ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ಬಿಜೆಪಿಯು ಪಾಕಿಸ್ತಾನವನ್ನು "ಶತ್ರು ದೇಶ" ಎಂದು ಪರಿಗಣಿಸಿದರೆ, ಕಾಂಗ್ರೆಸ್ ಅದನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ಎಂದಿದ್ದಾರೆ. 

ಬೆಂಗಳೂರು (ಫೆ.28): ರಾಜ್ಯ ವಿಧಾನಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಬುಧವಾರ ಬಿಜೆಪಿಗೆ ಪಾಕಿಸ್ತಾನವು "ಶತ್ರು ದೇಶ" ಆಗಿರಬಹುದು, ಆದರೆ ಕಾಂಗ್ರೆಸ್ ಅದನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ಎಂದು ಹೇಳುವ ಮೂಲಕ ವಿವಾದವೆಬ್ಬಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ದೇಶವಿರೋಧಿ ಭಾವನೆಗಳನ್ನು ಹೊಂದಿದೆ ಎಂದು ಆರೋಪಿಸಿದೆ. ಮಂಗಳವಾರ ರಾಜ್ಯಸಭೆ ಚುನಾವಣೆಯಲ್ಲಿ ನಾಸಿರ್‌ ಹುಸೇನ್‌ ಗೆಲುವು ಸಾಧಿಸಿದ ಬಳಿಕ ವಿಧಾನಸಭೆಯ ಆವರಣದಲ್ಲಿ ಪಾಕ್‌ ಪರವಾದ ಘೋಷಣೆಗಳನ್ನು ಕೂಗಲಾಗಿದೆ ಎನ್ನುವ ಆರೋಪದ ಕುರಿತಾಗಿ ವಿಧಾನಪರಿಷತ್‌ನಲ್ಲಿ ನಡೆದ ಚರ್ಚೆಯ ವೇಳೆ ಬಿಕೆ ಹರಿಪ್ರಸಾದ್‌ ಈ ಮಾತು ಹೇಳಿದ್ದಾರೆ. 'ಶತ್ರುದೇಶದೊಂದಿಗೆ ನಮ್ಮ ಸಂಬಂಧದ ಬಗ್ಗೆ ಅವರು ಮಾತನಾಡುತ್ತಾರೆ. ಅವರ ಪ್ರಕಾರ, ಪಾಕಿಸ್ತಾನ ಎನ್ನುವುದು ಶತ್ರುದೇಶ. ಆದರೆ, ನಮಗೆ ಪಾಕಿಸ್ತಾನ ಯಾವತ್ತಿಗೂ ಶತ್ರುದೇಶವಲ್ಲ. ಇದು ನಮ್ಮ ನೆರೆಯ ರಾಷ್ಟ್ರವಷ್ಟೆ. ಅವರು (ಬಿಜೆಪಿ) ಪಾಕಿಸ್ತಾನವನ್ನು ಶತ್ರು ದೇಶ ಎಂದು ಹೇಳುತ್ತಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್‌ಕೆ ಆಡ್ವಾಣಿಗೆ ಭಾರತ ರತ್ನ ನೀಡಿ ಗೌರವಿಸಿತು. ಆದರೆ, ಅವರು ಪಾಕಿಸ್ತಾನದ ಲಾಹೋರ್‌ನಲ್ಲಿರುವ ಜಿಲ್ಲಾ ಸಮಾಧಿಗೆ ಭೇಟಿ ನೀಡಿ, ಅವರಷ್ಟು ಜಾತ್ಯಾತೀತ ನಾಯಕ ಯಾರೂ ಇಲ್ಲ ಎಂದಿದ್ದರು. ಆಗ ಬಿಜೆಪಿಗರಿಗೆ ಪಾಕಿಸ್ತಾನ ಶತ್ರು ದೇಶವಾಗಿರಲಿಲ್ಲವೇ? ಎಂದು ಹರಿಪ್ರಸಾದ್‌ ಪ್ರಶ್ನೆ ಮಾಡಿದ್ದಾರೆ.

ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ ನಂತರವೂ ಪಾಕಿಸ್ತಾನವನ್ನು "ಶತ್ರು ರಾಷ್ಟ್ರ" ಎಂದು ಕಾಂಗ್ರೆಸ್‌ ಕರೆಯೋದಿಲ್ಲ, ಪಕ್ಷವು "ದೇಶ ವಿರೋಧಿ ಭಾವನೆಗಳನ್ನು" ಹೊಂದಿದೆ ಎಂದು ಹೇಳಿದೆ.

''ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್ ನಿಲುವು ಮತ್ತು ಏನು ಎನ್ನುವುದನ್ನು ಸದನದಲ್ಲಿ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ನಡುವಿನ ನಿಕಟ ಸಂಬಂಧವು ಇಂದಿಗೂ ಮುಂದುವರೆದಿದೆ ಎಂದು ಜವಾಹರಲಾಲ್ ನೆಹರು-ಮೊಹಮ್ಮದ್ ಅಲಿ ಜಿನ್ನಾಗೂ ಈಗ ತಿಳಿದಿರಬಹುದು. ಬಿಜೆಪಿಗೆ ಪಾಕಿಸ್ತಾನವನ್ನು ಶತ್ರು ಎಂದು ಕರೆಯುವ ಪೀಳಿಗೆ ಮತ್ತು ಕಾಂಗ್ರೆಸ್‌ಗೆ ಪಾಕಿಸ್ತಾನವನ್ನು ನೆರೆಹೊರೆಯವರೆಂದು ಕರೆಯುವ ಪೀಳಿಗೆ," ಎಂದು ಕರ್ನಾಟಕ ಬಿಜೆಪಿಯ ಟ್ವೀಟ್‌ ಮಾಡಿದೆ. ''ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಬೆಂಬಲಕ್ಕೆ ನಿಂತಿದ್ದಲ್ಲದೆ, ದೇಶದ ಮೇಲೆ ನಾಲ್ಕು ಬಾರಿ ಯುದ್ಧ ಸಾರಿದ ಪಾಕಿಸ್ತಾನ ಶತ್ರುರಾಷ್ಟ್ರವಲ್ಲ ಎಂಬ ಕಾಂಗ್ರೆಸ್ಸಿಗರ ಮನಸ್ಥಿತಿಗೆ ಅವಮಾನಕಾರಿಯಾಗಿದೆ.ಬಿಕೆ ಹರಿಪ್ರಸಾದ್‌ ಹೇಳಿರುವಂಥ ದೇಶವಿರೋಧಿ ಭಾವನೆಗಳು ಕಾಂಗ್ರೆಸ್‌ನ ಎಲ್ಲಾ ಹಂತಗಳಲ್ಲಿ ಅತಿರೇಕವಾಗಿದೆ ಎಂದು ಬರೆಯಲಾಗಿದೆ.

News Hour: ಲೋಕಸಭೆ ಹೊತ್ತಲ್ಲಿ ಕಿಚ್ಚೆಬ್ಬಿಸಿದ ಜಿಂದಾಬಾದ್ ಜಟಾಪಟಿ

ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್ ನಾಯಕ ಸೈಯದ್ ನಾಸೀರ್ ಹುಸೇನ್ ಅವರ ಚುನಾವಣಾ ಗೆಲುವಿನ ನಂತರ ಅವರ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕರ್ನಾಟಕ ವಿಧಾನಸಭೆಯ ಇಡೀ ಕಲಾಪದಲ್ಲಿ ಪ್ರತಿಭಟನೆ ನಡೆಸಿತು. ಆಡಳಿತಾರೂಢ ಕಾಂಗ್ರೆಸ್ ಹೊಣೆಗಾರರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಪಕ್ಷದ ಕಾರ್ಯಕರ್ತರು ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆಗಾಗಿ ‘ನಸೀರ್ ಸಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದಾರೆಯೇ ಹೊರತು ‘ಪಾಕಿಸ್ತಾನ ಜಿಂದಾಬಾದ್’ ಅಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಶತಕದತ್ತ ಸಿದ್ಧು ಸರ್ಕಾರದ ಸಂಪುಟ ದರ್ಜೆ ಸ್ಥಾನಮಾನ, ಮಾಜಿ ಸಚಿವ ಎಚ್‌ಎಂ ರೇವಣ್ಣ ಹೊಸ ಎಂಟ್ರಿ!

Scroll to load tweet…