ಮಾಗಡಿ [ನ.14]: ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ  ಫಲಿತಾಂಶ ಇಂದು ಪ್ರಕಟವಾಗಿದೆ. ವಿಧಾಸನಭಾ ಉಪ ಚುಣಾವಣೆಗೂ ಮುನ್ನ ಫಲಿತಾಂಶ ಹೊರ ಬಿದ್ದುದ್ದು, ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಭರ್ಜರಿ ಜಯಗಳಿಸಿದೆ. 

ಮಾಗಡಿ ಪುರಸಭೆ ಚುನಾವಣೆಯ ಒಟ್ಟು 23 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 12 ಸ್ಥಾನ ಪಡೆದುಕೊಂಡು ಅಧಿಕಾರಕ್ಕೆ ಏರಲು ಸಜ್ಜಾಗಿದೆ. 

ಜೆಡಿಎಸ್ 12 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ 10 ಸ್ಥಾನದಲ್ಲಿ ಜಯಗಳಿಸಿದೆ. ಬಿಜೆಪಿ 1 ಸ್ಥಾನದಲ್ಲಿ ಗೆಲುವು ಪಡೆದಿವೆ.  ಮಾಗಡಿ ಪುರಸಭೆಯು ಹೆಚ್ಚಿನ ಸ್ಥಾನ ಪಡೆದ ಜೆಡಿಎಸ್ ಪಾಲಾಗಿದೆ.    

ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡರು ಸೇರಿದಂತೆ ಹಲವರು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದು, ಜೆಡಿಎಸ್ ಜಯಭೇರಿ ಭಾರಿಸಿದೆ. 

ಮಾಗಡಿ : ‘ಜೆಡಿಎಸ್-ಕಾಂಗ್ರೆಸ್ ನೂರಾರು ಮುಖಂಡರು ಬಿಜೆಪಿಗೆ’...

ಮಾಗಡಿ ಪುರಸಭೆಯಲ್ಲಿ 23 ವಾರ್ಡುಗಳಲ್ಲಿ ಕಾಂಗ್ರೆಸ್ 23, ಜೆಡಿಎಸ್ 23, ಬಿಜೆಪಿ 23, ಎಸ್ ಡಿಪಿಐ 2, ಪಕ್ಷೇತರರು 3 ಮಂದಿ ಸೇರಿ ಒಟ್ಟು 74 ಅಭ್ಯರ್ಥಿಗಳು ಕಣದಲ್ಲಿದ್ದರು. 

ಭಾರೀ ಕುತೂಹಲ ಮೂಡಿಸಿದ ಬದ್ಧ ವೈರಿಗಳ ಗೌಪ್ಯ ಸಭೆ!...
 
ರಾಜ್ಯದಲ್ಲಿ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. ಎರಡು ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆದಿದೆ.