Lok sabha election 2024: ಟಿಕೆಟ್ ಘೋಷಣೆ ಬೆನ್ನಲ್ಲೇ ನಾಗಸಾಧು ಬೇಟಿ ಮಾಡಿದ ಶ್ರೀರಾಮುಲು!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿ ಅಜ್ಞಾತವಾಸ ಅನುಭವಿಸಿದ ಮಾಜಿ ಸಚಿವ ಶ್ರೀರಾಮುಲು ಇದೀಗ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುತ್ತಿದ್ದಂತೆ ಮತ್ತೆ ಪುಟಿದೆದ್ದಿದ್ದಾರೆ, ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ ಬೆನ್ನಲ್ಲೇ ಮುಂದಿನ ಸಿದ್ಧತೆ, ಭವಿಷ್ಯದ ಬಗ್ಗೆ ತಿಳಿಯಲು ನಾಗಸಾಧು ಭೇಟಿ ಮಾಡಿದ್ದಾರೆ.
ಬಳ್ಳಾರಿ (ಮಾ.15): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿ ಅಜ್ಞಾತವಾಸ ಅನುಭವಿಸಿದ ಮಾಜಿ ಸಚಿವ ಶ್ರೀರಾಮುಲು ಇದೀಗ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುತ್ತಿದ್ದಂತೆ ಮತ್ತೆ ಪುಟಿದೆದ್ದಿದ್ದಾರೆ, ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ ಬೆನ್ನಲ್ಲೇ ಮುಂದಿನ ಸಿದ್ಧತೆ, ಭವಿಷ್ಯದ ಬಗ್ಗೆ ತಿಳಿಯಲು ನಾಗಸಾಧು ಭೇಟಿ ಮಾಡಿದ್ದಾರೆ.
ಸಂಡೂರು ತಾಲೂಕಿನ ದೇವರಕೊಳ್ಳ ಜೋಗದ ದಿಗಂಬರ ರಾಜ ಭಾರತಿ ನಾಗಸಾಧು ಸ್ವಾಮೀಜಿ ಭೇಟಿ ಮಾಡುವ ಮೂಲಕ ಶ್ರೀರಾಮುಲು ಲೋಕಸಭಾ ಚುನಾವಣೆಗೆ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿರುವುದು ಕನ್ಫರ್ಮ್ ಆಗುತ್ತಿದ್ದಂತೆ ನಾಗಸಾಧು ಭೇಟಿಯಾಗಿ ಆಶೀರ್ವಾದ ಪಡೆಯುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಗೆಲ್ಲುವ ಮೂಲಕ ಉತ್ತರ ನೀಡುತ್ತೇನೆ: ಶ್ರೀರಾಮುಲು
ಈ ಹಿಂದೆ ಟಿಕೆಟ್ ವಿಚಾರವಾಗಿ ಹೈಕಮಾಂಡ್ ಭೇಟಿ ವೇಳೆಯೂ ನಾಗಸಾಧು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇದೀಗ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕ ಬೆನ್ನಲ್ಲೇ ಮತ್ತೆ ನಾಗಸಾಧು ಭೇಟಿ ಆಗಿದ್ದಾರೆ.
Loksabha election 2024: ಶ್ರೀರಾಮುಲುಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂದ ಶಾಸಕ ಜನಾರ್ದನ ರೆಡ್ಡಿ!
ಸಂಡೂರು ತಾಲೂಕಿನ ಜೋಗ ಗ್ರಾಮದಲ್ಲಿರುವ ದೇವರಕೊಳ್ಳ ಮಠದ ಅತ್ಯಂತ ಪ್ರಭಾವಿ ಸ್ವಾಮಿ ಎನ್ನುವ ನಂಬಿಕೆ ಇದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಎಂಪಿ ಪ್ರಕಾಶ್, ಸಂತೋಷ್ ಲಾಡ್, ಅನಂತಕುಮಾರ ಹೆಗ್ಡೆ ಸೇರಿದಂತೆ ಹಲವು ನಾಯಕರು ನಾಗಸಾಧು ಆಶೀರ್ವಾದ ಪಡೆದಿದ್ದಾರೆ. ಪ್ರಮುಖ ಕಾರ್ಯಗಳ ಯಶಸ್ವಿಗೆ ನಾಗಸಾಧುಗಳನ್ನು ಭೇಟಿ ಮಾಡಿ ಗಣ್ಯರು ಆಶೀರ್ವಾದ ಪಡೆಯುತ್ತಾರೆ.