ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೊದಲ ಸೋಲು ಉಂಟಾಗಿದೆ.

ಬೆಂಗಳೂರು (ಫೆ.20): ಕರ್ನಾಟಕ ವಿಧಾನ ಪರಿಷತ್ ಸ್ಥಾನಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆ.16ರಂದು ಮತನಾದ ನಡೆದಿತ್ತು. ಈ ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಸೋಲುಂಟಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿಯಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 1,600 ಮತಗಳಿಂದ ಜಯಗಳಿಸಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರಿ ಕಾಲಾ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಮೂರು ಸುತ್ತುಗಳ ಮತ ಎಣಿಕೆ ನಡೆದಿತ್ತು. ಈ ವೇಳೆ ಕೊನೆಯ ಎರಡು ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ಪುಟ್ಟಣ್ಣ ಗೆಲುವು ಖಚಿತವಾಗಿದೆ. ಮೂರನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಾಕ್ಷಣ ಪುಟ್ಟಣ್ಣ ಬೆಂಬಲಿಗರಿಂದ ಸಂಭ್ರಮಾಚರಣೆ ಮನೆ ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ಡೋಲು ಬಡಿದು ಡ್ಯಾನ್ಸ್ ಮಾಡುತ್ತಿದ್ದಾರೆ.

ನ್ಯೂಸ್‌ ಚಾನಲ್‌ಗಳು ಕಾಂಗ್ರೆಸ್‌ಗೆ ಬೆಂಬಲಿಸಿದರೆ, ಪ್ರಜಾಪ್ರಭುತ್ವ ಉಳಿಯುತ್ತದೆ; ಮಲ್ಲಿಕಾರ್ಜುನ ಖರ್ಗೆ

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪುಟ್ಟಣ್ಣ ಅವರು, ಶಿಕ್ಷಕ ಸಮುದಾಯದವರು ನನ್ನ ಪರವಾಗಿದ್ದಾರೆ. ಸತತ 5 ಬಾರಿ ಗೆಲವು ಸಾಧಿಸಿದ್ದೇನೆ. ಮೊದಲ ಪ್ರಾಶಸ್ತ್ಯದಲ್ಲೇ ಗೆಲವು ಸಾಧಿಸಿದ್ದೇನೆ. ಬಿಜೆಪಿ - ಜೆಡಿಎಸ್ ಒಂದಾದ್ರು ಸಹ ಶಿಕ್ಷಕ ಸಮಯದ ನನ್ನ ಪರ ನಿಂತಿದ್ದಾರೆ. ಇದಕ್ಕಾಗಿ ಸಮಸ್ತ ಶಿಕ್ಷಕ ಸಮುದಾಯಕ್ಕೆ ಗೆಲುವು ಅರ್ಪಿಸುತ್ತೇನೆ. ಶಿಕ್ಷಕ ಸಮುದಾಯದ ಹಿತ ಕಾಯುವಂತ ಕೆಲಸ ಮಾಡ್ತೇನೆ. ನಂಬಿಕೆ ಉಳಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.

ಇದ್ಯಾವ್‌ ನ್ಯಾಯ ಸ್ವಾಮಿ..ಫುಟ್‌ಪಾತ್‌ನಲ್ಲಿ ಬೆಸ್ಕಾಂ ತಂತಿ ತಗುಲಿ ಹೆಣವಾದ ತಾಯಿ ಮಗುವಿಗೆ 5 ಲಕ್ಷ, ಕೇರಳ ವ್ಯಕ್ತಿಗೆ 15 ಲಕ್ಷ!

ಇದು ಯಾವುದೇ ಒಂದು ಪಕ್ಷದ ಕಾರ್ಯಕರ್ತರ ಓಟು ಅಲ್ಲ, ಶಿಕ್ಷಕರ ಓಟು ಇದು. ಸೋತಿರುವವರು ಪಾಪ, ಆರೋಪ ಮಾಡಲೇಬೇಕು. ಅವರ ಮನಸ್ಸಿಗೆ ಸಾಂತ್ವನ ಹೇಳಿಕೊಳ್ಳಬೇಕು ಅದಕ್ಕಾಗಿ ಹೇಳಿದ್ದಾರೆ. ಚುನಾವಣೆ ಸೋತೂ ಸೋತೂ ಸೋತು ಕೊನೆಗೆ ಅವರು ಒಮ್ಮೆ ಲಾಯರ್ ಚುನಾವಣೆ ಗೆದ್ದಿದ್ದರು. ನನ್ನನ್ನು ಸೋಲಿಸಲೇಬೇಕು ಅಂತ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ಆದರೂ, ಶಿಕ್ಷಕರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೈತ್ರಿ ಅಭ್ಯರ್ಥಿ ಶಿಕ್ಷಕರೇ ರಿಜೆಕ್ಟ್‌ ಮಾಡಿದ್ದಾರೆ. ನಾವ್ಯಾರು ಇದು ದಿಕ್ಸೂಚಿ ಅಂತ ಹೇಳುತ್ತಿರಲಿಲ್ಲ. ಅವರೇ ಹೇಳುತ್ತಿದ್ದರು ಅಲ್ವಾ‌? ಸುಶಿfಷಿತರು ಆದ ಶಿಕ್ಷಕರೇ ಮೈತ್ರಿ ಅಭ್ಯರ್ಥಿಯನ್ನ ರಿಜೆಕ್ಟ್ ಮಾಡಿದ್ದಾರೆ ಎಂದು ಸೋತ ಮೈತ್ರಿ ಅಭ್ಯರ್ಥಿಯನ್ನು ಪುಟ್ಟಣ್ಣ ಕೆಣಕಿದರು.

ಒಟ್ಟು ಮತಗಳ ವಿವರ
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪಡೆದ ಮತಗಳು: 8,260
ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಪಡೆದ ಮತಗಳು: 6,753 
ತಿರಸ್ಕೃತ ಮತಗಳು : 1,239
ಕೈ ಅಭ್ಯರ್ಥಿ ಪುಟ್ಟಣ್ಣ ಗೆಲುವಿನ ಅಂತರ: 1,507 ಮತಗಳು.