ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲು ಬಿಜೆಪಿ ಹೈಕಮಾಂಡ್‌ಗೆ 3 ಪ್ರಶ್ನೆ ಕೇಳಿದ ಸಂಗಣ್ಣ ಕರಡಿ!

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿರುವ ಬಗ್ಗೆ ಅಸಮಾಧಾನಗೊಂಡಿರುವ ಕೊಪ್ಪಳ ಹಾಲಿ ಸಂಸದ ಸಂಗಣ್ಣ ಕರಡಿ,  ಬಿಜೆಪಿ ಅಭ್ಯರ್ಥಿ ಡಾ. ಕೆ ಬಸವರಾಜ್ ಪರ ಚುನಾವಣೆ ಪ್ರಚಾರಕ್ಕೆ ಬರಲು ಬಿಜೆಪಿ ಹೈಕಮಾಂಡ್‌ಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸಿದರೆ ಚುನಾವಣೆ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ.

Lok sabha election 2024 MP Karadi Sanganna asked 3 questions to BJP high command rav

ಕೊಪ್ಪಳ (ಮಾ.16) ಕಳೆದ ವಿಧಾನಸಭಾ ಚುನಾವಣೆಯಲ್ಲಾದ ಆಂತರಿಕ ಮನಸ್ತಾಪಳಿಂದ ರೋಸಿಹೋಗಿದ್ದ ಕೊಪ್ಪಳ ಬಿಜೆಪಿ, ಲೋಕಸಭಾ ಚುನಾವಣೆ ಸಮೀಪಿಸಿದಂತೆ ಪರಿಸ್ಥಿತಿ ತಣ್ಣಗಾಗಿತ್ತು. ಈ ಬಾರಿಯೂ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ತನಗೇ ಸಿಗುತ್ತದೆಂಬ ವಿಶ್ವಾಸದಲ್ಲಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿರುವುದು ಬಿಜೆಪಿ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ.

ಇಂದು ಕೊಪ್ಪಳದ ಗಿಣಿಗೇರಾದ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿರುವ ಬಗ್ಗೆ ಅಸಮಾಧಾನಗೊಂಡರುಅಲ್ಲದೆ ಬಿಜೆಪಿ ಅಭ್ಯರ್ಥಿ ಡಾ. ಕೆ ಬಸವರಾಜ್ ಪರ ಚುನಾವಣೆ ಪ್ರಚಾರಕ್ಕೆ ಬರಲು ಬಿಜೆಪಿ ಹೈಕಮಾಂಡ್‌ಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸಿದರೆ ಚುನಾವಣೆ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ಜಗತ್ತು ಕಂಡ ಅದ್ಭುತ ನಾಯಕ: ಸಂಸದ ಸಂಗಣ್ಣ ಕರಡಿ

ಮೂರು ಪ್ರಶ್ನೆ ಯಾವವು?

  • ನನಗೆ ಬಿಜೆಪಿ ಹೈಕಮಾಂಡ್ ಈವರೆಗೆ ಯಾಕೆ ಕರೆ ಮಾಡಿಲ್ಲ?
  • ನನಗೆ ಟಿಕೆಟ್ ಮಿಸ್ ಮಾಡಿಸಲು ಕಾರಣ ಯಾರು?
  • ನನಗೆ ಟಿಕೆಟ್ ಮಿಸ್  ಮಾಡಿಸಲು ಉದ್ದೇಶವೇನು?

ಬಿಜೆಪಿ ಹೈಕಮಾಂಡ್ ಈ ಮೂರು ಪ್ರಶ್ನೆಗಳಿಗೆ ಉತ್ತರಿಸಬೇಕು. ನಾನು ರಾಜಕೀಯವಾಗಿ ನಿವೃತ್ತಿ ಆಗುವುದಿಲ್ಲ. ಬಿಜೆಪಿ ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ. ನನಗೆ ರಾಜಕೀಯವಾಗಿ ಮಾಡುವ ಕೆಲಸಗಳು ಬಹಳಷ್ಟಿವೆ. ಆದರೆ ನನಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಸಾಕಷ್ಟು ನೋವಾಗಿದೆ ಎಂದು ಭಾವುಕರಾಗಿ ಕಣ್ಣೀರು ಹಾಕಿದ ಸಂಸದ ಕರಡಿ ಸಂಗಣ್ಣ, ಬಿಜೆಪಿ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿರುವುದು ಮಾತುಗಳಲ್ಲೇ ಕಂಡುಬಂತು.

ನನಗೆ ಬೇರೆ ಪಕ್ಷದವರು ಕರೆ ಮಾಡಿದ್ದಾರೆ. ಆದರೆ ಅವರು ಟಿಕೆಟ್ ಕೊಡುವ ವಿಚಾರ ಮಾತನಾಡಿಲ್ಲ. ಕಾಂಗ್ರೆಸ್‌ನವರು ಸಹ ಕರೆ ಮಾಡಿದ್ದಾರೆ. ಆದರೆ ಟಿಕೆಟ್ ಕೊಡುವ ಪ್ರಶ್ನೆ ಬಂದಿಲ್ಲ. ಟಿಕೆಟ್ ಪ್ರಶ್ನೆ ಬಂದಿಲ್ಲ ಎಂದರೆ ಆ ಬಗ್ಗೆ ಚರ್ಚೆ ಇಲ್ಲ ಎಂದರು.

 

ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಇಲ್ಲದಿದ್ದರೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ: ಕೊಪ್ಪಳ ಸಂಸದ ಸಂಗಣ್ಣ ಕರಡಿ

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ 73 ವರ್ಷವಾಗುತ್ತಾ ಬಂದಿದೆ. ಹೀಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಬಗ್ಗೆ ಹಿಂದೇ ಚರ್ಚೆಯಾಗಿತ್ತು. ಅದರಂತೆಯೆ ಇದೀಗ ಡಾ.ಕೆ. ಬಸವರಾಜ ಗೆ ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

Latest Videos
Follow Us:
Download App:
  • android
  • ios