Asianet Suvarna News Asianet Suvarna News

ಸಚಿವ ಸುಧಾಕರ್ ಹೇಳಿದ 'ಅನೈತಿಕ ಸಂಬಂಧ': ಅಸಮಾಧಾನ ಹೊರಹಾಕಿದ ಶಾಸಕಿಯರು!

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಅನೈತಿಕ ಸಂಬಂಧ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅದಲ್ಲೂ ಮಹಿಳಾ ಶಾಸಕಿಯರು ಸಹ ಸಚಿವ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka WOMEN MLAs Angry on Minister Dr K Sudhakar Statement rbj
Author
Bengaluru, First Published Mar 24, 2021, 4:03 PM IST

ಬೆಂಗಳೂರು, (ಮಾ.24) : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. 

ಇದರ ಮಧ್ಯೆ 'ಏಕಪತ್ನಿ ವ್ರತಸ್ಥರು ಯಾರಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸವಾಲು ಹಾಕಿದ್ದು, ಇದು ಮಹಿಳಾ ಶಾಸಕಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹೇಳಿಕೆ ಅವರ‌ ಮನಸ್ಥಿತಿಯನ್ನು ತೋರಿಸುತ್ತದೆ. ಯಾರೋ ಮಾಡಿದ ತಪ್ಪು ಸಮರ್ಥನೆ ಮಾಡಿಕೊಳ್ಳಲು ಮತ್ಯಾರನ್ನೋ ಎಳೆದು ತರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಸಂಸ್ಕಾರ ಇದ್ದವರು ಈ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ ಎಂದು ಮಹಿಳಾ ಶಾಸಕಿಯರು ಅಸಮಾಧಾನ ಹೊರಹಾಕಿದರು.

ಸಿದ್ದರಾಮಯ್ಯ, ಡಿಕೆಶಿ, ರಮೇಶ್ ಕುಮಾರ್ ಏಕಪತ್ನಿ ವ್ರತಸ್ಥರಲ್ವಾ, ಈ ತನಿಖೆಗೆ ಒಪ್ಪಲಿ: ಸುಧಾಕರ್ ಸವಾಲ್..!

ತಪ್ಪು ಯಾರು ಮಾಡಿದರೂ ತಪ್ಪು. ಕೆಲ ವಿಷಯಗಳು ಹೇಳಲಾರದ ಸಂಗತಿಗಳಿರುತ್ತವೆ. ಎಲ್ಲವನ್ನೂ ಬೀದಿ ರಂಪ‌ ಮಾಡಿ ಸದನದ ಗೌರವ ಘನತೆ ಹರಾಜು ಹಾಕಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ನಾವೆಲ್ಲರೂ ತುತ್ತಾಗಬೇಕಾಗಿದೆ ಎಂದು ಶಾಸಕಿಯರು ಕಿಡಿಕಾರಿದರು.

 ಇನ್ನು ಈ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, 224 ಶಾಸಕರಿಗೆ ಚಾಲೆಂಜ್ ಹಾಕಿರುವ ಸುಧಾಕರ್ ಅವರ ಹೇಳಿಕೆ ಆಕ್ಷೇಪಾರ್ಹವಾದದ್ದು. ಇದು ಎಲ್ಲರಿಗಾದ ಅವಮಾನ ಎಂದರು.

ಸಚಿವ ಡಾ.ಸುಧಾಕರ್ ಏನು ಹೇಳಿದ್ದಾರೆ ಎನ್ನುವುದು ಸರಿಯಾಗಿ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೆ ತಪ್ಪು ಸಚಿವೆ ಶಶಿಕಲಾ ಜೊಲ್ಲೆ ಅವರು ತಮ್ಮ ಸಂಪುಟ ಸಹೋದ್ಯೋಗಿ ಸುಧಾಕರ್ ಮಾತನ್ನು ಖಂಡಿಸಿದರು.

Follow Us:
Download App:
  • android
  • ios