ಬೆಂಗಳೂರು, [ನ.14]: ತೀವ್ರ ಕುತೂಹಲ ಮೂಡಿಸಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು [ಗುರುವಾರ] ಹೊರಬಿದ್ದಿದೆ. ಒಟ್ಟು 418 ವಾರ್ಡ್ ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಆಡಳಿತರೂಢ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ.

ಒಟ್ಟು 418 ವಾರ್ಡ್ ಗಳ ಪೈಕಿ ಕಾಗ್ರೆಸ್ 151 ವಾರ್ಡ್ ಗಳಲ್ಲಿ ಜಯಭೇರಿ ಮೇಲುಗೈ ಸಾಧಿಸಿದರೆ, ಆಡಳಿತರೂಢ ಬಿಜೆಪಿ 125 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇನ್ನು ಜೆಡಿಎಸ್ ಕೇವಲ 63 ವಾರ್ಡ್ ಗಳಲ್ಲಿ ಗೆಲುವು ಸಾಧಿಸವಲ್ಲಿ ಯಶಸ್ವಿಯಾಗಿದ್ರೆ, ಇನ್ನು ಪಕ್ಷೇತರ ಅಭ್ಯರ್ಥಿಗಳು ಒಟ್ಟು 55 ವಾರ್ಡ್ ಗಳಲ್ಲಿ ಗೆಲುವಿನ ನಗೆಬೀರಿದ್ದಾರೆ.

14 ಪಾಲಿಕೆ ಫಲಿತಾಂಶ
ಈ ಸ್ಥಳೀಯ ಸಂಸ್ಥೆಗಳ ಫಲಿತಾಂಶ ರಾಜ್ಯ ರಾಜಕೀಯ ಲೆಕ್ಕಾಚಾರವನ್ನೇ ಉಲ್ಟಾ ಪಲ್ಟಾ ಮಾಡಿದೆ. ಒಟ್ಟು 14 ಪಾಲಿಕೆ ಫಲಿತಾಂಶ ಹೊರಬಿದ್ದಿದ್ದು.  7 ಪಾಲಿಕೆ ಸ್ಥಿತಿ ಅಂತಂತ್ರವಾಗಿದೆ. ಉಳಿದಂತೆ ಕಾಂಗ್ರೆಸ್ ಗೆ 2 ಸ್ಥಾನ, ಬಿಜೆಪಿಗೆ 4 ಸ್ಥಾನ ಲಭಿಸಿದ್ರೆ. ಜೆಡಿಎಸ್ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. 

ದಾವಣಗೆರೆ : ಮ್ಯಾಜಿಕ್ ಸಂಖ್ಯೆ ತಲುಪಲು ವಿಫಲ - ಅಧಿಕಾರ ಪಡೆಯಲು ಬಿಜೆಪಿ, ಕೈ ರಣತಂತ್ರ

ಬಿಜೆಪಿ ತೆಕ್ಕೆಯಲ್ಲಿದ್ದ ಬೆಣ್ಣೆ [ದಾವಣಗೆರೆ] 'ಕೈ’ವಶ 
ಬಿಜೆಪಿ ತೆಕ್ಕೆಯಲ್ಲಿದ್ದ ದಾವಣಗೆರೆ ಮಹಾನಗರ ಪಾಲಿಕೆ, 45 ವಾರ್ಡ್ ಗಳ ಪೈಕಿ 22 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಾಲಾಗಿದೆ. ಉಳಿದಂತೆ ಬಿಜೆಪಿ 17, ಜೆಡಿಎಸ್ 1 ಮತ್ತು ಇತರೆ 1 ಸ್ಥಾನ ಪಡೆದಿದೆ.

ಮಂಗಳೂರು ಪಾಲಿಕೆ ಚುನಾವಣೆ: BJPಗೆ ಭರ್ಜರಿ ಜಯ

ದಕ್ಷಿಣ ಕನ್ನಡ ಮತ್ತೆ ಬಿಜೆಪಿ ಪಾಲು
ಹೌದು....ಮಂಗಳೂರು ಮಹಾನಗರ ಪಾಲಿಕೆ ಎಂದಿನಂತೆ ಈ ಬಾರಿಯೂ ಬಿಜೆಪಿ ಪಾಲಾಗಿದೆ. ಬಿಜೆಪಿ ಅಭ್ಯರ್ಥಿ  ಲ್ಯಾನ್ಸಿ ಲಾಟ್ ಪಿಂಟೊ 7ನೇ ಬಾರಿ ಜಯಭೇರಿ ಭಾರಿಸುವ ಮೂಲಕ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿದ್ದಾರೆ. ಇನ್ನೂ 60 ವಾರ್ಡ್ ಗಳಲ್ಲಿ ಬಿಜೆಪಿಗೆ 44, ಕಾಂಗ್ರೆಸ್ ಗೆ 14, ಇತರೆ ಅಭ್ಯರ್ಥಿಗಳು 2 ವಾರ್ಡ್ ಗಳಲ್ಲಿ ಗೆಲುವು ಪಡೆದಿದ್ರೆ, ಜೆಡಿಎಸ್ ಯಾವುದೇ ಖಾತೆ ತೆರೆದಿಲ್ಲ. 

