Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಇಂದು ತರಾತುರಿಯಲ್ಲಿ ಶ್ರೀನಿವಾಸಪ್ರಸಾದ್ ಭೇಟಿಗೆ ಮುಂದಾದ ಯಡಿಯೂರಪ್ಪ!

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ಶ್ರೀನಿವಾಸ್ ಪ್ರಸಾದ್  ಭೇಟಿಯಾದ ಬೆನ್ನಲ್ಲೇ ಆಲರ್ಟ್ ಆದ ಬಿಜೆಪಿ ಇಂದು ಬಿಎಸ್ ಯಡಿಯೂರಪ್ಪ ತರಾತುರಿಯಲ್ಲಿ ಶ್ರೀನಿವಾಸ ಪ್ರಸಾದರನ್ನು ಭೇಟಿಯಾಗಲು ಮುಂದಾಗಿದ್ದಾರೆ.

Lok sabha election 2024 Karnataka former CM BS Yadiyrappa will meet shrinivas prasad after cm siddaramaiah met him rav
Author
First Published Apr 14, 2024, 7:58 AM IST

ಚಾಮರಾಜನಗರ (ಏ.14): ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ಶ್ರೀನಿವಾಸ್ ಪ್ರಸಾದ್  ಭೇಟಿಯಾದ ಬೆನ್ನಲ್ಲೇ ಆಲರ್ಟ್ ಆದ ಬಿಜೆಪಿ ಇಂದು ಬಿಎಸ್ ಯಡಿಯೂರಪ್ಪ ತರಾತುರಿಯಲ್ಲಿ ಶ್ರೀನಿವಾಸ ಪ್ರಸಾದರನ್ನು ಭೇಟಿಯಾಗಲು ಮುಂದಾಗಿದ್ದಾರೆ.

ಹೌದು, ಎಂಟು ವರ್ಷಗಳ ಮುನಿಸು, ಪ್ರತಿಷ್ಠೆ ಬದಿಗಿಟ್ಟು ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ತೆರಳಿ ಹತ್ತನ್ನೆರಡು ನಿಮಿಷ ಕಾದು ಭೇಟಿಯಾಗಿದ್ದರು. ಭೇಟಿ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಮಾತುಕತೆ ನಡೆಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುವ ಹಿಂದಿನ ದಿನವೇ ಈ ಬೆಳವಣಿಗೆ ನಡೆದಿರುವುದು ಬಿಜೆಪಿಯ ಎಡವಟ್ಟಿನಿಂದ ಪಕ್ಕಾ ಲಾಭ ಮಾಡಿಕೊಂಡಿದೆ. ಇದೀಗ ಅಲರ್ಟ್ ಆಗಿರುವ ಯಡಿಯೂರಪ್ಪ ಇಂದು ಭೇಟಿ ಮಾಡಿ ಶ್ರೀನಿವಾಸ ಪ್ರಸಾದರನ್ನ ಸಮಾಧಾನಪಡಿಸಲು ಮುಂದಾಗಿದ್ದಾರೆ.

ಮೈಸೂರಿಗೆ ಮೋದಿ ಎಂಟ್ರಿಗೂ ಮುನ್ನವೇ ಅಲರ್ಟ್ ಆದ ಸಿಎಂ; 8 ವರ್ಷಗಳ ಮುನಿಸು ಬಿಟ್ಟು ಶ್ರೀನಿವಾಸ್ ಪ್ರಸಾದ್ ಭೇಟಿ!

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಕರೆತರಲು ಯತ್ನಿಸಿರುವ ಬಿಎಸ್ ಯಡಿಯೂರಪ್ಪ. ಆ ಮೂಲಕ ಬಿಜೆಪಿಯ ಎಡವಟ್ಟಿಗೆ ತೇಪೆ ಹಚ್ಚಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಸಂಬಂಧವಾಗಿ ಪ್ರಸಾದ್‌ರನ್ನ ಕಡೆಗಣಿಸಿದ್ದ ಬಿಜೆಪಿ. ಇಂದು ಮೈಸೂರಿಗೆ ನರೇಂದ್ರ ಮೋದಿ ಆಗಮಿಸುತ್ತಿದ್ದರೂ ಸಮಾವೇಶದಲ್ಲಿ ಭಾಗಿಯಾಗಲು ಶ್ರೀನಿವಾಸ ಪ್ರಸಾದ್ ಆಹ್ವಾನ ಕಳಿಸದೇ ನಿರ್ಲಕ್ಷ್ಯ ಮಾಡಿರುವ ಬಿಜೆಪಿ ನಾಯಕರು. ಈ ಬಗ್ಗೆ ಬಹಿರಂಗವಾಗಿ ಬೇಸರ ಹೊರಹಾಕಿದ್ದ ಶ್ರೀನಿವಾಸ ಪ್ರಸಾದ್.

ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ; ಮೋದಿ ಸಮುದ್ರ ಈಜಿದ ಮನುಷ್ಯ ಇಬ್ಬರ ನಡುವೆ ಹೋಲಿಕೆ ಎಲ್ಲಿಯದು?: ಶ್ರೀನಿವಾಸ ಪ್ರಸಾದ ವಾಗ್ದಾಳಿ

ನಿನ್ನೆ ಸಹ ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಬಂದರೂ ನಾನು ಹೋಗುವುದೂ ಇಲ್ಲ ಎಂದಿದ್ದ ಶ್ರೀನಿವಾಸ ಪ್ರಸಾದ್. ನರೇಂದ್ರ ಮೋದಿ ಆಗಮಿಸುತ್ತಿರುವ ಹೊತ್ತಲ್ಲಿ ಬಿಜೆಪಿ ನಾಯಕರು ಮಾಡಿಕೊಂಡ ಎಡವಟ್ಟು ಕಾಂಗ್ರೆಸ್ ಗೆ ಲಾಭವಾದಂತಾಗಿದೆ. ಇಂದು ಬಿಎಸ್ ಯಡಿಯೂರಪ್ಪ ಶ್ರೀನಿವಾಸ ಪ್ರಸಾದರನ್ನು ಭೇಟಿ ಮಾಡಲಿದ್ದು ಮುನಿಸು ಶಮನಗೊಳಿಸಿ ಮೋದಿ ಕಾರ್ಯಕ್ರಮಕ್ಕೆ ಕರೆತರುವಲ್ಲಿ ಯಶಸ್ವಿಯಾಗುತ್ತಾರಾ ಇಲ್ಲವಾ? ಕಾದು ನೋಡಬೇಕು. ಸಂಸದ ವಿ ಶ್ರೀನಿವಾಸ್ ಪ್ರಸಾದ್ ನಡೆ ಯಾವ ಕಡೆ ಎಂಬುದೀಗ ತೀವ್ರ  ಕುತೂಹಲ ಕೆರಳಿಸಿದೆ.

Follow Us:
Download App:
  • android
  • ios