ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಬ್ರೇಕ್‌ಫಾಸ್ಟ್ ಸಭೆ ಮುಕ್ತಾಯಗೊಂಡಿದೆ. ಹೈಕಮಾಂಡ್ ಸೂಚನೆಯಂತೆ ಮುಂದುವರಿಯಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್‌ಫಾಸ್ಟ್ ಮೀಟಿಂಗ್ ಅಂತ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳೋಣ ಎಂಬ ನಿರ್ಧಾರಕ್ಕೆ ಉಭಯ ನಾಯಕರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಮತ್ತು ಡಿಸಿಎಂ ಜಂಟಿ ಸುದ್ದಿಗೋಷ್ಠಿ ನಡೆಸಿ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಏನಾಯ್ತು ಎಂಬುದರ ಮಾಹಿತಿ ನೀಡುವ ಸಾಧ್ಯತೆಗಳಿವೆ.
ಕಾಶಿ ಪೀಠದ ಕಿರಿಯ ಜಗದ್ಗುರುಗಳ ತೀಕ್ಷ್ಣ ಪ್ರತಿಕ್ರಿಯೆ
ಯಾರೇ ಸಿಎಂ ಆದ್ರೂ ಸ್ಥಿರ ಸರ್ಕಾರ ಕೊಡಲಿ. ರೈತರಿಗೆ ಅನಕೂಲ ಆಗಲಿ. ಯೋಗ್ಯ ಸರ್ಕಾರ ಮಾಡಿಕೊಂಡು ಹೋಗಲಿ. ಸ್ಥಿರ ಸರ್ಕಾರ ಇದ್ದರೆ ಯೋಗ್ಯ ಆಡಳಿತ ಕೊಡೋಕೆ ಆಗುತ್ತೆ. ಕಚ್ಚಾಡಿಕೊಂಡಿದ್ದರೆ ರಾಜ್ಯದ ಅಧೋಗತಿಗೆ ಕಾರಣ ಆಗುತ್ತೆ. ಕಚ್ಚಾಡೋದನ್ನ ನಿಲ್ಲಿಸಿ ಯೋಗ್ಯ ನಿರ್ಣಯ ತಗೊಳ್ಳಲಿ. ಧರ್ಮದಲ್ಲಿ ರಾಜಕೀಯ ಬೇಡ. ರಾಜಕಾರಣದಲ್ಲಿ ಧರ್ಮ ಇರಲಿ. ಇಬ್ರೂ ಯೋಗ್ಯ ಇದಾರೆ. ಮೊದಲು ಏನು ಸಮಂಜಸ ನಿರ್ಣಯ ಆಗಿತ್ತೋ ,ಮೊದಲು ಮಾತುಕತೆ ಏನಾಗಿತ್ತೋ ಆ ರೀತಿ ಹೈಕಮಾಂಡ್ ನಿರ್ಣಯ ತಗೊಳ್ಳಲಿ. ಹೈಕಮಾಂಡ್ ಯೋಗ್ಯ ನಿರ್ಣಯ ತಗೊಳ್ಳಲಿ ಎಂದು ಕಾಶಿ ಪೀಠದ ಕಿರಿಯ ಜಗದ್ಗುರುಗಳ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.