ಕೋಲಾರ: ನಗರಸಭೆ ಚುನಾವಣಾ ಫಲಿತಾಂಶ ಪ್ರಕಟ, ಅಧಿಕಾರ ಅತಂತ್ರ

6 ನಗರಸಭೆಗಳ ಪೈಕಿ 4 ಕ್ಷೇತ್ರಗಳು ಅತಂತ್ರ 
ಕೋಲಾರ, ಮುಳಬಾಗಿಲು, ಕೆಜಿಎಫ್, ಚಿಂತಾಮಣಿ ನಗರಸಭೆ ಫಲಿತಾಂಶ ಅತಂತ್ರವಾಗಿದ್ದು, ಕನಕಪುರ, ಗೌರಿಬಿದನೂರು ನಗರಸಭೆ ಮಾತ್ರ ಕಾಂಗ್ರೆಸ್ ಪಾಲಾಗಿದೆ.  ಗೌರಿಬಿದನೂರು ನಗರಸಭೆ 22 ನೇ ವಾರ್ಡ್ ನಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ತಲಾ 439 ಪಡೆದಿದ್ದರು. ಒಂದೇ ಒಂದು ಅಂಚೆ ಮತದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗಿರೀಶ್ ಗೆಲುವಿನ ನಗೆ ಬೀರಿದ್ದಾರೆ. 

ಗೌರಿಬಿದನೂರಿನಲ್ಲಿ JDS, ಕಾಂಗ್ರೆಸ್ ಅಭ್ಯರ್ಥಿಗಳ ಟೈ, ಲಾಟರಿಗೆ ಜೈ

3 ಪುರಸಭೆ.. ಮೂರು ಪಾಲು..!  
ಮಾಗಡಿ ಪುರಸಭೆ ಜೆಡಿಎಸ್ ಪಾಲಾದ್ರೆ, ಬೀರೂರು ಪುರಸಭೆ ಸ್ಥಿತಿ ಅತಂತ್ರವಾಗಿದೆ. ಕಂಪ್ಲಿ ಪುರಸಭೆ ಬಿಜೆಪಿ ಪಾಲಾಗಿದ್ದು, ಎರಡೂ ವಿಚಿತ್ರ ಕ್ಷಣಕ್ಕೆ ಸಾಕ್ಷಿಯಾಗಿದೆ. ಮದುವೆ ದಿನವೇ ಪುರಸಭೆ 8ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ ಸೋಲಿನ ರುಚಿ ನೋಡಿದ್ರೆ ಇನ್ನೊಂದೆಡೆ 4 ಮತ್ತು 5ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ತಾಯಿ, ಮಗ ಕೂಡ ಸೋಲನುಭವಿಸಿದ್ದಾರೆ.

JDSಗೆ ಭರ್ಜರಿ ಜಯಭೇರಿ : ಮಾಗಡಿ ವಶಮಾಡಿಕೊಂಡ ದಳಪತಿಗಳು

3ರಲ್ಲಿ 2 ಪಟ್ಟಣ ಪಂಚಾಯತಿಯಲ್ಲಿ ಅರಳಿದ ಕಮಲ  
ಜೋಗ, ಕುಂದಗೋಳ ಪಟ್ಟಣ ಪಂಚಾಯಿತಿ ಬಿಜೆಪಿ ಪಾಲಾಗಿದೆ. ಕುಂದಗೋಳದಲ್ಲಿ ಬಿಜೆಪಿ 12 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ರೆ, ಕಾಂಗ್ರೆಸ್ ಕೇವಲ 5 ವಾರ್ಡ್ ಗೆಲ್ಲುವ ಮೂಲಕ ಶಾಸಕಿ ಕುಸುಮಾ ಶಿವಳ್ಳಿಗೆ ಭಾರೀ ಮುಖಭಂಗವಾಗಿದೆ. ಇನ್ನು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅತಂತ್ರವಾಗಿದೆ.

ಒಟ್ಟಿನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಲೋಕಲ್ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಆಡಳಿತರೂಢ ಬಿಜೆಪಿಗೆ ಹಿನ್ನಡೆಯಾಗಿದ್ದಂತೂ ನಿಜ. ಮತ್ತೊಂದು ಪ್ರಮುಖ ಅಂಶ ಅಂದ್ರೆ ಈಗ 15 ಅನರ್ಹ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಎದುರಾಗಿದ್ದು, ಇದೇ ಡಿಸೆಂಬರ್ 5ರಂದು ನಡೆಯಲಿಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಷ್ಠೆಯಾಗಿರುವ ಉಪಚುನಾವಣೆಯಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎನ್ನುವುದು ಡಿ.9ಕ್ಕೆ ತಿಳಿಯಲಿದೆ.