ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ, ತಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಒಟ್ಟಾಗಿ ಕೆಲಸ ಮಾಡುವುದಾಗಿ ಮತ್ತು ಮುಂದಿನ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸುವುದಾಗಿ ಅವರು ದೃಢಪಡಿಸಿದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆಯಾಗಿ ಉಪಾಹಾರ ಸೇವಿಸಿದ ಬಳಿಕ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದರು. ಬ್ರೇಕ್‌ಫಾಸ್ಟ್ ನಲ್ಲಿ ಪೊನ್ನಣ್ಣ ಅವರಿದ್ದರು. ಕೆಸಿ ವೇಣುಗೋಪಾಲ್ ಕರೆ ಮಾಡಿ, ಉಪಾಹಾರಕ್ಕೆ ಕರೆಯುವಂತೆ ಹೇಳಿದ್ದರು. ಹಾಗಾಗಿ ಶಿವಕುಮಾರ್ ನಮ್ಮ ಮನೆಗೆ ಬಂದಿದ್ದರು. ಮುಂದೊಂದ ದಿನ ನಾನು ಅವರ ಮನೆಗೆ ಊಟಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಅವಿಶ್ವಾಸ ಮಂಡನೆ ಮಾಡೋದು ಅಸಾಧ್ಯ
2028ರ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತೆಗೆದುಕೊಂಡು ಬರಬೇಕೆಂದು ಚರ್ಚೆ ಮಾಡಿದ್ದೇನೆ. ಇವತ್ತಿನವರೆಗೂ ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ. ಮುಂದೆಯೂ ಇರಲ್ಲ. ಮುಂದಿನ ಚುನಾವಣೆಗಳನ್ನು ಜೊತೆಯಾಗಿ ಎದುರಿಸುತ್ತೇವೆ. ಸುಳ್ಳು ಅಪವಾದಗಳನ್ನು ಮಾಡೋದು ಜೆಡಿಎಸ್ ಮತ್ತು ಬಿಜೆಪಿಯ ಚಾಳಿ. ವಿಪಕ್ಷಗಳನ್ನು ನಾವಿಬ್ಬರು ಸಮರ್ಥವಾಗಿ ಎದುರಿಸುತ್ತೇವೆ. ಅವಿಶ್ವಾಸ ಮಂಡನೆ ಮಾಡೋದು ಅಸಾಧ್ಯ. ಬಿಜೆಪಿ-ಜೆಡಿಎಸ್ ಸೇರಿದ್ರೂ ಬಹುಮತ ಎರಡೂ ಪಕ್ಷಗಳಿಗೆ ಸಿಗಲ್ಲ. ಇವರ ಸುಳ್ಳು ಆರೋಪಗಳನ್ನು ಸಮರ್ಥವಾಗಿ ಎದುರಿಸುತ್ತೇವೆ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ
ಹೈಕಮಾಂಡ್ ಏನು ಹೇಳುತ್ತೋ ಅದನ್ನು ಕೇಳಬೇಕೆಂದು ನಿರ್ಧಾರ ಮಾಡಿದ್ದೇವೆ. ನಾಳೆಯಿಂದ ಯಾವ ಗೊಂದಲ ಇರಲ್ಲ. ಈಗಲೂ ಯಾವುದೇ ಗೊಂದಲ ಇಲ್ಲ. ಮುಂದೆಯೂ ಇರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್, ಕೆಲವು ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ ಎಂದು ಹೇಳಿದರು.
ಸಂಪುಟ ಪುನಾರಚನೆ ಮಾಡುತ್ತೇನೆ ಎಂದು ಹೇಳಿದಾಗ ಕೆಲವು ಶಾಸಕರು ನಮ್ಮನ್ನು ಮಂತ್ರಿಗಳನ್ನಾಗಿ ಮಾಡಿ ಅಂತ ದೆಹಲಿಗೆ ಹೋಗಿರಬಹುದು. ಕೆಲವರು ಬಂದು ನನಗೆ ಹೇಳಿದ್ದಾರೆ. ಹೈಕಮಾಂಡ್ ಸೂಚನೆಯಂತೆ ನಾವು ಕೆಲಸ ಮಾಡಿಕೊಂಡು ಹೋಗುತ್ತೇವೆ.
ಇದನ್ನೂ ಓದಿ: ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಅಂತ್ಯ; ಉಭಯ ನಾಯಕರ ನಿರ್ಧಾರ ಏನು?


