ಡಿಕೆ ಸುರೇಶ್ ಗೆಲ್ಲೋದನ್ನ ಯಾರಿಂದಲೂ ತಪ್ಪಿಸೋಕೆ ಆಗೊಲ್ಲ; ಡಿಕೆ ಶಿವಕುಮಾರ
ಕುಮಾರಸ್ವಾಮಿ ಅವರು ಕೆಲಸ ಮಾಡಿದ್ರೆ ಇಲ್ಲೇ ಚುನಾವಣೆಗೆ ನಿಲ್ಲುತ್ತಿದ್ರು. ಅವರಿಗೆ ಯಾವುದೇ ವಿಶ್ವಾಸ ಇಲ್ಲಿ ಇಲ್ಲ. ಹೊಸದಾಗಿ ಜನರನ್ನ ಮರಳು ಮಾಡೋದಕ್ಕೆ ಮಂಡ್ಯಕ್ಕೆ ಹೋಗಿದ್ದಾರೆ. ಕುಮಾರಸ್ವಾಮಿ ಅವರದ್ದು ಬರೀ ಸ್ವಾರ್ಥದ ರಾಜಕಾರಣ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.
ರಾಮನಗರ (ಏ.21): ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ಡಿಕೆ ಸುರೇಶ್ ಗೆಲ್ಲುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ರಾಮನಗರದ ಕೂಟಗಲ್ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಆನೇಕಲ್, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ. ಇದೀಗ ರಾಮನಗರಕ್ಕೆ ಬಂದಿದ್ದೇನೆ. ಡಿಕೆ ಸುರೇಶ್ ಅಭಿವೃದ್ಧಿ ಕೆಲಸ ಮಾಡಿದ್ದಾನೆ. ನಮ್ಮ ಸರ್ಕಾರ ಸಹ ಅಭಿವೃದ್ಧಿ ಮಾಡಿದೆ. ಹೀಗಾಗಿ ಈ ಬಾರಿ ಅತಿ ಹೆಚ್ಚು ಮತಗಳನ್ನ ಪಡೆದು ಗೆದ್ದೇ ಗೆಲ್ಲುತ್ತಾರೆ ಎಂದರು.
ಕುಮಾರಸ್ವಾಮಿ ಅವರು ಕೆಲಸ ಮಾಡಿದ್ರೆ ಇಲ್ಲೇ ಚುನಾವಣೆಗೆ ನಿಲ್ಲುತ್ತಿದ್ರು. ಅವರಿಗೆ ಯಾವುದೇ ವಿಶ್ವಾಸ ಇಲ್ಲಿ ಇಲ್ಲ. ಹೊಸದಾಗಿ ಜನರನ್ನ ಮರಳು ಮಾಡೋದಕ್ಕೆ ಮಂಡ್ಯಕ್ಕೆ ಹೋಗಿದ್ದಾರೆ. ಕುಮಾರಸ್ವಾಮಿ ಅವರದ್ದು ಬರೀ ಸ್ವಾರ್ಥದ ರಾಜಕಾರಣ ಎಂದರು ಇದೇ ವೇಳೆ ಜೆಡಿಎಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ ಬಹಿರಂಗವಾಗಿ ಆಹ್ವಾನ ನೀಡಿದರು. ನಮ್ಮ ಸರ್ಕಾರ ಇನ್ನೂ ಹತ್ತು ವರ್ಷ ಇರುತ್ತದೆ. ನಾನೇ ನಿಮ್ಮೆಲ್ಲರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಚುನಾವಣಾ ಫಲಿತಾಂಶವೇ ಉತ್ತರ ಕೊಡುತ್ತೆ; ಮೋದಿ ದೇಶಕ್ಕೆ ಅಂಟಿದ ಶನಿ ಎಂದ ರಮೇಶ್‌ಕುಮಾರ್‌ಗೆ ಬಿಎಸ್‌ವೈ ತಿರುಗೇಟು
