'ಅನುದಾನ ಕೇಳಿದ್ರೆ ಕಾಂಗ್ರೆಸ್ ಸೇರಿ ಅಂತಾರೆ'; ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಮೇಲೂರು ರವಿಕುಮಾರ್ ಅರೋಪ
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದರೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಪಕ್ಷದ ಶಾಸಕರಿಗೆ ಒತ್ತಡ ಹೇರುತ್ತಾರೆ ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ಮೇಲೂರು ರವಿಕುಮಾರ್ ಆರೋಪ ಮಾಡಿದ್ದಾರೆ.
ಚಿಂತಾಮಣಿ (ಏ.15):ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದರೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಪಕ್ಷದ ಶಾಸಕರಿಗೆ ಒತ್ತಡ ಹೇರುತ್ತಾರೆ ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ಮೇಲೂರು ರವಿಕುಮಾರ್ ಆರೋಪ ಮಾಡಿದ್ದಾರೆ.
ಚಿಂತಾಮಣಿ ತಾಲೂಕಿನ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಏನಿಗದಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬು ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಿಮ್ಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುತ್ತೇವೆ ಕಾಂಗ್ರೇಸ್ ಸೇರಿಕೊಳ್ಳಿ ಎಂದು ಪ್ರಚೋದಿಸುವ ಹಾಗೂ ಜೆಡಿಎಸ್ ಪಕ್ಷವಿದೆಯೇ ಎಂದು ಅಪಹಾಸ್ಯ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ..! ಲೋಕಾ ಅಖಾಡದಲ್ಲಿ ಅಭ್ಯರ್ಥಿಗಳ ಏಟು-ಎದಿರೇಟು..!
ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿ
ಆದ್ದರಿಂದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಈ ಲೋಕಸಭಾ ಚುನಾವಣೆಯಲ್ಲಿ ಎಂ.ಮಲ್ಲೇಶ್‌ಬಾಬುರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಕ್ಕ ಉತ್ತರ ನೀಡಬೇಕು. ಪಕ್ಷದ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿರ ನಿರ್ದೇಶನದಂತೆ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬುರನ್ನು ಗೆಲ್ಲಿಸುವುದರ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದರು.
ವಿಧಾನಪರಿಷತ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ನಾವು ಸಂವಿದಾನದಡಿ ಬದುಕುತ್ತಿದ್ದೇವೆ. ಇಂತಹ ಸಂವಿಧಾನ ಕೊಟ್ಟ ಅಂಬೇಡ್ಕರನ್ನು ಸೋಲಿಸಿದ್ದು ಇದೇ ಕಾಂಗ್ರೇಸ್, ಹಾಗಾಗಿ ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ನಂಬಿರುವವರು ಯಾರು ಕಾಂಗ್ರೇಸ್‌ಗೆ ಮತ ಹಾಕುವುದಿಲ್ಲವೆಂದು ಅಭಿಪ್ರಾಯಪಟ್ಟರು.
ಮಲ್ಲೇಶಬಾಬು ಗೆಲ್ಲಿಸಬೇಕು
ಇಂಚರ ಗೋವಿಂದರಾಜು ಮಾತನಾಡಿ, ನಾವು ಈ ಚುನಾವಣೆಯಲ್ಲಿ ಚಲಾಯಿಸುವ ಮತ ಒಬ್ಬ ಸಭ್ಯ, ಸದ್ಗುಣ ವ್ಯಕ್ತಿಯಾದ ಎಂ.ಮಲ್ಲೇಶ್‌ಬಾಬುರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್- ಬಿಜೆಪಿ ಅಧಿಕಾರದ ಆಸೆಗಾಗಿ ಮೈತ್ರಿ: ಸಚಿವ ಡಾ.ಎಂ.ಸಿ.ಸುಧಾಕರ್
ಈ ಸಂದರ್ಭದಲ್ಲಿ ಸೀಕಲ್ ರಾಮಚಂದ್ರಗೌಡ, ರಾಮಲಿಂಗಪ್ಪ, ನಂದನವನ ಶ್ರೀರಾಮರೆಡ್ಡಿ, ಬಂಕ್ ಮುನಿಯಪ್ಪ, ಆನಂದ್‌ಗೌಡ, ಕೆಂಚರ‍್ಲಹಳ್ಳಿ ಕೃಷ್ಣಾರೆಡ್ಡಿ, ವೆಂಕಟೇಶ್, ಆರ್.ಟಿ.ಪ್ರಸಾದ್, ರಮೇಶ್, ಮಿಟ್ಟಹಳ್ಳಿ ಶ್ರೀರಾಮರೆಡ್ಡಿ, ಬುರಡಗುಂಟೆ ಬಷೀರ್, ಭರತ್, ತುಳವನೂರು ರವಿ ಮತ್ತಿತರರು ಉಪಸ್ಥಿತರಿದ್ದರು