Asianet Suvarna News Asianet Suvarna News

ಕರ್ನಾಟಕದ 10 ಪಾಲಿಕೆಗಳ ಮೇಯರ್​, ಉಪಮೇಯರ್​ ಸ್ಥಾನಕ್ಕೆ ಮೀಸಲಾತಿ ನಿಗದಿ

ಕೊನೆಗೂ ಕರ್ನಾಟಕ ಹತ್ತು ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. 

Karnataka Govt Announces reservation For 10 municipal-corporations-mayor-deputy-mayor rbj
Author
First Published Aug 24, 2022, 4:45 PM IST

ಬೆಂಗಳೂರು, (ಆಗಸ್ಟ್.24): ಕರ್ನಾಟಕದ 10 ಮಹಾನಗರ ಪಾಲಿಕೆಗಳ ಮೇಯರ್​ ಮತ್ತು ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ಬೆಂಗಳೂರು: ಬಿಬಿಎಂಪಿ ಮೀಸಲು ಕರಡು ಪಟ್ಟಿಯೇ ಫೈನಲ್‌..!

ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಮಹಾನಗರ ಪಾಲಿಕೆಗಳ ಮೇಯರ್​ ಮತ್ತು ಉಪಮೇಯರ್​ ಆಯ್ಕೆಗೆ ಮೀಸಲಾತಿಯನ್ನು ನಿಗದಿಪಡಿಸಿ  ರಾಜ್ಯ ಸರ್ಕಾರ ಇಂದು (ಆಗಸ್ಟ್ 24) ಆದೇಶ ಹೊರಡಿಸಿದೆ.

1.ಬಳ್ಳಾರಿ 
ಮೇಯರ್ - ಹಿಂದುಳಿದ ವರ್ಗ ಮಹಿಳೆ 
ಉಪ ಮೇಯರ್ - ಸಾಮಾನ್ಯ ಮಹಿಳೆ

2.ಬೆಳಗಾವಿ 
ಮೇಯರ್- ಸಾಮಾನ್ಯ
ಉಪಮೇಯರ್- ಎಸ್‌ಸಿ ಮಹಿಳೆ

3. ದಾವಣೆಗೆರೆ
ಮೇಯರ್- ಸಾಮಾನ್ಯ ಮಹಿಳೆ
ಉಪ ಮೇಯರ್- ಹಿಂದುಳಿದ ಮಹಿಳೆ

4. ಹುಬ್ಬಳ್ಳಿ ಧಾರವಾಡ- 
ಮೇಯರ್- ಸಾಮಾನ್ಯ ಮಹಿಳೆ
ಉಪಮೇಯರ್- ಸಾಮಾನ್ಯ..

5.ಕಲಬುರಗಿ
ಮೇಯರ್ - ಎಸ್.ಸಿ
ಉಪ‌ಮೇಯರ್- ಸಾಮಾನ್ಯ

6. ಮಂಗಳೂರು-
ಮೇಯರ್- ಜನರಲ್
ಉಪ ಮೇಯರ್- ಜನರಲ್‌ ಮಹಿಳೆ

7. ಮೈಸೂರು
ಮೇಯರ್- ಜನರಲ್
ಉಪಮೇಯರ್-ಒಬಿಸಿ (ಮಹಿಳೆ)

8. ಶಿವಮೊಗ್ಗ                         
ಮೇಯರ್-ಒಬಿಸಿ                         
ಉಪಮೇಯರ್- ಸಾಮಾನ್ಯ (ಮಹಿಳೆ) 

9. ತುಮಕೂರು         
 ಮೇಯರ್-  ಎಸ್‌ಸಿ (ಮಹಿಳೆ) 
ಉಪಮೇಯರ್- ಒಬಿಸಿ 10. 

10. ವಿಜಯಪುರ                      
ಮೇಯರ್- ಎಸ್‌ಟಿ 
ಉಪಮೇಯರ್- ಒಬಿಸಿ

Follow Us:
Download App:
  • android
  • ios