ಮೋದಿ, ಶಾ ಟಕ್ಕರ್‌ ನಮ್ಮತ್ರ ನಡೆಯಲ್ಲ: ಸಂಸದ ಡಿ.ಕೆ.ಸುರೇಶ್‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಪ್ರಧಾನಿ ನರೇಂದ್ರ ಮೋದಿಯವರ ಟಕ್ಕರ್‌ ಆಗಲಿ, ಅಮಿತ್‌ ಶಾ ಟಕ್ಕರ್‌ ಆಗಲಿ ನಮ್ಮತ್ರ ನಡೆಯಲ್ಲ. ಏನಾಗೋತ್ತೋ ನೋಡೋಣ ಎಂದು ಕನಕಪುರದಲ್ಲಿ ಸಚಿವ ಆರ್‌.ಅಶೋಕ್‌ ಸ್ಪರ್ಧೆ ಕುರಿತಂತೆ ಸಂಸದ ಡಿ.ಕೆ.ಸುರೇಶ್‌ ಟಾಂಗ್‌ ನೀಡಿದರು. 

MP DK Suresh Slams On Narendra Modi And Amit Shah At Ramanagara gvd

ರಾಮನಗರ (ಏ.13): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಪ್ರಧಾನಿ ನರೇಂದ್ರ ಮೋದಿಯವರ ಟಕ್ಕರ್‌ ಆಗಲಿ, ಅಮಿತ್‌ ಶಾ ಟಕ್ಕರ್‌ ಆಗಲಿ ನಮ್ಮತ್ರ ನಡೆಯಲ್ಲ. ಏನಾಗೋತ್ತೋ ನೋಡೋಣ ಎಂದು ಕನಕಪುರದಲ್ಲಿ ಸಚಿವ ಆರ್‌.ಅಶೋಕ್‌ ಸ್ಪರ್ಧೆ ಕುರಿತಂತೆ ಸಂಸದ ಡಿ.ಕೆ.ಸುರೇಶ್‌ ಟಾಂಗ್‌ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‌ ಮಾಜಿ ಡಿಸಿಎಂ ಆರ್‌.ಅಶೋಕ್‌ ಅವರನ್ನ ಕನಕಪುರ ಅಭ್ಯರ್ಥಿ ಮಾಡಿದೆ. 

ಅವರ ಪಕ್ಷದ ಆದೇಶದ ಮೇರೆಗೆ ಅವರು ಸ್ಪರ್ಧೆ ಮಾಡುತ್ತಿರಬಹುದು. ಮೋದಿಯವರ ಟಕ್ಕರ್‌ ಆಗಲಿ, ಅಮಿತ್‌ ಶಾ ಟಕ್ಕರ್‌ ಆಗಲಿ ನಮ್ಮತ್ರ ನಡೆಯೊಲ್ಲ. ಕರ್ನಾಟಕದ ಜನ ಬುದ್ದಿವಂತರಿದ್ದಾರೆ ಎಂದರು. ರಾಮನಗರ ಜಿಲ್ಲೆಯ ಜನ ಎಲ್ಲರನ್ನೂ ನೋಡಿದ್ದಾರೆ. ಇಂತಹ ಮಹಾ ನಾಯರನ್ನು ನಾವೂ ಸಹ ನೋಡಿದ್ದೇವೆ. ಇದು ಕನಕಪುರಕ್ಕೆ ಹೊಸದಲ್ಲ. ಮೇ 10ರಂದು ಜನತೆ ಇದಕ್ಕೆ ಉತ್ತರ ನೀಡುತ್ತಾರೆ. ರಾಜಕೀಯ ರಣರಂಗದ ಚದುರಂಗದ ಆಟ ನಡಿತಿದೆ. ಏನಾಗುತ್ತೋ ಕಾದು ನೋಡೊಣ ಎಂದು ಮಾರ್ಮಿಕವಾಗಿ ನುಡಿದರು. ರಾಜ್ಯದ ಜನತೆ ಭ್ರಷ್ಟಾಚಾರದಿಂದ ನೊಂದಿದ್ದಾರೆ. 

ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌-ಜೆಡಿಎಸ್‌​ ಅಭ್ಯ​ರ್ಥಿ​ಗ​ಳಿಗೆ ಅಳಿವು ಉಳಿ​ವಿನ ಪ್ರಶ್ನೆ?

