ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌-ಜೆಡಿಎಸ್‌​ ಅಭ್ಯ​ರ್ಥಿ​ಗ​ಳಿಗೆ ಅಳಿವು ಉಳಿ​ವಿನ ಪ್ರಶ್ನೆ?

ಜಿದ್ದಾ​ಜಿ​ದ್ದಿನ ಕಣ​ವಾ​ಗಿ ರೂಪು​ಗೊಂಡಿ​ರುವ ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಈ ಬಾರಿಯ ಚುನಾ​ವಣೆ ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾ​ಮಿ​ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಅವ​ರಿಗೆ ರಾಜ​ಕೀಯವಾಗಿ ಅಳಿವು ಉಳಿ​ವಿನ ಪ್ರಶ್ನೆ​ಯಾ​ಗಿದೆ. 

A question of survival for Congress JDS candidates in Ramanagara constituency gvd

ಎಂ.ಅಫ್ರೋಜ್‌ ಖಾನ್‌

ರಾಮ​ನ​ಗರ (ಏ.12): ಜಿದ್ದಾ​ಜಿ​ದ್ದಿನ ಕಣ​ವಾ​ಗಿ ರೂಪು​ಗೊಂಡಿ​ರುವ ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಈ ಬಾರಿಯ ಚುನಾ​ವಣೆ ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾ​ಮಿ​ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಅವ​ರಿಗೆ ರಾಜ​ಕೀಯವಾಗಿ ಅಳಿವು ಉಳಿ​ವಿನ ಪ್ರಶ್ನೆ​ಯಾ​ಗಿದೆ. ಜೆಡಿ​ಎಸ್‌ - ಕಾಂಗ್ರೆಸ್‌ ನ ಭದ್ರ​ಕೋ​ಟೆ ಎಂದೇ ಬಿಂಬಿ​ತ​ವಾ​ಗಿ​ರುವ ರಾಮ​ನ​ಗ​ರ​ ಕ್ಷೇತ್ರ​ದಲ್ಲಿ ಕಮಲ ಅರ​ಳಿ​ಸುವ ತವ​ಕ​ದ​ಲ್ಲಿ​ರುವ ಬಿಜೆ​ಪಿಯೂ ನಿರ್ಣಾ​ಯಕ ಪಾತ್ರ ವ​ಹಿ​ಸಲಿದೆ. 

ಈ ಚುನಾ​ವ​ಣೆ​ಯಲ್ಲಿ ಗೆದ್ದ​ವರ ರಾಜ​ಕೀಯ ಭವಿಷ್ಯ ಉಜ್ವ​ಲ​ಗೊಂಡರೆ, ಸೋತ​ವರು ಮೂಲೆ ಗುಂಪಾ​ಗು​ವು​ದ​ರಲ್ಲಿ ಯಾವ ಅನು​ಮಾ​ನವೂ ಇಲ್ಲ. ಈ ಕಾರ​ಣ​ದಿಂದಾ​ಗಿಯೇ ಒಂದೆಡೆ ನಿಖಿಲ್‌ ಕುಮಾ​ರ​ಸ್ವಾ​ಮಿ ಕ್ಷೇತ್ರ​ದ ಮೇಲೆ ಮತ್ತೊಮ್ಮೆ ಹಿಡಿತ ಸಾಧಿ​ಸಲು ಪ್ರಯ​ತ್ನಿ​ಸು​ತ್ತಿ​ದ್ದರೆ, ಮತ್ತೊಂದೆಡೆ ಇಕ್ಬಾಲ್‌ ಹುಸೇನ್‌ ಕ್ಷೇತ್ರ​ವನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆ​ದು​ಕೊ​ಳ್ಳಲು ಪ್ರತಿಷ್ಠೆ ಪಣ​ಕ್ಕಿಟ್ಟು ಹೋರಾಟ ನಡೆ​ಸು​ತ್ತಿ​ದ್ದಾರೆ. ಉಭಯ ನಾಯ​ಕರು ಕ್ಷೇತ್ರಾ​ದ್ಯಂತ ಅಬ್ಬರದ ಪ್ರಚಾರ ನಡೆಸಿ ಧೂಳೆ​ಬ್ಬಿ​ಸು​ತ್ತಿ​ದ್ದಾ​ರೆ.

