ರಾಹುಲ್ ಗಾಂಧಿ ಸೇರಿ ಇಂಡಿಯಾ ಕೂಟ ಚುನಾವಣೋತ್ತರ ಸಮೀಕ್ಷೆ ತಿರಸ್ಕರಿಸಿದ್ದು ಏಕೆ?

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದ ಚುನಾವಣೋತ್ತರ ಸಮೀಕ್ಷೆಗಳನ್ನು ಇಂಡಿಯಾ ಕೂಟದ ಅಂಗಪಕ್ಷಗಳಾದ ಕಾಂಗ್ರೆಸ್‌, ಆಪ್‌ ಮತ್ತು ಸಮಾಜವಾದಿ ಪಕ್ಷಗಳು ಸ್ಪಷ್ಟವಾಗಿ ತಿರಸ್ಕರಿಸಿವೆ.

Lok sabha election results 2024 update India bloc rejects exit polls 2024 rav

ನವದೆಹಲಿ (ಜೂ.3): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದ ಚುನಾವಣೋತ್ತರ ಸಮೀಕ್ಷೆಗಳನ್ನು ಇಂಡಿಯಾ ಕೂಟದ ಅಂಗಪಕ್ಷಗಳಾದ ಕಾಂಗ್ರೆಸ್‌, ಆಪ್‌ ಮತ್ತು ಸಮಾಜವಾದಿ ಪಕ್ಷಗಳು ಸ್ಪಷ್ಟವಾಗಿ ತಿರಸ್ಕರಿಸಿವೆ.

‘ಇದೆಲ್ಲಾ ಬೋಗಸ್‌. ಇದು ಮೋದಿ ಮೀಡಿಯಾ ಪೋಲ್‌’ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ, ಜೈರಾಂ ರಮೇಶ್‌, ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಕಿಡಿಕಾರಿದ್ದಾರೆ.

Lok Sabha elections 2024: ಬಿಜೆಪಿಗೆ ಎಷ್ಟು ಸ್ಥಾನ..INDIAಗೆ ಎಷ್ಟು ಸ್ಥಾನ..? ಮತಕಟ್ಟೆ ಲೆಕ್ಕಾಚಾರ..!

ಸಮೀಕ್ಷೆಗಳ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್‌, ‘ಈ ಸಮೀಕ್ಷೆಗಳೆಲ್ಲಾ ಬೋಗಸ್‌. ಇದು ಮೋದಿ ಮೀಡಿಯಾ ಪೋಲ್‌. ತಿರುಚಿದ ಚುನಾವಣೆ ಸಮರ್ಥನೆಗೆ ಮತ್ತು ಮಾನಸಿಕ ಯುದ್ಧ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಆಡುತ್ತಿರುವ ಆಟ. ನಿಮಗೆಲ್ಲಾ ಸಿಧು ಮೂಸೇವಾಲಾರ 295 ಹಾಡು ಗೊತ್ತಲ್ವಾ? ನಾವು ಕೂಡಾ ಈ ಬಾರಿ 295 ಸ್ಥಾನ ಗೆಲ್ಲುತ್ತೇವೆ’ ಎಂದು ಹೇಳಿದರು.ಇದೇ ವೇಳೆ, ‘ಹೊಸ ಸರ್ಕಾರದ ಮೊದಲ 100 ದಿನದ ಕಾರ್ಯಸೂಚಿ ಕುರಿತು ಪ್ರಧಾನಿ ಮೋದಿ ನಡೆಸುತ್ತಿರುವ ಸಭೆಗಳು, ಮರಳಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಬೋಗಸ್‌ ಆಗಿದ್ದು, ಇದು ಜೂ.4ರ ಬಳಿಕ ಅಧಿಕಾರ ಕಳೆದುಕೊಳ್ಳುವುದು ಅನಿವಾರ್ಯ ಮತ್ತು ಖಚಿತವಾಗಿರುವ ವ್ಯಕ್ತಿಯೊಬ್ಬರ ಕೃತ್ಯ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ.ಇನ್ನು ಅಖಿಲೇಶ್‌ ಯಾದವ್ ಪ್ರತಿಕ್ರಿಯೆ ನೀಡಿ, ‘ಬಿಜೆಪಿ ಪರ ಮಾಧ್ಯಮಗಳು ಎನ್‌ಡಿಎ ಮೈತ್ರಿಕೂಟದ ಗೆಲುವಿನ ಬಗ್ಗೆ ಭವಿಷ್ಯ ನುಡಿದಿವೆ. ಆದರೆ ಈ ಬಾರಿ ಇಂಡಿಯಾ ಮೈತ್ರಿಕೂಟ 300ಕ್ಕಿಂತ ಹೆಚ್ಚಿನ ಸ್ಥಾನ ಗೆದ್ದು ಅಧಿಕಾರಕ್ಕೆ ಏರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಕ್ಸಿಟ್ ಪೋಲ್‌ನಲ್ಲಿ ಕೈಗೆ ಬಿಗ್ ಶಾಕ್, ಮೈತ್ರಿ ರಾಕ್..! ಧೂಳೆಬ್ಬಿಸಲಿದ್ಯಂತೆ ಕಮಲದಳ ಮೈತ್ರಿಕೂಟ..ಕಾಂಗ್ರೆಸ್‌ಗೆ ಲೋಕಾಘಾತ..?

ಆಪ್‌ ನಾಯಕ ಅರವಿಂದ ಕೇಜ್ರಿವಾಲ್ ಕೂಡ, ‘ಸಮೀಕ್ಷೆಗಳು ಸುಳ್ಳು. ಜೂ.4ಕ್ಕೆ ನಮಗೇ ಅಧಿಕಾರ’ ಎಂದಿದ್ದಾರೆ.

ರಾಜ್ಯದಲ್ಲಿ ‘ಕೈ’ಗೆಎರಡಂಕಿ ನಿಶ್ಚಿತಕಳೆದ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ 70-80 ಸ್ಥಾನ ಮಾತ್ರ ಗಳಿಸಲಿವೆ ಎಂದಿದ್ದವು. ಆ ಸಮೀಕ್ಷೆಗಳು ಸುಳ್ಳಾದಂತೆ ಈಗಿನ ಸಮೀಕ್ಷೆಗಳೂ ಸುಳ್ಳಾಗಲಿವೆ. ನಾನು ಸ್ವಂತ ಮಾಡಿಸಿರುವ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್‌ ಖಚಿತವಾಗಿ ಎರಡಂಕಿ ಫಲಿತಾಂಶ ದಾಖಲಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios