40ರಷ್ಟು ಕಮಿಷನ್‌ ಆರೋಪ ನ್ಯಾಯಾಂಗ ತನಿಖೆಯಾಗಲಿ: ಡಿಕೆಶಿ

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿರುವ ಶೇ. 40ರಷ್ಟು ಕಮಿಷನ್‌ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Let there be a judicial inquiry into the 40 percent commission charge says dk shivakumar gvd

ತುಮಕೂರು (ಆ.27): ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿರುವ ಶೇ. 40ರಷ್ಟು ಕಮಿಷನ್‌ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು. ತುಮಕೂರಿನಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳರ ಜಾಗೃತಿ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾರು ಕಮಿಷನ್‌ ಕೊಟ್ಟರೋ, ಬಿಟ್ಟರೋ ನಮ್ಮ ಸರ್ಕಾರ ಇದ್ದಾಗ ಯಾವ ಕಮಿಷನ್‌ ಇಲ್ಲ ಯಾವ್ದೂ ಇರಲಿಲ್ಲ. 

ಕಮಿಷನ್‌ ಇತ್ತು ಅಂದರೆ ನ್ಯಾಯಾಂಗ ತನಿಖೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತಿದ್ದೇನೆ ಎಂದರು. ಅವರು ಮಾಡಿರಲಿ, ಇನ್ನೊಂದು ಸರ್ಕಾರವೇ ಮಾಡಿರಲಿ, ಏನು ಬೇಕಾದರೂ ಮಾಡಿರಲಿ, ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಬೇಕು. ನ್ಯಾಯಾಂಗ ತನಿಖೆಯಾದರೆ ಎಲ್ಲ ಸತ್ಯಗಳು ಆಚೆ ಬರುತ್ತವೆ. ಯಾರ, ಯಾರ ಹತ್ತಿರ ಏನೇನು ದಾಖಲೆ ಇದೆಯೋ, ಅದನ್ನೆಲ್ಲಾ ತಂದು ಬಿಚ್ಚಿಡುತ್ತಾರೆ. ಅದು ಬಿಟ್ಟು ನೀವು ಕೋರ್ಟ್‌ಗೆ ಹೋಗಿ ಅಂದರೆ ಯಾರು ಕೇಳುತ್ತಾರೆ ಎಂದು ಶಿವಕುಮಾರ್‌ ಪ್ರಶ್ನಿಸಿದರು.

ಮೈತ್ರಿ ಸರ್ಕಾರದಲ್ಲೂ ಕಮಿಷನ್‌ ವ್ಯವಹಾರ ನಡೆದಿದೆ: ಎಚ್‌.ಡಿ.ಕುಮಾರಸ್ವಾಮಿ

ಬಿ ರಿಪೋರ್ಟ್‌ ಬರೆಸಿ, ಮುಚ್ಚಾಕುತ್ತಿದ್ದಾರೆ: ಎಂತೆಂಥಹ ಕೇಸ್‌ಗಳು ಕಣ್ಣೆದುರಿಗೆ ನಡೆದು ಹೋಗಿವೆ. ಆತ್ಮಹತ್ಯೆ, ಅತ್ಯಾಚಾರದ ಕೇಸ್‌ಗಳಿಗೆಲ್ಲಾ ಸರ್ಕಾರ ಇದೆ ಎಂದು ಬಿ ರಿಪೋರ್ಟ್‌ ಬರೆಸಿ ಹಾಕಿ, ಬಿಜೆಪಿ ಸರ್ಕಾರದವರು ತನ್ನೆಲ್ಲಾ ಕೇಸ್‌ಗಳನ್ನು ಎಲ್ಲಾ ಮುಚ್ಚಾಕಿಕೊಂಡಿದ್ದಾರೆ. ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಏಕೆ ಸತ್ತ ಎಂಬುದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಉತ್ತರ ಕೊಡಬೇಕು ಎಂದರು.

ಎಚ್‌ಡಿಕೆಯವರನ್ನೇ ಕೇಳಬೇಕು: ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಲ್ಲಿ ಕಮಿಷನ್‌ ಇತ್ತು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನೇ ಕೇಳಬೇಕು. ನನಗೆ ಆ ವಿಷಯ ಗೊತ್ತಿಲ್ಲ. ಅವರು ಒಪ್ಪಿಕೊಳ್ಳೋದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮಲ್ಲಿ ಯಾವುದೂ ಇಲ್ಲ ಎಂದರು.