ಸಂಪರ್ಕ ಕೊರತೆಯಿಂದಾಗಿ ರಘುಪತಿ ಭಟ್ಟರಿಗೆ ವಿಷಯ ತಿಳಿಸಲು ಸಾಧ್ಯವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ತಾತಾ-ತಂದೆ​ಯಂತೆ ನಿಖಿಲ್‌ಗೂ ಅಗ್ನಿ ಪರೀ​ಕ್ಷೆ: ಒಂದು ಕಾಲ​ದಲ್ಲಿ ಸೋತು ಸುಣ್ಣ​ವಾ​ಗಿದ್ದ ಗೌಡರ ಕುಟುಂಬಕ್ಕೆ ರಾಜ​ಕೀಯ ಮರು ಹುಟ್ಟು ಸಿಕ್ಕಿದ್ದು ರಾಮ​ನ​ಗರ ನೆಲ​ದ​ಲ್ಲಿಯೇ. ಹೀಗಾಗಿ ದೇವೇ​ಗೌಡ ಹಾಗೂ ಕುಮಾ​ರ​ಸ್ವಾಮಿ ಅವ​ರಂತೆ ನಿಖಿಲ್‌ ಕುಮಾ​ರ​ಸ್ವಾ​ಮಿಗೂ ಈ ಬಾರಿಯ ಚುನಾ​ವಣೆ ಅಗ್ನಿ ಪರೀ​ಕ್ಷೆ​ಯಾ​ಗಿದೆ. 1994ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ದಳ ಪರ ಅಲೆ ಇತ್ತು. ಆಗ ಪಕ್ಷದ ಚುಕ್ಕಾಣಿ ಹಿಡಿದಿದ್ದ ದೇವೇಗೌಡ ಅವರೇ ಮುಂದಿನ ಸಿಎಂ ಎನ್ನುವ ಕೂಗು ಎದ್ದಿತ್ತು. ರಾಮ​ನ​ಗರ ಕ್ಷೇತ್ರ​ದಿಂದ ಗೆದ್ದು ಮುಖ್ಯ​ಮಂತ್ರಿ ಹುದ್ದೆ​ಗೇರಿದರು. ಅಲ್ಲದೆ, ರಾಮನಗರ ಪ್ರತಿನಿಧಿಯಾಗಿದ್ದಾಗಲೇ ಪ್ರಧಾನ ಮಂತ್ರಿ ಹುದ್ದೆಯೂ ಒಲಿಯಿತು.

1999ರ ಚುನಾವಣೆಯಲ್ಲಿ ದೇವೇಗೌಡ, ಪುತ್ರರಾದ ರೇವಣ್ಣ, ಕುಮಾರಸ್ವಾಮಿ ಸೋತಿದ್ದರು. ಪಕ್ಷದೊಟ್ಟಿಗೆ ದೇವೇಗೌಡ ಕುಟುಂಬ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಎಂ.ವಿ. ಚಂದ್ರಶೇಖರಮೂರ್ತಿ ನಿಧನದಿಂದ ತೆರವಾಗಿದ್ದ ಕನಕಪುರ ಲೋಕಸಭೆ ಕ್ಷೇತ್ರಕ್ಕೆ 2002ರಲ್ಲಿ ನಡೆದ ಮರು ಚುನಾವಣೆ ಎದುರಾಯಿತು. ಅಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ವಿರುದ್ಧ ದೇವೇಗೌಡ ಜಯ ಸಾಧಿ​ಸಿ​ದರು. ಈ ಗೆಲುವು ದೇವೇಗೌಡರಿಗೆ ಮರು ಹುಟ್ಟು ನೀಡಿದರೆ, ಜೆಡಿಎಸ್‌ ನ ಪುನಶ್ಚೇತನಕ್ಕೂ ನಾಂದಿಯಾಯಿತು. ದೇವೇಗೌಡರು ಸಿಎಂ ಆಗಿದ್ದಾಗ 1996ರಲ್ಲಿ ಎದು​ರಾದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಕನಕಪುರ ಕ್ಷೇತ್ರದಲ್ಲಿ ಅವಿಭಜಿತ ಜನತಾದಳ ಅಭ್ಯರ್ಥಿಯಾದರು. 

ಚೊಚ್ಚಲ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸಿ ಸಂಸತ್‌ ಪ್ರವೇಶಿಸಿದರು. 1998ರ ಕನಕಪುರ ಲೋಕಸಭಾ ಕ್ಷೇತ್ರ ಚುನಾವಣೆ ಹಾಗೂ 1999ರ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಸಾತ​ನೂರು ಕ್ಷೇತ್ರ​ದಲ್ಲಿನ ಸೋಲು ಕುಮಾ​ರ​ಸ್ವಾ​ಮಿ​ರ​ವರ ರಾಜ​ಕೀಯ ಹಿನ್ನ​ಡೆಗೆ ಕಾರ​ಣ​ವಾ​ಯಿತು. ಆನಂತರ 2004ರಲ್ಲಿ ರಾಮ​ನ​ಗರ ಕ್ಷೇತ್ರ​ದಿಂದ ಆಯ್ಕೆ​ಯಾಗಿ ರಾಜ​ಕೀ​ಯ​ವಾಗಿ ಮರು ಜನ್ಮ ಪಡೆ​ದ​ರು. ಈಗ 2019ರ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಮಂಡ್ಯ ಕ್ಷೇತ್ರ​ದಲ್ಲಿ ಸೋತಿ​ರುವ ನಿಖಿಲ್‌ ಕುಮಾ​ರ​ಸ್ವಾಮಿ ರಾಜ​ಕೀಯ ಆಶ್ರಯ ಪಡೆ​ಯಲು ರಾಮ​ನ​ಗರ ಕ್ಷೇತ್ರಕ್ಕೆ ಬಂದಿ​ದ್ದಾರೆ. ಈ ಕ್ಷೇತ್ರ​ದಲ್ಲಿ ಮೊದಲ ಬಾರಿಗೆ ಜೆಡಿ​ಎಸ್‌ , ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತ್ರಿಕೋನ ಪೈಪೋಟಿ ನಡೆ​ಯ​ಲಿದ್ದು, ಅದೃ​ಷ್ಟದ ನೆಲ ಯಾರ ಕೈ ಹಿಡಿ​ಯ​ಲಿದೆ ಎಂಬುದನ್ನು ಕಾದು ನೋಡ​ಬೇ​ಕಿದೆ.

ಬದ​ಲಾ​ವ​ಣೆಯ ​ಗಾ​ಳಿ ಬೀಸುವುದೇ?: ಕಳೆದ 29 ವರ್ಷ​ಗ​ಳಿಂದ ರಾಮ​ನ​ಗರ ಕ್ಷೇತ್ರ​ದಲ್ಲಿ ಮಾಜಿ ಪ್ರಧಾನಿ ದೇವೇ​ಗೌ​ಡರ ಕುಟುಂಬಕ್ಕೆ ಸೇರಿ​ದ​ವರೇ ಶಾಸ​ಕ​ರಾಗಿ ಆಯ್ಕೆ​ಯಾ​ಗುತ್ತಾ ಬಂದಿ​ದ್ದಾರೆ. ಆದರೆ, ಈ ಬಾರಿಯ ವಾತಾ​ವರಣ ಹಿಂದಿನ ಚುನಾ​ವ​ಣೆ​ಗ​ಳಂತೆ ದಳ​ಪ​ತಿ​ಗ​ಳಿಗೆ ಪೂರ​ಕ​ವಾ​ಗಿಲ್ಲ. ಎಚ್‌.ಡಿ.ದೇವೇ​ಗೌಡ, ಪುತ್ರ ಎಚ್‌.ಡಿ.ಕುಮಾ​ರಸ್ವಾಮಿ, ಸೊಸೆ ಅನಿತಾಕುಮಾ​ರ​ಸ್ವಾಮಿ ತರು​ವಾಯ ಮೊಮ್ಮಗ ನಿಖಿಲ್‌ ಕುಮಾ​ರ​ಸ್ವಾಮಿ ಅವ​ರಿಗೂ ದುಡಿ​ಯ​ಬೇಕೇ ಎಂಬ ಪ್ರಶ್ನೆ ಪಕ್ಷದ ಹಿರಿಯ ಮುಖಂಡ​ರನ್ನೇ ಕಾಡು​ತ್ತಿದೆ. ಅಲ್ಲದೆ, ಒಂದು ಕುಟುಂಬ​ದ​ವ​ರಿಗೆ ಕ್ಷೇತ್ರ​ವನ್ನು ಮುಡಿ​ಪಾ​ಗಿ​ಡು​ವುದು, ಗೆದ್ದ ಮೇಲೆ ಕೈಗೆ ಸಿಗ​ದಿ​ರು​ವುದು, ಕ್ಷೇತ್ರದ ಅಭಿ​ವೃ​ದ್ಧಿ​ಯ​ಲ್ಲಿ ನಿರ್ಲ​ಕ್ಷ್ಯ ತೋರಿ​ದ್ದಾರೆಂಬ ಬೇಸ​ರವೂ ಜನ​ರ ಮನ​ದಲ್ಲಿದೆ. ಹೀಗಾಗಿ ಕ್ಷೇತ್ರ​ದಲ್ಲಿ ಬದ​ಲಾ​ವ​ಣೆ ಗಾಳಿಯೂ ಬೀಸುತ್ತಿದೆ. 

ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್‌

ಕ್ಷೇತ್ರ​ದಲ್ಲಿ 29 ವರ್ಷ​ಗ​ಳಿಂದ ತಮ್ಮ ಪಕ್ಷದ ಶಾಸ​ಕರು ಇಲ್ಲ​ದಿ​ರುವ ನೋವು ಕಾಂಗ್ರೆಸ್ಸಿಗ​ರಿಗೆ ಕಾಡು​ತ್ತಿದೆ. ಕ್ಷೇತ್ರ ಅಭಿ​ವೃ​ದ್ಧಿ​ಯಲ್ಲಿ ಹಿಂದು​ಳಿ​ದಿ​ರು​ವುದು ಹಾಗೂ ಜೆಡಿ​ಎಸ್‌ ನ ಕುಟುಂಬ ರಾಜ​ಕಾ​ರ​ಣದ ಬಗ್ಗೆ ಕಾಂಗ್ರೆಸ್‌ ಮತ​ದಾ​ರ​ರಿಗೆ ಮನ​ವ​ರಿಕೆ ಮಾಡಿ​ಕೊ​ಡು​ತ್ತಿ​ದ್ದಾರೆ. ಜತೆಗೆ ಕಳೆದ ಚುನಾ​ವ​ಣೆ​ಯಲ್ಲಿ ಕುಮಾ​ರ​ಸ್ವಾಮಿ ಎದುರು ಪರಾ​ಭ​ವ​ಗೊಂಡರು ಪಕ್ಷ ಸಂಘ​ಟ​ನೆ​ಯಲ್ಲಿ ಸಕ್ರಿ​ಯ​ರಾ​ಗಿರುವ ಇಕ್ಬಾಲ್‌ ಹುಸೇನ್‌ ಗೆಲು​ವಿ​ಗಾಗಿ ಇನ್ನಿ​ಲ್ಲದ ಕಸ​ರತ್ತು ನಡೆ​ಸು​ತ್ತಿ​ದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios