Asianet Suvarna News Asianet Suvarna News

ಲೋಕಸಭಾ ಚುನಾವಣೆಗೆ ಕಲ್ಯಾಣ ಕರ್ನಾಟಕದಿಂದಲೇ ಮೋದಿ ರಣಕಹಳೆ: ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿ ತುಳುಕುತ್ತಿದೆ: ವಿಜಯೇಂದ್ರ

ಲೋಕಸಭಾ ಚುನಾವಣೆಗೆ ಕಲ್ಯಾಣ ಕರ್ನಾಟಕದಿಂದಲೇ ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಿದ್ದಾರೆ. ನಮ್ಮ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿ ತುಳುಕುತ್ತಿದೆ. ರಾಜ್ಯ ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಪ್ರಧಾನಿ ಮೋದಿಯವರ ಕೊಡುಗೆಗಳು, ರಾಜ್ಯ ಸರ್ಕಾರದ ವೈಫಲ್ಯಗಳು ನಮಗೆ ಅನುಕೂಲಕರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

Lok sabha election 2024 BJP Karnataka state president BY Vijayendra statment at kalaburagi rav
Author
First Published Mar 16, 2024, 7:01 PM IST

ಕಲಬುರಗಿ (ಮಾ.16): ಬಹಳ ದಿನಗಳಿಂದ ಲೋಕಸಭಾ ಚುನಾವಣೆ ದಿನಾಂಕದ ಘೋಷಣೆ ನಿರೀಕ್ಷೆಯಲ್ಲಿದ್ದೆವು. ಆಯೋಗ ಇಂದು ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದೆ ಎಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಕಲಬುರಗಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಲ್ಯಾಣ ಕರ್ನಾಟಕದಿಂದಲೇ ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಿದ್ದಾರೆ. ನಮ್ಮ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿ ತುಳುಕುತ್ತಿದೆ. ರಾಜ್ಯ ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಪ್ರಧಾನಿ ಮೋದಿಯವರ ಕೊಡುಗೆಗಳು, ರಾಜ್ಯ ಸರ್ಕಾರದ ವೈಫಲ್ಯಗಳು ನಮಗೆ ಅನುಕೂಲಕರವಾಗಿದೆ ಎಂದರು.

ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲು ಬಿಜೆಪಿ ಹೈಕಮಾಂಡ್‌ಗೆ 3 ಪ್ರಶ್ನೆ ಕೇಳಿದ ಸಂಗಣ್ಣ ಕರಡಿ!

ಈ ಬಾರಿಯೂ ಸಹ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಮ್ಮ ಪ್ರಜ್ಞಾವಂತ ಮತದಾರರು,  ಹಿಂದಿನ ಕಹಿ ನೆನಪು ಮರೆತು ದೇಶದ ಹಿತದೃಷ್ಟಿಯಿಂದ ಜೆಡಿಎಸ್ ಕಾರ್ಯಕರ್ತರು ಸಹ ಬಿಜೆಪಿಯನ್ನು ಬೆಂಬಲಿಸುತ್ತಾರೆ. ರಾಜ್ಯದಲ್ಲಿ ಈ ಬಾರಿ 28 ಕ್ಷೇತ್ರಗಳು ನಮ್ಮ ಪರವಾಗಿವೆ. ಕಾಂಗ್ರೆಸ್ ಪಕ್ಷ ಇನ್ನೂ ತನ್ನ ಅಭ್ಯರ್ಥಿ ಗಳನ್ನು ಹುಡುಕುವುದರಲ್ಲಿ ತಲ್ಲೀನವಾಗಿದೆ. ಸಚಿವರನ್ನು ಚುನಾವಣಾ ಕಣಕ್ಕಿಳಿಸಲು ಒತ್ತಡ ಹಾಕಲಾಗುತ್ತಿದೆ. ಆದರೆ ಸಚಿವರು ಸೋಲುವ ಭೀತಿಯಿಂದ ಯಾರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದೆ ಬರುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆಯಿದೆ ಎಂದು ಲೇವಡಿ ಮಾಡಿದರು.

ಸಂವಿಧಾನ ಬದಲಾವಣೆ ಹೇಳಿಕೆ; ಅನಂತಕುಮಾರ ಹೆಗ್ಡೆಗೆ ಟಿಕೆಟ್ ನೀಡಬೇಡಿ; ಛಲವಾದಿ ನಾರಾಯಣಸ್ವಾಮಿ ಆಗ್ರಹ

ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ಜನರ ಒಲವು ನಮಗೆ ಬ್ರಹ್ಮಾಸ್ತ್ರಗಳಾಗಿವೆ. ನಮ್ಮ ಪಕ್ಷದಲ್ಲಿನ ಗೊಂದಲಗಳೆಲ್ಲವೂ ಸದ್ಯದಲ್ಲೇ ಬಗೆಹರಿಯಲಿವೆ. ಈ ಬಾರಿಯೂ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios