ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಸಾಕಷ್ಟುಬಾರಿ ಯೋಚನೆ ಮಾಡಿ ಎಂಟಿಬಿ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಿದೆ ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. 

ಹೊಸಕೋಟೆ (ಏ.13): ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಸಾಕಷ್ಟುಬಾರಿ ಯೋಚನೆ ಮಾಡಿ ಎಂಟಿಬಿ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಿದೆ ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ತಾಲೂಕಿನ ದೇವಮೂಲೆ ಎಂದು ಪ್ರಸಿದ್ಧಿ ಪಡೆದಿರುವ ದಳಸಗೆರೆ ಗ್ರಾಮದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾನ್ಯವಾಗಿ ಸೂರ್ಯ ಹುಟ್ಟುವ ವೇಳೆಗೆ ಚುನಾವಣಾ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡ್ತಾರೆ. 

ಆದರೆ ಬಿಜೆಪಿ ಸೂರ್ಯ ಮುಳುಗಿದ ಮೇಲೆ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದ್ದು, ಹೊತ್ತು ಮುಳುಗಿದಂತೆ ಬಿಜೆಪಿ ಪಕ್ಷ ಮುಳುಗಲಿದೆ. ಹೊಸಕೋಟೆಯಲ್ಲಿ ಸಹ ಬಿಜೆಪಿ ಅಭ್ಯರ್ಥಿಯನ್ನು ಹಾಕಲು ಸಾಕಷ್ಟುಯೋಚನೆ ಮಾಡಿ ಎಂಟಿಬಿ ನಾಗರಾಜ್‌ ಅವರಿಗೆ ಟಿಕೆಟ್‌ ಕೊಟ್ಟಿದೆ. ನನ್ನ ಪ್ರತಿಸ್ಪ​ರ್ಧಿ ಯಾರೇ ಆಗಲಿ ಈ ಬಾರಿ ಚುನಾವಣೆಯಲ್ಲಿ ಜನಪರ ಆಡಳಿತ ನೀಡುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಲಿದ್ದು, ರಾಜ್ಯದಲ್ಲೂ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‌ ಪಕ್ಷ ಅ​ಧಿಕಾರಕ್ಕೆ ಬರಲಿದೆ ಎಂದರು.

ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌-ಜೆಡಿಎಸ್‌​ ಅಭ್ಯ​ರ್ಥಿ​ಗ​ಳಿಗೆ ಅಳಿವು ಉಳಿ​ವಿನ ಪ್ರಶ್ನೆ?

17ಕ್ಕೆ ನಾಮಪತ್ರ: ನಾನು ಈ ಭಾರಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು, ಏ.17ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿಯಲ್ಲಿ ಚುನಾವಣಾ​ಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದೇನೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಿ ನನಗೆ ಆಶೀರ್ವಾದ ಮಾಡಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚೀಮಂಡಹಳ್ಳಿ ಮುನಿಶಾಮಯ್ಯ ಮಾತನಾಡಿ, ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿ ಅ​ಕಾರವನ್ನು ಅನುಭವಿಸಿ ಪಕ್ಷಕ್ಕೆ ದ್ರೋಹ ಬಗೆದು ಹೋಗಿರುವವರಿಗೆ ಈ ಭಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು. 

ಶರತ್‌ ಬಚ್ಚೇಗೌಡರಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ಕೊಟ್ಟು ಅವರ ಗೌರವವನ್ನು ಕಾಪಾಡಿದೆ. ಕ್ಷೇತ್ರದ ಮತದಾರರು ಅವರನ್ನು ಗೆಲ್ಲಿಸಿ ಪಕ್ಷದ ಗೌರವವನ್ನು ಕಾಪಾಡಬೇಕಿದೆ ಎಂದರು. ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸಗೀರ್‌ ಅಹಮದ್‌, ಬಚ್ಚೇಗೌಡ, ಜಿಪಂ ಮಾಜಿ ಸದಸ್ಯ ವೈ.ಎಸ್‌.ಮಂಜುನಾಥ್‌, ಮಾದಾರ ಮಹಾಸಭಾ ಅಧ್ಯಕ್ಷ ಡಾ.ಎಚ್‌.ಎಂ.ಸುಬ್ಬರಾಜ್‌ ಸೇರಿದಂತೆ ಹಲವಾರು ಕಾಂಗ್ರೆಸ್‌ ಕಾರ್ಯಕರ್ತರ ಹಾಜರಿದ್ದರು.

ಮೋದಿ, ಶಾ ಟಕ್ಕರ್‌ ನಮ್ಮತ್ರ ನಡೆಯಲ್ಲ: ಸಂಸದ ಡಿ.ಕೆ.ಸುರೇಶ್‌

ಮಗನನ್ನ ಬೆಳೆಸೋಕೆ ಆಗಿಲ್ಲ, ಕಾರ‍್ಯಕರ್ತರನ್ನು ಬೆಳೆಸ್ತಾರ?: ಎಂಟಿಬಿ ನಾಗರಾಜ್‌ ಅವರು ತನ್ನ ಮಗನಿಗೆ ಟಿಕೆಟ್‌ ಕೊಡಿಸುವ ಭರದಲ್ಲಿ ಕ್ಷೇತ್ರದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಸುತ್ತಾಟ ಮಾಡಿಸಿ, ಅಂತಿಮವಾಗಿ ಟಿಕೆಟ್‌ ಕೊಡಿಸಲು ವಿಫಲರಾದರು. ಇನ್ನು ಅವರನ್ನು ನಂಬಿರುವ ಕಾರ್ಯಕರ್ತರನ್ನು ಯಾವ ರೀತಿ ರಾಜಕೀಯವಾಗಿ ಬೆಳೆಸ್ತಾರೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಬನ್ನಿ, ರಾಜಕೀಯವಾಗಿ ಸ್ಥಾನಮಾನ ಕೊಟ್ಟು ನಿಮ್ಮನ್ನು ಬೆಳೆಸ್ತೇವೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.