ಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಲಂಕಾಧಿಪತಿ ರಾವಣನಿಗೆ ಹೋಲಿಸಿದ್ದು ವಿವಾದಕ್ಕೀಡಾಗಿತ್ತು. ಅದಕ್ಕೆ ಬಿಜೆಪಿಯೂ ತಿರುಗೇಟು ನೀಡಿತ್ತು. ರಾವಣೆ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕಿ ರೇಣುಕಾ ಚೌಧರಿ ಈ ಹಿಂದೆ ಪ್ರಧಾನಿ ನನ್ನನ್ನು ಶೂರ್ಪನಖಿಗೆ ಹೋಲಿಸಿದ್ದರು ಆಗ ಈ ಮೀಡಿಯಾಗಳು ಎಲ್ಲಿದ್ದವು ಎಂದು ಕಿಡಿಕಾರಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಲಂಕಾಧಿಪತಿ ರಾವಣನಿಗೆ ಹೋಲಿಸಿದ್ದು ವಿವಾದಕ್ಕೀಡಾಗಿತ್ತು. ಅದಕ್ಕೆ ಬಿಜೆಪಿಯೂ ತಿರುಗೇಟು ನೀಡಿತ್ತು. ರಾವಣೆ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕಿ ರೇಣುಕಾ ಚೌಧರಿ ಈ ಹಿಂದೆ ಪ್ರಧಾನಿ ನನ್ನನ್ನು ಶೂರ್ಪನಖಿಗೆ ಹೋಲಿಸಿದ್ದರು ಆಗ ಈ ಮೀಡಿಯಾಗಳು ಎಲ್ಲಿದ್ದವು ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು ನನ್ನನ್ನು ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ರಾವಣನ ಸಹೋದರಿ ಶೂರ್ಪನಖಿಗೆ ಹೋಲಿಸಿದ್ದರೂ ಆಗ ಮಾಧ್ಯಮಗಳು ಎಲ್ಲಿ ಹೋಗಿದ್ದವು ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತ ರೇಣುಕಾ ಚೌಧರಿ ಟ್ವಿಟ್ ರಿಟ್ವಿಟ್ ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್(JaiRam Ramesh), ಹೌದು ಇದು ನಿಜ. ಆ ಸಂದರ್ಭದಲ್ಲಿ ಸಂಸತ್ ಕಲಾಪದಲ್ಲಿ ನಾನು ಹಾಜರಿದ್ದೆ. ಮೋದಿ ಹೇಳಿಕೆಯಿಂದ ಬಿಜೆಪಿ ನಾಯಕರು ಕುಳಿತಿದ್ದ ಜಾಗ ನಗೆಗಡಲಾಗಿತ್ತು. ಸ್ವತಃ ಮೋದಿಯೂ ನಕ್ಕಿದ್ದರು. ಆದರೆ ಯಾವ ಮೀಡಿಯಾಗಳು ಕೂಡ ಮೋದಿಯವರನ್ನು ಟೀಕಿಸಲಿಲ್ಲ ಎಂದು ಜೈ ರಾಮ್ ರಮೇಶ್ ಬರೆದುಕೊಂಡಿದ್ದಾರೆ. ಇತ್ತ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ರೇಣುಕಾ ಚೌಧರಿಯವರನ್ನು ಶೂರ್ಪನಖಿಗೆ ಹೋಲಿಸಿದ ಸಂದರ್ಭದ ವಿಡಿಯೋ ತುಣುಕೊಂದು ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Scroll to load tweet…

ನವಂಬರ್ 29 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿದ್ದರು. ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಗುಜರಾತ್‌ನ ಅಹಮದಾಬಾದ್‌ನ ಬೆಹ್ರಾಮ್‌ಪುರದಲ್ಲಿ ಮಾತನಾಡಿದ ಖರ್ಗೆ(Mallikarjun Kharge), ಪ್ರಧಾನಿ ನರೇಂದ್ರ ಮೋದಿಗೆ ರಾವಣನಂತೆ 100 ತಲೆಗಳಿವೆಯೇ. ಪ್ರಧಾನಿ ಮೋದಿ (Prime Minister Narendra Modi) ಯಾವಾಗಲೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಅವರು ಬೇರೆ ಯಾರನ್ನೂ ನೋಡಬೇಡಿ, ಮೋದಿಯತ್ತ ನೋಡಿ ಮತ ಚಲಾಯಿಸಿ ಎನ್ನುತ್ತಾರೆ. ಎಷ್ಟು ಸಲ ಅಂತ ನಾವು ನಿಮ್ಮನ್ನು ನೋಡಬೇಕು? ಕಾರ್ಪೋರೇಷನ್ ಚುನಾವಣೆಯೇ ಬರಲಿ, ಎಂಎಲ್‌ಎ ಚುನಾವಣೆ ಅಥವಾ ಎಂಪಿ ಚುನಾವಣೆಯೇ ಬರಲಿ ಬಿಜೆಪಿಯವರು ಮೋದಿಯತ್ತ ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ನಿಮಗೇನಾದರೂ ರಾವಣನಂತೆ 100 ತಲೆ ಇದೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

Scroll to load tweet…

ಈ ವಿಚಾರವನ್ನು ಖಂಡಿಸಿದ ಬಿಜೆಪಿ ಗುಜರಾತ್ ಚುನಾವಣೆಯ ಬಿಸಿಯನ್ನು ತಡೆದುಕೊಳ್ಳಲಾಗದೇ ಖರ್ಗೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ಈ ವಿಚಾರವನ್ನು ಮತ್ತಷ್ಟು ದೊಡ್ಡದು ಮಾಡಿತ್ತು. ಇತ್ತ ಈ ಹೇಳಿಕೆ ಮತ್ತಷ್ಟು ವಿವಾದಕ್ಕೀಡಾಗುತ್ತಿದ್ದಂತೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಈ ಹಿಂದೆ ಪ್ರಧಾನಿ ರಾಜ್ಯಸಭಾ ಕಲಾಪದಲ್ಲಿ ತನ್ನನ್ನು ಶೂರ್ಪನಖಿಗೆ ಹೋಲಿಸಿದ ಕ್ಷಣವನ್ನು ಮೆಲುಕು ಹಾಕಿದ್ದು, ಆ ಸಂದರ್ಭದಲ್ಲಿ ಮಾಧ್ಯಮಗಳು ಎಲ್ಲಿ ಹೋಗಿದ್ದವು ಎಂದು ಪ್ರಶ್ನೆ ಮಾಡಿದ್ದಾರೆ. 

ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಬಿಜೆಪಿ ತಿರುಗೇಟು

Scroll to load tweet…

ಈಗ ವೈರಲ್ ಆಗಿರುವ 2018ರ ರಾಜ್ಯಸಭಾ ಕಲಾಪದ ಹಳೆ ವಿಡಿಯೋದಲ್ಲಿ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆಗೆ ಸಂಸದೆ ರೇಣುಕಾ ಚೌಧರಿ ಜೋರಾಗಿ ನಗುತ್ತಿರುತ್ತಾರೆ. ಈ ಸಭಾಧ್ಯಕ್ಷ ವೆಂಕಯ್ಯ ನಾಯ್ಡು(Venkaiah Naidu) ಅವರು, ನಿಮ್ಮ ಸಮಸ್ಯೆ ಏನು? ನಿಮಗೇನಾದರೂ ಸಮಸ್ಯೆ ಆಗಿದ್ದರೆ ವೈದ್ಯರ ಬಳಿ ಹೋಗಿ, ದಯವಿಟ್ಟು ಸುಮ್ಮನೇ ಕುಳಿತುಕೊಳ್ಳಿ ಎಂದು ಗದರುತ್ತಾರೆ. ಆದರೆ ರೇಣುಕಾ ಮಾತ್ರ ನಗುತ್ತೀರುತ್ತಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿಯೂ ಸುಮ್ಮನಿರದೇ ಸಭಾಪತಿಜೀ ರೇಣುಕಾಜೀ ಅವರಿಗೆ ನೀವು ನಗಲು ಬಿಡಿ ರಾಮಾಯಣ ಸೀರಿಯಲ್ ನಂತರ ಈ ರೀತಿಯ ನಗುವನ್ನು ಕೇಳುವ ಸೌಭಾಗ್ಯ ಇಂದು ನಮಗೆ ಒದಗಿ ಬಂದಿದೆ ಎಂದು ವ್ಯಂಗ್ಯವಾಡುತ್ತಾರೆ. ಈ ವೇಳೆ ಬಿಜೆಪಿ ಸಂಸದರು ಬೆಂಚನ್ನು ಕುಟ್ಟಿ ಜೋರಾಗಿ ಬಿದ್ದು ಬಿದ್ದು ನಗಲು ಶುರು ಮಾಡುತ್ತಾರೆ. ಒಬ್ಬರನ್ನೊಬ್ಬರು ಕಾಲೆಳೆಯುವ ಸಂಸತ್ ಕಲಾಪದ ಈ ಸ್ವಾರಸ್ಯಕರ ವಿಡಿಯೋ ಈಗ ರೇಣುಕಾ ಚೌಧರಿ (Renuka Chowdhury) ಹೇಳಿಕೆಯಿಂದಾಗಿ ಮತ್ತೆ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಿದೆ. 

Scroll to load tweet…

ಇತ್ತ ಬಿಜೆಪಿಯವರಾಗಿರುವ ಪ್ರಧಾನಿ ನರೇಂದ್ರ ಮೋದಿ ರಾವಣ, ಕಾಂಗ್ರೆಸ್‌ನ ರೇಣುಕಾ ಚೌಧರಿ ಶೂರ್ಪನಖಿ ಆದರೆ ಇವರಿಬ್ಬರು ಅಣ್ಣತಂಗಿಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಕೈ ನಾಯಕಿ ಪೊಲೀಸ್ ಕೊರಳ ಪಟ್ಟಿ ಹಿಡಿದಿದ್ದೇಕೆ?