ಜನ ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿದ್ದಾರೆ. ಬಿಜೆಪಿಗೆ ಭಯ ಪ್ರಾರಂಭ ಆಗಿದೆ. ಹಾಗಾಗಿ ಈ ರೀತಿ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಕಟ್ಟಿಹಾಕಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಯಾರನ್ನೂ ಕಟ್ಟಾಕೋಕಾಗಲ್ಲ. ಯಾರಿಗೆ ಏನು ಮಾಡಬೇಕು ಅಂತ ಕನಕಪುರದ ಜನಕ್ಕೆ ಗೊತ್ತಿದೆ. ಅವರಿಗೆ ಆ ದಾರಿ ತೋರಿಸ್ತಾರೆ. ಇಲ್ಲಿ ಯಾರನ್ನೂ ಡಿಸ್ಟರ್ಬ್‌ ಮಾಡೋಕಾಗಲ್ಲ. ಡಿಸ್ಟರ್ಬ್‌ ಆಗೋವವರು ಇದ್ದರೆ ತಾನೆ ಡಿಸ್ಟರ್ಬ್‌ ಮಾಡೋದು. ಡಿ.ಕೆ.ಶಿವಕುಮಾರ್‌ ಇಲ್ಲಿ ಅರ್ಜಿ ಹಾಕ್ತಾರೆ. ಬಳಿಕ ರಾಜ್ಯ ಪ್ರವಾಸ ಮಾಡ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ನಂದಿನಿ ಮುಳುಗಿಸಲು ಬಿಜೆಪಿ ಯತ್ನ: ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಬಿಜೆಪಿ ಹವಣಿಸುತ್ತಿದೆ. ಕನ್ನಡಿಗರು ಕಟ್ಟಿಬೆಳೆಸಿದ ಪ್ರತಿಷ್ಠಿತ ಎಸ್‌ಬಿಎಂ, ಸಿಂಡಿಕೇಟ್‌ ಬ್ಯಾಂಕ್‌ಗಳನ್ನು ಮುಳುಗಿಸಿರುವ ಬಿಜೆಪಿಯವರು ಈಗ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಗುಂಡಿ ತೋಡುತ್ತಿದ್ದಾರೆ. ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್‌ ಎಚ್ಚರಿಸಿದ್ದಾರೆ. 

ಎಐಸಿಸಿ ವಕ್ತಾರ ಗೌರವ್‌ ವಲ್ಲಭ್‌, ಬಮೂಲ್‌ ಅಧ್ಯಕ್ಷ ನರಸಿಂಹ ಮೂರ್ತಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವೆಲ್ಲರೂ ಚುನಾವಣೆ ಸಮಯದಲ್ಲಿದ್ದೇವೆ. ಜನರ ದೃಷ್ಟಿರಾಜಕಾರಣದತ್ತ ಇರುತ್ತದೆ. ಈ ಸಂದರ್ಭದಲ್ಲಿ ರಾಜ್ಯದೊಳಗೆ ಬೇರೆ ಬೇರೆ ರೂಪದಲ್ಲಿ ನುಸುಳುವ ಪ್ರಯತ್ನವನ್ನು ಅಮುಲ್‌ ಮಾಡುತ್ತಿದೆ. ಇವರ ಪಾಲಿಗೆ ಕನ್ನಡಿಗರು ಎಂದರೆ ಅಷ್ಟೊಂದು ಕೀಳು ಮನೋಭಾವನೆಯೇ? ಎಂದು ಕಿಡಿಕಾರಿದರು. ರೈತರಿಗೆ ನೆರವಾಗಲು ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟವನ್ನು ಸ್ಥಾಪಿಸಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ. 

ಬಿಜೆಪಿಯಲ್ಲಿ ಕಳ್ಳ ಸಾಗಾಣಿಕೆದಾರರಿಗೆ ಟಿಕೆಟ್: ಎಚ್.ಡಿ.‌ಕುಮಾರಸ್ವಾಮಿ

ಈ ಹಂತದಲ್ಲಿ ರೈತರ ಬದುಕನ್ನು ಕಸಿಯಲು ಮುಂದಾಗಿರುವ ಗುಜರಾತ್‌ ಸಂಸ್ಥೆ ಹಾಗೂ ಅದಕ್ಕೆ ಬೆಂಬಲಿಸುತ್ತಿರುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios