Asianet Suvarna News Asianet Suvarna News

LIVE: Dharwad Elections 2024: ತಾಯಿ ಸಾವಿನ ನಡುವೆಯೂ ಮತದಾನ ಮಾಡಿದ ಪುತ್ರ

ಧಾರವಾಡ  ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತು  ಕಾಂಗ್ರೆಸ್‌ ನಿಂದ ವಿನೋದ್ ಅಸೂಟಿ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

Karnataka Lok Sabha Election 2024 Dharwad constituency  pralhad joshi vs Vinod Asooti  gow
Author
First Published May 7, 2024, 8:19 AM IST

ಹುಬ್ಬಳ್ಳಿ (ಮೇ.7): ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ನಡೆಯುತ್ತಿದ್ದು, ಧಾರವಾಡ  ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತು  ಕಾಂಗ್ರೆಸ್‌ ನಿಂದ ವಿನೋದ್ ಅಸೂಟಿ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.   ಧಾರವಾಡದಲ್ಲಿ ಸಂಜೆ 5 ಗಂಟೆವರೆಗೆ  ಶೇ. 67.15ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆವರೆಗೆ  ಶೇ.55ರಷ್ಟು ಮತದಾನವಾಗಿತ್ತು.  ಮಧ್ಯಾಹ್ನ 1 ಗಂಟೆಗೆ ವೇಳೆಗೆ 40.61% ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಗೆ ವೇಳೆಗೆ 40.61% ಮತದಾನವಾಗಿದೆ. ಬೆಳಗ್ಗೆ 11 ಗಂಟೆವರೆಗೆ ಶೇ.24ರಷ್ಟು ಮತದಾನವಾಗಿತ್ತು. ಬೆಳಗ್ಗೆ 9 ಗಂಟೆವರೆಗೆ ಶೇ. 9.38ರಷ್ಟು  ಮತದಾನವಾಗಿತ್ತು. ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿದೆ.

ತಾಯಿ ಸಾವಿನಲ್ಲೂ ಮತದಾನ ಮಾಡಿದ ಪುತ್ರ ನೀರಜ್ ಧಾರವಾಡಕರ್‌. ಹೃದಯಾಘಾತದಿಂದ ಇಂದು ನೀರಜ್ ತಾಯಿ ಸಂಧ್ಯಾ ಧಾರವಾಡಕರ್ (68) ನಿಧನರಾಗಿದ್ದರು. ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ ಬಳಿಕ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಪುತ್ರನ ಜೊತೆ ತಂದೆ ಶ್ರೀಕಾಂತ್ ಧಾರವಾಡಕರ್  ಕೂಡ ಮತ ಚಲಾವಣೆ ಮಾಡಿದರು.

ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದ ಸಾಕ್ಷಿ ನಾಶ ಕೇಸ್ ನಲ್ಲಿ ಜಿಲ್ಲೆಯಿಂದ ಹೊರ ಇರುವ ವಿನಯ ಕುಲಕರ್ಣಿ ಮತದಾನ ಮಾಡಿದರು. ಪತ್ನಿ ಶಿವಲೀಲಾ ಕುಲಕರ್ಣಿ ಮತ್ತು ಮಕ್ಕಳ ಜೊತೆ ಬಂದು ಮತ ಚಲಾಯಿಸಿದ ವಿನಯ ಕುಲಕರ್ಣಿ ಶಾಸಕ ಎನ್ ಎಚ್ ಕೋನರೆಡ್ಡಿ, ಕೈ ಅಭ್ಯರ್ಥಿ ವಿನೋದ ಅಸೂಟಿ ಸಾಥ್

ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದ ಸಾಕ್ಷಿ ನಾಶ ಕೇಸ್ ನಲ್ಲಿ ಜಿಲ್ಲೆಯಿಂದ ಹೊರ ಇರುವ ವಿನಯ ಕುಲಕರ್ಣಿ ಮತದಾನದಲ್ಲಿ ಭಾಗವಹಿಸಲು ಹೈಕೋರ್ಟ್ ಏಕಸದಸ್ಯ ಪೀಠ ಅನುಮತಿ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಬಂದು ಮತದಾನ ಮಾಡಲು ಆದೇಶ ನೀಡಿದ್ದು,  ಮತದಾನ ಮಾಡಿ ತಕ್ಷಣ ಧಾರವಾಡ ತೊರೆಯುವಂತೆ ಸೂಚನೆ ನೀಡಲಾಗಿದೆ. ಸಂಜೆ 4:45 ಕ್ಕೆ ವಿನಯ ಕುಲಕರ್ಣಿ ಮತದಾನಕ್ಕೆ ಬರಲಿರುವ ಸಾಧ್ಯತೆ ಇದೆ. ಶಾರದಾ ಹೈಸ್ಕೂಲಿನ ಮತಗಟ್ಟೆ ಸಂಖ್ಯೆ 239 ರಲ್ಲಿ ಮತದಾನ ಇದೆ.

ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿರುವ ಮತದಾನ ಕೇಂದ್ರದ ಮತಗಟ್ಟೆ ಸಂಖ್ಯೆ 117 ರಲ್ಲಿ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಮತದಾನ ಮಾಡಿದರು. ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.

ಧಾರವಾಡದಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಮತದಾನ ನಗರದ ಮರಾಠಾ ಕಾಲನಿಯಲ್ಲಿರುವ ಬುದ್ಧರಕ್ಕಿತ ಶಾಲೆಯ ಮತಗಟ್ಟೆ ಸಂಖ್ಯೆ 19ರಲ್ಲಿ ಮತದಾನ ತಂದೆ ಚಂದ್ರಕಾಂತ ಬೆಲ್ಲದ್, ತಾಯಿ ಲೀಲಾವತಿ ಬೆಲ್ಲದ್, ಪುತ್ರ ಅಗಸ್ತ್ಯ ಜೊತೆಗೆ ಆಗಮಿಸಿ ಮತದಾನ ಮಾಡಿದ ಅರವಿಂದ ಬೆಲ್ಲದ್.

ಬಿಜೆಪಿ ಅಭ್ಯರ್ಥಿ ಪರವಾಗಿ ಮತದಾರರಿಗೆ ಹಣ ಆಮಿಷ. ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಹಣ ಆಮಿಷ. ಕೈಯಲ್ಲಿ ಕಂತು ಕಂತು ನೋಟು ಹಿಡಿದುಕ್ಕೊಂಡು ಮತದಾರನಿಗೆ ಹಣ ಹಂಚುತ್ತಿರುವ ಬಿಜೆಪಿ ಕಾರ್ಯಕರ್ತ. ಪೋಲಿಸರಿಗೆ ಕರೆ ಮಾಡಿದ ಸ್ಥಳಿಯರು. ಮನೆ ಮನೆಗೆ ತೆರಳಿ ಹಣ ಹಂಚುತ್ತಿರುವ ಬಿಜೆಪಿ ಕಾರ್ಯಕರ್ತ. ನಿಂಗಪ್ಪ ಹಾದಿಮನಿ ಎಂಬುವರಿಂದ ಹಣ ಹಂಚಿಕೆ

LIVE: Koppal Elections 2024: ಕೊಪ್ಪಳದಲ್ಲಿ ಬಿಜೆಪಿ ಗೆಲುವಿಗೆ ತಡೆಯಾಗ್ತಾರಾ ಕಾಂಗ್ರೆಸ್‌ನ ಹಿಟ್ನಾಳ್ 

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಯಿಂದ ಮತದಾನ ಮಾಡಿದರು. ನವಲಗುಂದ ಪಟ್ಟಣದಲ್ಲಿರುವ ಮತಗಟ್ಟೆ ಸಂಖ್ಯೆ 85 ರಲ್ಲಿ ಸರತಿ ಸಾಲಿನಲ್ಲಿ ನಿಂತು  ಮತದಾನ ಮಾಡಿದರು.  ಈ ಭಾರಿ ಗೆಲುವು ಕೈ ಅಭ್ಯರ್ಥಿಯದ್ದು ಆಗಲಿದೆ. ಎಲ್ಲ ಕಡೆ ಯುವಕರು ಹುಮ್ಮಸ್ಸಿನಿಂದ ಸಪೋರ್ಟ ಮಾಡಿದ್ದಾರೆ. ರಾಜ್ಯ ಸರಕಾರದ ಐದು ಗ್ಯಾರಂಟಿ ಗಳು ಕೈ ಹಿಡಿಯುತ್ತವೆ. ಜೊತೆಗೆ ಕಾಂಗ್ರೆಸ್ ನಿಂದಲೂ ಐದು  ಗ್ಯಾರಂಟಿಗಳು ಕೈ ಹಿಡಿಯುತ್ತವೆ. ಈ ಭಾರಿ ಜನರು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಕೊಡ್ತಾ ಇದಾರೆ. ಒಂದು ಮತದಿಂದ ಗೆದ್ದರೂ ಗೆದ್ದಂಗೆ, 10 ಲಕ್ಷ ಮತದಿಂದ ಗೆದ್ದರೂ ಗೆದ್ದಂಗೆ ಎಂದು ಮತದಾನದ ಬಳಿಕ ಹೇಳಿದರು.