ಜಿಲ್ಲೆ ವಿಷಯ ಮಾತಾಡಿರುತ್ತಾರೆ: ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಹಾಗೂ ಸಚಿವ ಸುಧಾಕರ್‌ ಭೇಟಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಿವಕುಮಾರ್‌, ಜಿಲ್ಲೆ ವಿಷಯಕ್ಕೆ ಭೇಟಿ ಮಾಡಿರುತ್ತಾರೆ. ಮುನಿಯಪ್ಪ ನಮ್ಮ ಪಕ್ಷದ ಹಿರಿಯ ನಾಯಕರು. ಶುಕ್ರವಾರ ಬೆಳಗ್ಗೆ ನಾನು, ಎಚ್‌.ಡಿ. ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ವಿಶ್ವನಾಥ್‌ ಎಲ್ಲರೂ ಒಂದೇ ವೇದಿಕೆ ಮೇಲೆ ಕುಳಿತಿದ್ದೆವು.  ಹಾಗಂತ ನಾವು ಬೇರೆ ಪಾರ್ಟಿಗೆ ಹೊರಟು ಹೋಗಿದ್ದೆವಾ. ಯಾವುದೇ ಮಾತು ಇಲ್ಲ, ಕತೆಯೂ ಇಲ್ಲ. ಅವರ ಪಾರ್ಟಿ ಅವರದು, ನಮ್ಮ ಪಾರ್ಟಿ ನಮ್ಮದು ಎಂದು ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಚ್‌.ಡಿ. ಕುಮಾರಸ್ವಾಮಿಯವರು ವೇದಿಕೆಯಿಂದ ನಿರ್ಗಮಿಸಿದ ಹೊತ್ತಲೇ, ಡಿ.ಕೆ. ಶಿವಕುಮಾರ್‌ ವೇದಿಕೆಗೆ ಆಗಮಿಸಿದರು.

ನನ್ನ ಜತೆ ವ್ಯವಹಾರ ಮಾಡಿದವರಿಗೆಲ್ಲ ಸಿಬಿಐ ನೋಟಿಸ್‌: ಕಾಂಗ್ರೆಸ್‌ ನಾಯಕ ವಿಜಯ್ ಮುಳುಗುಂದ್‌ಗೆ ಸಿಬಿಐ ನೋಟಿಸ್‌ ನೀಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ಮುಳುಗುಂದ್ ಅವರು ನಮ್ಮ ಪಾರ್ಟಿಯ ಜನರಲ್ ಸೆಕ್ರೆಟರಿ, ನನ್ನ ಆಪ್ತ. ಇನ್ನು, ಅವರೊಬ್ಬರ ಮೇಲೆ ಮಾತ್ರ ನೋಟಿಸ್‌ ಕೊಟ್ಟಿಲ್ಲ. 30-40 ಜನರ ಮೇಲೆ ನೋಟಿಸ್ ಕೊಟ್ಟಿದ್ದಾರೆ. ಯಾರ್ಯಾರು ನನ್ನ ಹತ್ರ ವ್ಯವಹಾರ ಮಾಡಿದ್ದಾರೋ, ನನ್ನ ಜೊತೆ ಬ್ಯುಸಿನೆಸ್‌ ಇದೆಯೋ, ಅವರೆಲ್ಲರಿಗೂ ನೋಟಿಸ್ ಕೊಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಮದರಸ ಶಾಲೆ ಮಕ್ಕಳನ್ನು ಬುದ್ದಿವಂತರಾಗಿಸುವ ಆಸೆ: ಸಚಿವ ನಾಗೇಶ್‌

ಇನ್ನು, ನಾವು ಇದನ್ನು ಮಾತನಾಡಬಾರದು ಲೀಗಲ್ ಆಗಿ ಫೇಸ್ ಮಾಡೋಣ ಎಂದುಕೊಂಡಿದ್ದೇನೆ. ನಾನು ಒಂದು ಲೆಟರ್‌ ಕೂಡ ಬರೆದಿದ್ದೆ. ಚುನಾವಣೆ ಇದೆ, ಪಕ್ಷಕ್ಕ ನನ್ನ‌ ಅಗತ್ಯತೆ ಇದೆ, ಜನರ ಸಮಸ್ಯೆಗಳಿವೆ ಅಂತ ಪತ್ರ ಬರೆದಿದ್ದೆ. ಈ ಮಧ್ಯೆ, ಈಗಿರುವ ಮಂತ್ರಿಗಳು ಶಾಸಕರಾಗಿದ್ದಾಗ ಎಷ್ಟಿತ್ತು ಆಸ್ತಿ, ಈಗ ಬಿಜೆಪಿಯವರದ್ದು ಎಷ್ಟು ಆಗಿದೆ ಆಸ್ತಿ. ಈ ಎಲ್ಲವನ್ನೂ ನಾನು ಆರ್‌ಟಿಐಯಲ್ಲಿ ಮಾಹಿತಿ ತೆಗೆದು ಇಟ್ಟುಕೊಂಡು ಕೂತಿದ್ದೇನೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios