ನ್ಯೂಸ್ ಚಾನಲ್‌ಗಳು ಕಾಂಗ್ರೆಸ್‌ಗೆ ಬೆಂಬಲಿಸಿದರೆ, ಪ್ರಜಾಪ್ರಭುತ್ವ ಉಳಿಯುತ್ತದೆ; ಮಲ್ಲಿಕಾರ್ಜುನ ಖರ್ಗೆ
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲ ನ್ಯೂಸ್ ಚಾನಲ್‌ಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲೇಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೀದರ್ (ಫೆ.20): ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ನೀವು ಬೆಂಬಲಿಸಲೇಬೇಕು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಂಟ್ರೋಲ್ ಮಾಡುತ್ತಿವೆ. ಸುದ್ದಿ ಮಾಧ್ಯಮಗಳ ವರದಿಗಾರರು ಕಾಂಗ್ರೆಸ್ ಪರವಾಗಿ ಹೈಪ್ ಕೊಟ್ಟರೆ ಅವರ ಕೆಲಸವೇ ಹೋಗುತ್ತದೆ ಎಂದು ನ್ಯೂಸ್ ಚಾನಲ್‌ಗಳ ಮಾಲೀಕರ ವಿರುದ್ಧ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್‌ನಲ್ಲಿ ಕಾಂಗ್ರೆಸ್ ಪಕ್ಷದ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ನೀವು ಬೆಂಬಲಿಸಲೇಬೇಕು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನ ಮೋದಿ, ಬಿಜೆಪಿ ಕಂಟ್ರೋಲ್ ಮಾಡುತ್ತಿವೆ. ಮೇಡಿಯಾ ರಿಪೋರ್ಟರ್ ಗಳು ನಮ್ಮ ಪರವಾಗಿ ಹೆಚ್ಚು ಹೈಪ್ ಕೊಟ್ಟರೆ ಸುದ್ದಿ ಕೊಟ್ಟ ವರದಿಗಾರನ ಕೆಲಸ ಹೋಗುತ್ತದೆ. ಕಾಂಗ್ರೆಸ್ ಪಕ್ಷದ ನಾಯಕರು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ನ್ಯೂಸ್ ನಲ್ಲಿ ತೋರಿಸಲ್ಲ. ಬಿಜೆಪಿ, ಆಆರ್‌ಎಸ್ಎಸ್ ಮನುವಾದವನ್ನ ತರಲು ಪ್ರಯತ್ನಿಸುತ್ತಿದಾರೆ. ನಾವು ಮನುವಾದ ಬರದಂತೆ ತಡೆಯುತ್ತಿದ್ದೇವೆ ಎಂದು ಹೇಳಿದರು.
2018ರ ಮಾನನಷ್ಟ ಮೊಕದ್ದಮೆ ಪ್ರಕರಣ; ಕೋರ್ಟ್‌ಗೆ ಶರಣಾದ ರಾಹುಲ್ ಗಾಂಧಿಗೆ ಬಿಗ್ ರಲೀಫ್!
ದೇಶದಲ್ಲಿ ನಾವು ಬಸವಣ್ಣನ ತತ್ವಗಳನ್ನು ಪಾಲಿಬೇಕೆಂದು ಹೇಳುತ್ತಿದ್ದೆವೆ. ಆದರೆ,ಎಲ್ಲಾ ಚಾನಲ್ ಗಳು ಮೋದಿ ಬಿಜೆಪಿ ಕಾರ್ಯಕ್ರಮಗಳನ್ನು ಮಾತ್ರ ಕವರ್ ಮಾಡುತ್ತಿವೆ. ಇದರಲ್ಲಿ ಮಾಧ್ಯಮಗಳ ವರದಿಗಾರರ ಯಾವುದೇ ತಪ್ಪಿಲ್ಲ. ವರದಿಗಾರರು ಕಾಂಗ್ರೆಸ್ ಮಾಡುವ ಸತ್ಯದ ಸುದ್ದಿಗಳನ್ನು ಹಾಕಿದರೆ, ವರದಿಗಾರರನ್ನ ತೆಗೆದು ಹಾಕುವಂತ ಕೆಲಸ ನಡೆಯುತ್ತಿದೆ. ರಾಜ್ಯದ ಕೆಲವು ಚಾನಲ್ ಗಳು ಸೇರಿದಂತೆ, ಬಹುತೇಕ ಚಾನಲ್‌ಗಳು ಏಕಪಕ್ಷಿಯವಾಗಿ ಕೆಲಸ ಮಾಡುತ್ತಿವೆ ಎಂದು ನೇರವಾಗಿ ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ ಸಲ್ಲಿಕೆ: ಬೀದರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿಮಾನಿಗಳು ಅದ್ದೂರಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಬೃಹತ್ ಗುಲಾಬಿ ಹೂ, ಬಸವಣ್ಣನ ಮೂರ್ತಿ, ಬೆಳ್ಳಿ ಗಧೆ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಬೀದರ್ ಜಿಲ್ಲಾ ಕಾಂಗ್ರೆಸ್, ವಿವಿಧ ಸಂಘ ಸಂಸ್ಥೆಗಳಿಂದ ಮಲ್ಲಿಕಾರ್ಜುನ ಖರ್ಗೆಗೆ ಸನ್ಮಾನಿಸಿ ಜಯಘೋಷಣೆ ಕೂಗಿದರು. ಇದೇ ವೇಳೆ ಖರ್ಗೆ ಅವರು ಜನರತ್ತ ಕೈ ಬಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹುರುಪು ತುಂಬಿದರು.
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಡ್ರೈವರ್ ರಹಿತ ರೈಲು: ಹೆಬ್ಬಗೋಡಿಯಲ್ಲಿ ಅನ್‌ಲೋಡಿಂಗ್!
ಕಲ್ಯಾಣ ಕರ್ನಾಟಕಕ್ಕೆ 371ಜೆ ಸ್ಥಾನಮಾನ ಒದಗಿಸಿದ ಖರ್ಗೆ: ಬೀದರ್ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಗಲಿಕೆ, ಅನೇಕ ನಾಯಕರು ಹೋರಾಟ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಳಿದಾಗ ಬಿಜೆಪಿ ಸರ್ಕಾರ ತಿರಸ್ಕಾರ ಮಾಡಿತ್ತು. ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ವಿಶೇಷ ಸ್ಥಾನಮಾನದ ಪ್ರಸ್ತಾವನೆ ತಿರಸ್ಕಾರ ಆಗಿತ್ತು. ಬಳಿಕ ಮನಮೋಹನ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಖರ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಸೋನಿಯಾ ಗಾಂಧಿ, ಮನಮೋಹನ ಸಿಂಗ್ಗೆ ಮನವರಿಗೆ ಮಾಡಿದಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇವತ್ತು 371(ಜೆ) ಸ್ಥಾನಮಾನದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತಿದೆ. ಇದೆಲ್ಲಾ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯಾಗಿದೆ ಎಂದು ಹೇಳಿದರು.