Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯರ ಮೇಲೆ ಕೇಸ್ ಮಾಡಿದ್ರೆ ರಾಜ್ಯದ ಏಳು ಕೋಟಿ ಜನ ಸಹಿಸೊಲ್ಲ: ಎಂಬಿ ಪಾಟೀಲ್

 ಮುಡಾದಲ್ಲಿ ಏನು ಭ್ರಷ್ಟಾಚಾರ ಆಗಿದೆ? 3 ಎಕರೆ 16 ಗುಂಟೆ ಕಾನೂನು ಬಾಹಿರವಾಗಿ ಮುಡಾದವರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಅದನ್ನ ತೆಗೆದುಕೊಂಡಿದ್ದಾರೆ. ಭೂಸ್ವಾಧೀನ ಮಾಡಿಕೊಂಡರೆ ಪರಿಹಾರ ಕೊಡಬೇಕಲ್ಲವ? ಪರಿಹಾರ ಕೊಟ್ಟಿಲ್ಲ. ಅಕ್ರಮವಾಗಿ ಜಮೀನು ಮುಡಾದವರು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಿ ಮಾರಾಟ ಮಾಡಿದ್ರಿ. ಇದರಲ್ಲಿ ಸಿದ್ದರಾಮಯ್ಯನವರದು ಏನು ತಪ್ಪಿದೆ ಎಂದು ಸಚಿವ ಎಂಬಿ ಪಾಟೀಲ್ ಪ್ರಶ್ನಿಸಿದರು.

Karnataka minister mb patil reacts about karnataka governor approved prosecution against cm siddaramaiah in muda scam rav
Author
First Published Aug 19, 2024, 5:41 PM IST | Last Updated Aug 19, 2024, 5:41 PM IST

ವಿಜಯಪುರ (ಆ.19):  ಮುಡಾದಲ್ಲಿ ಏನು ಭ್ರಷ್ಟಾಚಾರ ಆಗಿದೆ? 3 ಎಕರೆ 16 ಗುಂಟೆ ಕಾನೂನು ಬಾಹಿರವಾಗಿ ಮುಡಾದವರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಅದನ್ನ ತೆಗೆದುಕೊಂಡಿದ್ದಾರೆ. ಭೂಸ್ವಾಧೀನ ಮಾಡಿಕೊಂಡರೆ ಪರಿಹಾರ ಕೊಡಬೇಕಲ್ಲವ? ಪರಿಹಾರ ಕೊಟ್ಟಿಲ್ಲ. ಅಕ್ರಮವಾಗಿ ಜಮೀನು ಮುಡಾದವರು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಿ ಮಾರಾಟ ಮಾಡಿದ್ರಿ. ಇದರಲ್ಲಿ ಸಿದ್ದರಾಮಯ್ಯನವರದು ಏನು ತಪ್ಪಿದೆ ಎಂದು ಸಚಿವ ಎಂಬಿ ಪಾಟೀಲ್ ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರವಾಗಿ ಇಂದು ಮಾಧ್ಯಮ ಪ್ರತಿನಿಯೊಂದಿಗೆ ಮಾತನಾಡಿದ ಸಚಿವರು, ಮುಡಾದಲ್ಲಿ ಕಾನೂನು ಪ್ರಕಾರ ಉಳಿದವರಿಗೆ ಕೊಡುವ ಹಾಗೆಯೇ ಶೇಕಡಾ 50ರಷ್ಟು ಸೈಟ್ ಕೊಟ್ಟಿದ್ದೀರಿ. ಇಲ್ಲಿ ತಪ್ಪು ಮಾಡಿದ್ದು ಮುಡಾ, ಮುಡಾದಲ್ಲಿ ಯಾರಿದ್ದರು? ಮುಡಾ ಅಧ್ಯಕ್ಷರು ಬಿಜೆಪಿ ರಾಮದಾಸ್ ಇದ್ದರು. ನಮ್ಮಿಂದ ತಪ್ಪಾಗಿದೆ ಅಂತ ಅವರು ಒಪ್ಪಿಕೊಳ್ಳುತ್ತಾರೆ. ಜಿಟಿ ದೇವೇಗೌಡರು, ಸಾರಾ ಮಹೇಶ್ ಇದ್ರು ಬಿಜೆಪಿಯವರು ತಪ್ಪು ಮಾಡಿದ್ದು ಇದು. ಜಮೀನು ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಿದ್ದೀರಿ. ಯೋಜನೆಯಡಿ ಶೇ.50:50 ಸೈಟ್ ಹಂಚಿಕೆಯಾಗಿದೆ ಇದರಲ್ಲೇ ಹಗರಣವಾಗಿರೋದು ಏನು? ಎಂದು ಪ್ರಶ್ನಿಸದರು.

