ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲು ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರು ಹಂಗಾಮಿ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೊದಲ ಎರಡು ದಿನಗಳ ಕಾಲ ನೂತನ ಸದಸ್ಯರ ಪ್ರಮಾಣ ವಚನ ಬೋಧನೆ ಪ್ರಕ್ರಿಯೆ ನಡೆಯಲಿದೆ. ಮೂರನೇ ದಿನ ನೂತನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಸ್ಪೀಕರ್ ಸ್ಥಾನಕ್ಕೆ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಹಾಗೂ ಟಿ.ಬಿ.ಜಯಚಂದ್ರ ಹೆಸರು ರೇಸ್‌ನಲ್ಲಿದೆ.
ಬೆಂಗಳೂರು(ಮೇ.21): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿಂದೆಯೇ ಸೋಮವಾರದಿಂದ ಮೂರು ದಿನಗಳ ಕಾಲ (ಮೇ 22ರಿಂದ 24) ವಿಧಾನಸಭೆಯ ಅಧಿವೇಶನ ಕರೆಯಲಾಗಿದ್ದು, ನೂತನ ಸದಸ್ಯರ ಪ್ರಮಾಣ ವಚನ ಹಾಗೂ ಹೊಸ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನ ಕರೆಯಲು ಹಾಗೂ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಅಧಿಕೃತವಾಗಿ ರಾಜ್ಯಪಾಲರು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲು ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರು ಹಂಗಾಮಿ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕರ್ನಾಟಕದ ಹೊಸ ಶಾಸಕರಲ್ಲಿ 7 ವೈದ್ಯರು, 9 ವಕೀಲರು..!
ಮೊದಲ ಎರಡು ದಿನಗಳ ಕಾಲ ನೂತನ ಸದಸ್ಯರ ಪ್ರಮಾಣ ವಚನ ಬೋಧನೆ ಪ್ರಕ್ರಿಯೆ ನಡೆಯಲಿದೆ. ಮೂರನೇ ದಿನ ನೂತನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಸ್ಪೀಕರ್ ಸ್ಥಾನಕ್ಕೆ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಹಾಗೂ ಟಿ.ಬಿ.ಜಯಚಂದ್ರ ಹೆಸರು ರೇಸ್‌ನಲ್ಲಿದೆ.
ನೂತನ ಸದಸ್ಯರಿಗೆ ಮಾಹಿತಿ ರವಾನೆ:
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸದಸ್ಯರಿಗೆ ಅಧಿವೇಶನದ ಬಗ್ಗೆ ದೂರವಾಣಿ ಸೇರಿದಂತೆ ಟೆಲಿಗ್ರಾಂ, ಇ-ಮೇಲ್, ವಾಟ್ರಾಪ್, ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡುವ ಕಾರ್ಯವನ್ನು ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಡಲಿದ್ದಾರೆ.
ಹೊಸ ವರ್ಷಕ್ಕೆ ಬಿಬಿಎಂಪಿ ಸ್ಥಾಯಿ ಸಮಿತಿ ಎಲೆಕ್ಷನ್
ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂವಿಧಾನ, ವಿಧಾನಸಭೆಯ ನಡಾವಳಿಯ ಪುಸ್ತಕ ಒಳಗೊಂಡ ಬ್ಯಾಗ್ ನೀಡಲಾಗುತ್ತದೆ. ಈ ಬಗ್ಗೆ ಹಿಂದಿನ ಸಭಾಧ್ಯಕ್ಷರ ಅನುಮತಿ ಮೇರೆಗೆ ಲಿಡ್ಕರ್ ಸಂಸ್ಥೆಯಿಂದ ಬ್ಯಾಗ್‌ಗಳನ್ನು ಸಚಿವಾಲಯ ಖರೀದಿಸಿದೆ.
ಭಾನುವಾರವೂ ಕಚೇರಿ ಕೆಲಸ:
ಸೋಮವಾರದಿಂದ ನಡೆಯುವ ಅಧಿವೇಶನ ಸಿದ್ಧತೆಗೆ ಸಚಿವಾಲಯದ ಸಿಬ್ಬಂದಿಗಳು ಭಾನುವಾರ ಸಹ ಕಚೇರಿಗೆ ಆಗಮಿಸಲಿದ್ದಾರೆ. ಪ್ರಮಾಣ ವಚನ ಬೋಧನೆಗೆ ಸಂಬಂಧಿಸಿದಂತೆ ಪ್ರತಿ ಸದಸ್ಯರಿಗೆ ಪ್ರತ್ಯೇಕ ಫೈಲ್ ಸಿದ್ಧಪಡಿಸಿಕೊಳ್ಳಬೇಕಾಗಿದೆ. ಹೀಗಾಗಿ ಎಲ್ಲ ಸಿಬ್ಬಂದಿಗಳಿಗೆ ಕಚೇರಿಗೆ ಬರುವಂತೆ ಸೂಚಿಸಲಾಗಿದೆ.