ಧಾರವಾಡ ಲೋಕಸಭಾ ಕ್ಷೆತ್ರದಲ್ಲಿ 8 ವಿಧಾನಸಭಾ ಕ್ಷೆತ್ರಗಳು ಇವೆ.
ಜಿಲ್ಲೆಯಲ್ಲಿ ಒಟ್ಟು ಮತದಾರರು 1831975
ಪುರುಷ ಮತದಾರರು 917926
ಮಹಿಳಾ ಮತದಾರರು 913949,

85 ವರ್ಷದ ಮೆಲ್ಪಟ್ಟ ಮತದಾರರ ಸಂಖ್ಯೆ 25787
ಪರುಷ ಮತದಾರರು 14772
ಮಹಿಳಾ ಮತದಾರರು 11012

ಒಟ್ಟು ಯುವ ಮತದಾರರು 47204
ಪರುಷ ಮತದಾರರು 25005
ಮಹಿಳಾ ಮತದಾರರು 22194

ಜಿಲ್ಲೆಯಲ್ಲಿ ಒಟ್ಟು 1901 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಅದರಲ್ಲಿ 40 ಪಿಂಕ್ ಮತಗಟ್ಟೆಗಳನ್ನ ಆಯ್ಕೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೆತ್ರದಲ್ಲಿ 5 ಪಿಂಕ್ ಮತದಾನ ಕೇಂದ್ರ ಗಳನ್ನ ಸ್ಥಾಪನೆ ಮಾಡಲಾಗಿದೆ. ಒಟ್ಟು ಮತಗಟ್ಟೆಗಳಿಗಾಗಿ ಕಾರ್ಯನಿರ್ವಹಿಸಲು 7740 ಸಿಬ್ಬಂದಿಗಳ ನೇಮಕ ಮಾಡಲಾಗಿದೆ.

ಕರ್ನಾಟಕ Election 2024: ಇಂದು ರಾಜ್ಯದಲ್ಲಿ ಕೊನೇ ಹಂತದ ಮತದಾನ, 14 ಜಿಲ್ಲೆಗಳಿಗೆ ವೋಟಿಂಗ್‌

ಮತದಾನಕ್ಕೆ ಒಟ್ಟು ಎಸ್ ಪಿ  ವ್ಯಾಪ್ತಿಯಲ್ಲಿ 1200 ಪೋಲಿಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಕಮಿಷನರ್ ವ್ಯಾಪ್ತಿಯಲ್ಲಿ 2100 ಪೋಲಿಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ 300 ಜನ ಹೋಮ್ ಗಾರ್ಡ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 6000 ಸಾವಿರ ಪೋಲಿಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ.

 114 ಅತೀ ಸೂಕ್ಮ, ಮತ ಕೇಂದ್ರ ಗಳ ಸ್ಥಾಪನೆ ಮಾಡಲಾಗಿದ್ದು, ಒಟ್ಟು ಬಸ್ ಗಳ ಸಂಖ್ಯೆ 200 ಕೆಎಸ್ ಆರ್ ಟಿ ಸಿ ಬಸ್ ಗಳು, 110 ಮಿನಿ ಬಸ್ ಗಳು,ಕ್ರೂಸರ್ 65 ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 1468 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ ಧಾರವಾಡ ಲೋಕಸಭಾ ಕ್ಷೆತ್ರದಲ್ಲಿ ಶೇಕಡಾ 70.12 ರಷ್ಟು ಮತದಾನವಾಗಿತ್ತು

Latest Videos
Follow Us:
Download App:
  • android
  • ios