'ಅಪ್ಪನ ಬಗ್ಗೆ ಸುಳ್ಳು ಆರೋಪ ಮಾಡಿದ್ರೆ ಒಪ್ಪಿಕೊಳ್ಳೋಕೆ ಆಗುತ್ತಾ?' ಕಾನೂನು ಹೋರಾಟಕ್ಕೆ ಮುಂದಾದ ಯತೀಂದ್ರ ಸಿದ್ದರಾಮಯ್ಯ

ಈ ವಿಚಾರದಲ್ಲಿ ರಾಜ್ಯಪಾಲರಿಗೆ ಕೇಂದ್ರ ಬಿಜೆಪಿಯವರು ಒತ್ತಡ ಹಾಕಿದ್ದಾರೆ. ಹೀಗಾಗಿ ರಾಜ್ಯಪಾಲರು ತರಾತುರಿಯಲ್ಲಿ ಸಿಎಂ ಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಕ್ಯಾಬಿನೆಟ್ ಮೀಟಿಂಗ್‌ ನಲ್ಲಿ ಚರ್ಚಿಸಿ ನೋಟಿಸ್ ರದ್ದು ಕೋರಿ ತಿಳಿಸಿದ ಮೇಲೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆಂದರೆ ಇದರಲ್ಲಿ ಸಿಎಂ ವಿರುದ್ಧ ಷಡ್ಯಂತ್ರವಿದೆ ಎಂದು ಆರೋಪಿಸಿದರು.

ಇನ್ನು ಕುಮಾರಸ್ವಾಮಿ ಮೇಲೆ ಪ್ರಾಥಮಿಕ ತನಿಖೆಯಾಗಿ ಒಂಭತ್ತು ತಿಂಗಳಾಗಿವೆ. ಬಿಜೆಪಿಯ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ಪ್ರಾಥಮಿಕ ತನಿಖೆಯಾಗಿ ಪ್ರಾಸಿಕ್ಯೂಷನ್‌ ಅನುಮತಿಗಾಗಿ ಫೈಲ್ ರಾಜ್ಯಪಾಲರ ಟೇಬಲ್ ಮೇಲೆ ಬಿದ್ದಿವೆ. ಬಿಜೆಪಿಯವರ ವಿಚಾರದಲ್ಲಿ ರಾಜ್ಯಪಾಲರು ಕುಂಭಕರ್ಣ ನಿದ್ರೆಯಲ್ಲಿದ್ದಾರೆ ಸಿಎಂ ಸಿದ್ದರಾಮಯ್ಯ ವಿಚಾರಕ್ಕೆ ತರಾತುರಿ ಅನುಮತಿ ಕೊಡ್ತಾರೆ. ಅವರ ಹಗರಣದಲ್ಲಿ ವಿಚಾರದಲ್ಲಿ ಎಚ್ಚೆತ್ತುಕೊಳ್ಳದ ರಾಜ್ಯಪಾಲರು ಮುಡಾ ವಿಚಾರದಲ್ಲಿ ಮಾತ್ರ ಎಚ್ಚೆತ್ತುಕೊಂಡಿದ್ದಾರೆ ಎಂದು ಹರಿಹಾಯ್ದರು.

ಸಿಎಂ ಸಿದ್ದರಾಮಯ್ಯರ ಮೇಲೆ ಕೇಸ್ ಮಾಡಲು ಹೊರಟಿದ್ದೀರಿ ಇದನ್ನು ಏಳು ಕೋಟಿ ಜನರು ಸಹಿಸಲ್ಲ. ರಾಜ್ಯದ ಜನ 136 ಸ್ಥಾನ ಕಾಂಗ್ರೆಸ್ ಗೆ ಕೊಟ್ಟು ಅಧಿಕಾರ ಕೊಟ್ಟಿದ್ದಾರೆ. ಜನರಿಂದ ಆಯ್ಕೆಯಾದ ಸಿಎಂ ಸಿದ್ದರಾಮಯ್ಯರ ಮೇಲೆ ಸುಳ್ಳು ಆರೋಪ ಮಾಡಿ ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ, ರಾಜ್ಯಪಾಲರು ಷಡ್ಯಂತ್ರ ಮಾಡಿದ್ದಾರೆ. ಆದರೆ ಬೇರೆ ರಾಜ್ಯಗಳಲ್ಲಿ ಮಾಡಿದಂತೆ ಕರ್ನಾಟಕದಲ್ಲಿ ಮೋದಿ, ಅಮಿತ್ ಷಾ ಅವರ ಆಟ ನಡೆಯಲ್ಲ. ನಾವು ಇದರ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ, ಜನಾಂದೋಲನ ಮೂಲಕ ಪ್ರತಿ ಗ್ರಾಮಕ್ಕೂ ಇದರ ಬಗ್ಗೆ ತಿಳಿಸ್ತೀವಿ ಎಂದರು.

ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲ:

ಇನ್ನು'ಒಬ್ಬರಿಗೋಸ್ಕರ ರಾಜ್ಯ ಹಾಳು ಮಾಡ್ತಿದ್ದಾರೆ ಎಂಬ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಕೆಂಡಮಂಡಲರಾದ ಸಚಿವರು, ಸಿದ್ದರಾಮಯ್ಯನವರು ಏನು ತಪ್ಪು ಮಾಡಿದ್ದಾರೆ? ಕುಮಾರಸ್ವಾಮಿಯವರೇ ನಿಮ್ಮ ಮೇಲೆ ತನಿಖೆಯಾಗಿ ಒಂಭತ್ತು ತಿಂಗಳಷ್ಟೇ ಆಗಿದೆ. 550ಎಕರೆ ಜಮೀನು ಕಾನೂನು ಬಾಹಿರವಾಗಿ ಮಾಡಿದ ಆರೋಪ ಕುಮಾರಸ್ವಾಮಿ ಅವರ ಮೇಲಿದೆ. ಜೆಡಿಎಸ್ ನಲ್ಲಿ ನೀವು ಒಬ್ಬರೆ ಅಲ್ವಾ? ನಿಮ್ಮ ಪ್ರಾಸಿಕ್ಯೂಷನ್ ಗೆ ಯಾಕೆ ಅನುಮತಿ ಕೊಡಿಸಲಿಲ್ಲ‌‌? ಸಿದ್ದರಾಮಯ್ಯ ಓರ್ವ ವ್ಯಕ್ತಿಯಲ್ಲ ಮುಖ್ಯಮಂತ್ರಿ, ಬಡವರ ರೈತರ ಶಕ್ತಿ. ಸಿದ್ದರಾಮಯ್ಯ ವಿಷಯದಲ್ಲಿ ಪ್ರಾಥಮಿಕ ತನಿಖೆ ಕೂಡ ಆಗಿಲ್ಲ‌. ಆದರೆ ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜೊಲ್ಲೆ, ಜನಾರ್ದನ ರೆಡ್ಡಿ ವಿಷಯದಲ್ಲಿ ಪ್ರಾಥಮಿಕ ತನಿಖೆ ಆಗಿತ್ತು. ಕುಮಾರಸ್ವಾಮಿ ಅವರಿಗೆ ಎಲ್ಲವೂ ಗೊತ್ತಿದೆ ಎಷ್ಟು ದಿನದಿಂದ ಕೇಸ್ ಗವರ್ನರ್ ಮುಂದಿದೆ ಅನ್ನೋದು ಅವರಿಗೂ ಗೊತ್ತಿದೆ. ಅದಕ್ಕೆ ಅನುಮತಿ ಕೊಡ್ಸಿ ಕುಮಾರಸ್ವಾಮಿ ಅವರೇ ಎಂದು ಸವಾಲು ಹಾಕಿದರು.

ರಾಜ್ಯಪಾಲರು ಕೇಂದ್ರದ ಕೈಗೊಂಬೆ:

 ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಬಿಜೆಪಿಯ ಕೈಗೊಂಬೆಯಾಗಿ ಕೆಲ್ಸ ಮಾಡ್ತಿದ್ದಾರೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿ ಪರಿವರ್ತನೆ ಆಗಿದೆ. ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತರಬೇಕು ಅನ್ನೋದು ಬಿಜೆಪಿಯವರ ಉದ್ದೇಶವಾಗಿದೆ. ಸಿದ್ದರಾಮಯ್ಯ ಓರ್ವ ಜನಪ್ರಿಯ ನಾಯಕ. ಇಂತವರ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂಬ ಬಿಜೆಪಿಯವರ ಪ್ರಯತ್ನ ಫಲಿಸುವುದಿಲ್ಲ. ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲ ಆಗದೆ ಇರೋಕೆ ಇದು ನಡೆದಿದೆ ಎಂದು ಆರೋಪಿಸಿದರು.

ದೆಹಲಿ ಹೈಕಮಾಂಡ್‌ನಿಂದ ನಮ್ಮ ತಂದೆಗೆ ಕ್ಲೀನ್‌ಚಿಟ್ ಸಿಕ್ಕಿದೆ: ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಇನ್ನು ಎರಡೂವರೆ ವರ್ಷಕ್ಕೆ ಅಧಿಕಾರ ಹಸ್ತಾಂತರಕ್ಕಾಗಿ ಸಿದ್ದರಾಮಯ್ಯ ವಿರುದ್ಧ ನಡೆದ  ಬೆಳವಣಿಗೆಯಿದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಮಾಧ್ಯಮದವರಿಗೆ ಯಾರಾದರೂ ಹೇಳಿದ್ದರಾ? ಸಿಎಂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios