯರ್ಥಿ ನಾನೇ'

ಹಾಗಾದರೆ, ‘ಕಾಂಗ್ರೆಸ್‌ನ ಸುಮಲತಾ’ ಕಣಕ್ಕಿಳಿತಾರಾ? ಅಥವಾ ‘ಜೆಡಿಎಸ್‌ನ ಸುಮಲತಾ’ ಕಣಕ್ಕಿಳಿತಾರಾ?  ಎನ್ನುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಲಕ ಮೂಡಿಸಿದಂತೂ ನಿಜ. ಕೊನೆಗಳಿಗೆಯಲ್ಲಿ ಮೈತ್ರಿಗೆ ಬಾಯ್ ಹೇಳಿ ಬಿಜೆಪಿಯಿಂದ ಸ್ಪರ್ಧಿಸಿದರೂ ಆಶ್ಚರ್ಯಪಡಬೇಕಿಲ್ಲ.

ಒಟ್ಟಿನಲ್ಲಿ ಸುಮಲತಾ ಅವರಿಗೆ ಮೂರು ಪಕ್ಷಗಳಿಂದ ಟಿಕೆಟ್ ಆಫರ್ ಇದ್ದು, ಅವರು ಯಾವ ಪಾರ್ಟಿಯಿಂದ ಕಣಕ್ಕಿಳಿಯುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಅಂಬರೀಶ್ ಅವರ ನಿಧನದ ಬಳಿಕ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಶಿವರಾಮೇಗೌಡ ಗೆಲುವು ಸಾಧಿಸಿದ್ದರು.