Asianet Suvarna News Asianet Suvarna News

ದೆಹಲಿ ಹೈಕಮಾಂಡ್‌ನಿಂದ ನಮ್ಮ ತಂದೆಗೆ ಕ್ಲೀನ್‌ಚಿಟ್ ಸಿಕ್ಕಿದೆ: ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಮುಡಾದಲ್ಲಿ ಹಗರಣ ನಡೆದಿಲ್ಲ. ನಮ್ಮ ತಂದೆಗೆ(ಸಿಎಂ ಸಿದ್ದರಾಮಯ್ಯ) ದೆಹಲಿ ಹೈಕಮಾಂಡ್‌ನಿಂದಲೇ ಕ್ಲೀನ್‌ಚಿಟ್ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದರು.

Karnataka MLC Dr Yathindra siddaramaiah stats about cm siddaramaiah in muda scam issue rav
Author
First Published Aug 8, 2024, 1:00 PM IST | Last Updated Aug 8, 2024, 1:00 PM IST

ಮೈಸೂರು (ಆ.8): ಮುಡಾದಲ್ಲಿ ಹಗರಣ ನಡೆದಿಲ್ಲ. ನಮ್ಮ ತಂದೆಗೆ(ಸಿಎಂ ಸಿದ್ದರಾಮಯ್ಯ) ದೆಹಲಿ ಹೈಕಮಾಂಡ್‌ನಿಂದಲೇ ಕ್ಲೀನ್‌ಚಿಟ್ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದರು.

ಇಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪರ ನಡೆಸಿದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಡಾ ಯತೀಂದ್ರ ಅವರು, ಜನರಿಂದ ಆಯ್ಕೆಯಾದ ಸರ್ಕಾರವನ್ನು ಸುಳ್ಳು ಆರೋಪ ಮಾಡಿ ಬಿಳಿಸುವ ಕುತಂತ್ರಕ್ಕೆ ನಾವು ಬಿಡೊಲ್ಲ. ಅದರ ವಿರುದ್ಧ ಏನು  ಮಾಡಬೇಕೋ ಆ ಹೋರಾಟವನ್ನು ನಮ್ಮ ಪಕ್ಷದವರು ಮಾಡುತ್ತಾರೆ. ದೆಹಲಿ ಹೈಕಮಾಂಡ್ ಕೂಡ ನಮ್ಮ ತಂದೆಯವರದು ಏನೂ ತಪ್ಪಿಲ್ಲ, ಮುಖ್ಯಮಂತ್ರಿಗಳಿಗೆ ಬೆಂಬಲ ಕೊಡ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ನಮಗೆ ಪಕ್ಷದ ಬೆಂಬಲ, ನಾಯಕರ ಬೆಂಬಲ ಹಾಗೂ ಕಾರ್ಯಕರ್ತರ ಬೆಂಬಲವಿದೆ. ನಾವೂ ಕೂಡ ಜನರ ಮುಂದೆ ಹೋಗಿ ಹೋರಾಟ ಮಾಡುತ್ತೇವೆ ಎಂದರು.

ಸಿಎಂ ಸಿದ್ದರಾಮಯ್ಯರನ್ನ ಕೆಳಗಿಳಿಸೋದು ಕನಸಿನ ಮಾತು: ವಿಜಯೇಂದ್ರಗೆ ಡಾ ಯತೀಂದ್ರ ತಿರುಗೇಟು

ಏನೂ ತಪ್ಪು ಮಾಡದಿದ್ರೂ ಸಿಎಂ ಸಿದ್ದರಾಮಯ್ಯ ಅವರು ಇವತ್ತು ಆರೋಪ ಎದುರಿಸಬೇಕಾಗಿ ಬಂದಿದೆ. ಈಗ ತಂದೆಯವರ ಪ್ರಾಮಾಣಿಕ ರಾಜಕೀಯ ಜೀವನ ಜನರು, ಬೆಂಬಲಿಗರು ಅರ್ಥಮಾಡಿಕೊಳ್ಳುವಂತಾಗುತ್ತೆ. ಹೀಗಾಗಿ ವಿಚಾರ ಸಂಕೀರ್ಣ ಮೂಲಕ ಬಿಜೆಪಿಯವರ ಕುತಂತ್ರ ತಿಳಿಸುವ ಕೆಲಸ ಮಾಡಿದ್ದಕ್ಕೆ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.

Latest Videos
Follow Us:
Download App:
  • android
  • ios