ಪ್ರಧಾನಮಂತ್ರಿಗೆ ಚೊಂಬು ತೋರಿಸಿ ಶೂನ್ಯ ಕೊಡುಗೆ ಎಂದಿದ್ದೆವು. ಈಗ ದೇವೇಗೌಡರು ಬೇರೆ ಏನೋ ತಿರುಗಿಸಿ ಹೇಳ್ತಿದ್ದಾರೆ. ಕಾಂಗ್ರೆಸ್ ಚೊಂಬು ಅಭಿಯಾನ ಅಕ್ಷಯಪಾತ್ರೆ ಎಂದಿದ್ದಾರೆ. ಜಿಲ್ಲೆಗೆ ಏನಾದರೂ ಅಭಿವೃದ್ಧಿ ಮಾಡಿದ್ದರೆ ತೋರಿಸಲಿ. ದೇವೇಗೌಡ, ಕುಮಾರಸ್ವಾಮಿ ಅವರೇ ಭಾಷಣ ಮಾಡಿದ್ದಾರೆ. ಕೇಂದ್ರ ಸರ್ಕಾರ ಬರಗಾಲಕ್ಕೆ ಪರಿಹಾರ ಕೊಡಲಿಲ್ಲವೆಂದು ಅವರೇ ಮಂಡ್ಯ, ಮೈಸೂರಿನಲ್ಲಿ ಹೇಳಿದ್ದಾರೆ. ಈಗ ಸಿದ್ದರಾಮಯ್ಯ, ಡಿಕೆಶಿ ಕೆಲಸದ ಮುಂದೆ ಗಾಳಿಯಲ್ಲಿ ತೂರಿಹೋಗ್ತೇವೆ ಅಂತ ಹೆದರಿ ಬಿಜೆಪಿ ಜೊತೆ ಮೈತ್ರಿಯಾಗಿದ್ದಾರೆ. ಜನ ಮೂರ್ಖರಲ್ಲ ಜನರೇ ತೀರ್ಮಾನ ಮಾಡ್ತಾರೆ ಎಂದು ಕಿಡಿಕಾರಿದರು.
ಇನ್ನು ಕೇಂದ್ರ ಬಿಜೆಪಿ ಡಿಕೆ ಸುರೇಶ್‌ರನ್ನ ಟಾರ್ಗೆಟ್ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಡಿಕೆ ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿಯನ್ನ ನಿಲ್ಲಿಸಿದ್ರು. ಆದರೆ ಈಗ ಬೇರೆ ಏನೂ ನಡೀತಿಲ್ಲ ಅಂತಾ ಚಿಹ್ನೆ ಬದಲಾಯಿಸಿದ್ದಾರೆ ಅಷ್ಟೇ. ಚನ್ನಪಟ್ಟಣದಲ್ಲಿ ಹೆಚ್ಚು ಕಾರ್ಯಕರ್ತರು ಬರ್ತಿದ್ದಾರೆ. ಯೋಗೇಶ್ವರ ಸಹ ಗೊತ್ತಲ್ಲ ಹೊಂದಾಣಿಕೆ ಆಗಿಲ್ಲ ಅಂತಾ ಎಂದು ವ್ಯಂಗ್ಯ ಮಾಡಿದರು.
ಡಾಕ್ಟರ್ ಸ್ಪರ್ಧೆಯಿಂದ ಡಿಕೆ ಬ್ರದರ್ಸ್‌ಗೆ ತಲೆನೋವು: ಯೋಗೇಶ್ವರ್
ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ದಾಳಿ ಮಾಡ್ತಾನೆ ಇದ್ದಾರೆ, ಮಾಡಿಸುತ್ತಲೇ ಇದ್ದಾರೆ. ನಿನ್ನೆ ದುಡ್ಡು ಸಿಕ್ಕಿತ್ತು ಅದನ್ನು ಬಿಜೆಪಿಯವರು ಮೂರು ವರ್ಷಗಳ ಹಿಂದೆ ಡ್ರಾ ಮಾಡಿದ್ರಂತೆ. ಅದನ್ನ ಮೂರು ವರ್ಷದ ಹಿಂದೆ ಡ್ರಾ ಮಾಡಿದ್ದು ಅಂತಾ ಲೆಟರ್ ಕೊಟ್ಟಿದ್ದಾರೆ. ನೋಡೋಣ ಇನ್ನೂ ಐಟಿಯವರು ಏನೇನು ಮಾಡ್ತಾರೆ ಅಂತಾ. ಅದೊಂದು ಕಾಗದ ತೋರಿಸಿ 100 ಕಡೆ ಹಣ ಹಂಚಿದ್ದಾರೆ ಎಂದು ಆರೋಪಿಸಿದರು.