ಜನ ರೊಚ್ಚಿಗೆದ್ದು ಕಾಂಗ್ರೆಸ್‌ಗೆ ವೋಟು ಹಾಕಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

  • ಜನ ರೊಚ್ಚಿಗೆದ್ದು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ: ಖರ್ಗೆ
  • ಬಿಜೆಪಿಯ ಕೆಟ್ಟಆಡಳಿತ ವಿರುದ್ಧ ರೊಚ್ಚಿಗೆದ್ದ ಜನತಾ ಜನಾರ್ದನ’
  •  ಪ್ರಧಾನಿ ಮೋದಿ ಓಣಿಓಣಿ ತಿರುಗಿದ್ದು ಸರಿಯಲ್ಲ: ಎಐಸಿಸಿ ಅಧ್ಯಕ್ಷ
Karnataka election results People voted for Congress against the bad governance of bjp says kharge rav

ಬೆಂಗಳೂರು (ಮೇ.14) : ರಾಜ್ಯದಲ್ಲಿನ ಕಾಂಗ್ರೆಸ್‌ ಗೆಲುವನ್ನು ‘ಜನತಾ ಜನಾದÜರ್‍ನ’ರ ಗೆಲವು ಎಂಬುದಾಗಿ ಬಣ್ಣಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಬಿಜೆಪಿಯ ಕೆಟ್ಟಆಡಳಿತದ ವಿರುದ್ಧ ಜನರು ‘ರೊಚ್ಚಿಗೆದ್ದು’ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನ ಉತ್ತಮ ಪ್ರದರ್ಶನವು ಜನತಾ ಜನಾರ್ದನನ ವಿಜಯವಾಗಿದೆ. ಜನ ತಾವಾಗೇ ಎದ್ದು ನಿಂತು ನಮ್ಮನ್ನು ಬೆಂಬಲಿಸಿದ್ದಾರೆ, ಕೆಟ್ಟಆಡಳಿತದ ವಿರುದ್ಧ ಉಗ್ರವಾಗಿ ಮತ ಹಾಕಿದ್ದಾರೆ. ಇದು ಕರ್ನಾಟಕದ ಮತದಾರರು ಎಷ್ಟುಪ್ರಬುದ್ಧರು ಎಂಬುದನ್ನು ತೋರಿಸುತ್ತದೆ ಎಂದರು.

ಜೆಡಿಎಸ್‌ಗೆ 2 ದಶಕದಲ್ಲೇ ಅತಿ ಕಡಿಮೆ ಸ್ಥಾನ; ಶೇ.10ಕ್ಕಿಂತ ಕಮ್ಮಿಯಿದ್ರೆ ಸೌಧದಲ್ಲಿ ಜೆಡಿಎಸ್‌ಗೆ ಕಚೇರಿ ಇಲ್ಲ?

ಪ್ರಧಾನಿ ನರೇಂದ್ರ ಮೋದಿ(PM Narendra Modi) ಗೃಹ ಸಚಿವ ಅಮಿತ್‌ ಶಾ(Amit shah), ಕೇಂದ್ರದ ಡಜನ್‌ಗಟ್ಟಲೆ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲಿ ಬೀಡು ಬಿಟ್ಟಿದ್ದರು. ಅವರ ಜನಬಲ, ಹಣ ಮತ್ತು ತೋಳ್ಬಲ ಬಳಸಿದ್ದರು. ಆದರೆ ಜನತೆ ಇದಾವುದಕ್ಕೂ ಸೋಲದೆ ಒಗ್ಗಟ್ಟಿನಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಖರ್ಗೆ ಹೇಳಿದರು.

ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನೆಗಳು. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲವು ಸಹಜ. ಒಳ್ಳೆಯ ಕೆಲಸಕ್ಕೆ ಜನ ಬೆಂಬಲ ನೀಡುತ್ತಾರೆ. ಸೋತವರು ಜನತೆಯ ಮಧ್ಯ ಉಳಿದು ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್‌ನ ಸಂಪೂರ್ಣ ರಾಜ್ಯ ನಾಯಕತ್ವ ಮತ್ತು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಶ್ಲಾಘಿಘಿಸಿದ ಅವರು, ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ನಮಗೆ ಈ ಫಲಿತಾಂಶ ಬಂದಿದೆ. ಜನರು ಸಹ ಇದಕ್ಕೆ ಸ್ಪಂದಿಸಿದ್ದಾರೆ, ಬಡವರು ಮತ್ತು ದೀನ ದಲಿತರು ನಮಗಾಗಿ ಮತ ಚಲಾಯಿಸಿದ್ದರಿಂದ ನಮ್ಮ ಭರವಸೆಗಳು ಕೆಲಸ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷರು ಹೇಳಿದರು.

ನಾನು ಅಧ್ಯಕ್ಷನಾದ ಬಳಿಕ ಇಲ್ಲಿಂದ ಅಮೃತ ಘಳಿಗೆ ಆರಂಭವಾಗಿದೆ ಎನ್ನಲಾರೆ. ಹಾಗೆಯೇ ಮೋದಿ ಬಗ್ಗೆ ವ್ಯಕ್ತಿಗತವಾಗಿ ಟೀಕೆ ಮಾಡಲಾರೆ. ಆದರೆ ಅವರು ತಾವಾಗಿಯೇ ಮುಖಭಂಗ ಮಾಡಿಕೊಂಡಿದ್ದಾರೆ. ಪ್ರಧಾನಿಯಾಗಿ ನಾಲ್ಕಾರು ಕಡೆ ಪ್ರಚಾರ ಮಾಡುವುದು, ಸಿದ್ಧಾಂತದ ಬಗ್ಗೆ ಹೇಳುವುದು ಸರಿ. ಆದರೆ, ಹದಿನೈದು-ಇಪ್ಪತ್ತು ಬಾರಿ ಬಂದಿದ್ದು, ಓಣಿಓಣಿ ತಿರುಗಿದ್ದು ನನಗೆ ಸರಿ ಕಾಣಲಿಲ್ಲ ಎಂದು ಖರ್ಗೆ ಪ್ರತಿಕ್ರಿಯಿಸಿದರು.

Karnataka election results 2023: ಬಿಜೆಪಿಗೆ ಮುಖಭಂಗದ ಜತೆ ತೀವ್ರ ಮುಜುಗರ !

ಎಲ್ಲ ಶಾಸಕರಿಗೂ ಬೆಂಗಳೂರಿಗೆ ಬುಲಾವ್‌

ನೂತನವಾಗಿ ಆಯ್ಕೆಯಾಗಿರುವ ಎಲ್ಲ ಕಾಂಗ್ರೆಸ್‌ ಶಾಸಕರಿಗೆ ತಕ್ಷಣ ಬೆಂಗಳೂರಿಗೆ ಬರಲು ಸೂಚಿಸಿ ಸಂದೇಶ ಕಳಿಸಿದ್ದೇವೆ. ಸರ್ಕಾರ ರಚನೆಯ ಸೂಕ್ತ ಪ್ರಕ್ರಿಯೆ ಅನುಸರಿಸಲಾಗುವುದು. ಎಲ್ಲರೂ ಬಂದ ಬಳಿಕ ಅವರಿಗೆ ಸರಿಯಾದ ಸಮಯದಲ್ಲಿ ಸೂಚನೆ ನೀಡಲಾಗುವುದು. ಅದರ ಬಳಿಕ, ಹೈಕಮಾಂಡ್‌ ವೀಕ್ಷಕರನ್ನು ಕಳುಹಿಸುತ್ತದೆ. ಬಳಿಕ ಸರ್ಕಾರ ರಚನೆಗೆ ಸರಿಯಾದ ಪ್ರಕ್ರಿಯೆ ಅನುಸರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿದರು.

Latest Videos
Follow Us:
Download App:
  • android
  • ios