ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಬೆಂಗಳೂರಿಗೆ ಮತ್ತು ಹಳೆ ಮೈಸೂರಿಗೆ ವಿಶೇಷ ಭರವಸೆ ಘೋಷಿಸಿದೆ. ಅಇದರ ಸಂಫೂರ್ಣ ವಿವರ ಇಲ್ಲಿದೆ.

ಬೆಂಗಳೂರು (ಮೇ.1): ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಬರೋಬ್ಬರಿ 16 ಪ್ರಮುಖ ಭರವಸೆಗಳನ್ನು ಇಟ್ಟುಕೊಂಡು ಬಿಜೆಪಿ ತನ್ನ ಭರಪೂರ ಯೋಜನೆಗಳನ್ನು ಘೋಷಿಸಿದೆ. ಈ ಮೂಲಕ ಕಾಂಗ್ರೆಸ್‌ ‘ಗ್ಯಾರಂಟಿ’ಗಳಿಗೆ ಮತ್ತು ಜೆಡಿಎಸ್‌ ನ ಭರವಸೆಗೆ ಸೆಡ್ಡು ಹೊಡೆದಿದೆ. ಬೆಂಗಳೂರಿಗೆ ಮತ್ತು ಹಳೆ ಮೈಸೂರಿಗೆ ವಿಶೇಷ ಭರವಸೆ ಘೋಷಿಸಿದೆ.

ಅನ್ನ, ಅಭಯ, ಅಕ್ಷರ , ಆರೋಗ್ಯ, ಅಭಿವೃದ್ಧಿ ಮತ್ತು ಆದಾಯ ಈ 6 ವಿಷಯವನ್ನು ಮೂಲ ಮಂತ್ರವನ್ನಾಗಿಟ್ಟುಕೊಂಡು ಬಿಜೆಪಿ ಈ ಬಾರಿ ಪ್ರಜಾ ಪ್ರಣಾಳಿಗೆ ಬಿಡುಗಡೆ ಮಾಡಿದೆ. ಇದರಲ್ಲಿ ಕೃಷಿ, ಎಲ್ಲವನ್ನೊಳಗೊಂಡ ಅಭಿವದ್ಧಿ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ , ಗ್ರಾಮಾಭಿವೃದ್ಧಿ , ಆರ್ಥಿಕತೆ, ಕೈಗಾರಿಕೆ ಮತ್ತು ಮೂಲಸೌಕರ್ಯ, ಉತ್ತಮ ಆಡಳಿತ, ಮಹಿಳೆಯರು ಮತ್ತು ಮಕ್ಕಳು, ಯುವಜನ ಮತ್ತು ಕ್ರೀಡೆ, ಸಂಸ್ಕೃತಿ ಮತ್ತು ಪರಂಪರೆ, ಬೆಂಗಳೂರು ಅಭಿವೃದ್ಧಿ, ಮಧ್ಯ ಕರ್ನಾಟಕ , ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ ಮತ್ತು ಹಳೆ ಮೈಸೂರು ಭಾಗಗಳಿಗೆ ವಿಶೇಷ ಭರವಸೆಯನ್ನು ಘೋಷಿಸಿದೆ.

ಬೆಂಗಳೂರಿಗೆ ನೀಡಿರುವ ಭರವಸೆಗಳು:

  • ವಿಶ್ವದರ್ಜೆಯ ಮಲ್ಟಿ-ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ 'ಕಾನ್‌ಕಾರ್ಡ್‌ ಬೆಂಗಳೂರು' ಸ್ಥಾಪನೆ
  • ಟ್ರಾನ್ಸ್‌ಪೋರ್ಟ್ ಫಾರ್ ಲಂಡನ್‌ನಿಂದ ಪ್ರೇರಿತವಾದ ಬೆಂಗಳೂರು ಏಕೀಕೃತ ಟ್ರಾನ್ಸಿಟ್ ನೆಟ್‌ವರ್ಕ್ ರಚನೆ
  • ಮೈ ಬೆಂಗಳೂರು, ಮೈ ರೂಟ್ ಎಂಬ ಇಂಟಿಗ್ರೇಟೆಡ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಆರಂಭ
  • ಬೆಂಗಳೂರಿನ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ಪ್ರಯಾಣ ಸುಗಮ 'ಒನ್ ಸಿಟಿ ಒನ್ ಕಾರ್ಡ್' ಎಂಬ ಯೂನಿವರ್ಸಲ್ ಟ್ರಾವೆಲ್ ಕಾರ್ಡ್ 
  • ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ, ಗೊರಗುಂಟೆ ಪಾಳ್ಯ, ಮೇಟ್ರಿ ಸರ್ಕಲ್, ಸರ್ಜಾಪುರ ಮತ್ತು ಇತರ ಪ್ರದೇಶಗಳಲ್ಲಿ ಸುರಕ್ಷಿತ ಸಂಚಾರ, ಸಂಚಾರ ದಟ್ಟಣೆ ನಿಭಾಯಿಸಲು ಕೃತಕ ಬುದ್ಧಿಮತ್ತೆಯ ಸಮಗ್ರ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ 

ಡಿಜಿಟಲ್ 4.0 ಭರವಸೆಗಳು:

  • ಯುವಕರಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕದ ಮೊದಲ ಗ್ಲೋಬಲ್ ಇನ್ನೋವೇಶನ್ ಹಬ್ , 'ಯುವ- ಕರುನಾಡು-ಡಿಜಿಟಲ್ 4.0' ಪ್ರಾರಂಭ.
  • ಬೆಂಗಳೂರಿನಲ್ಲಿ ಅತ್ಯಾಧುನಿಕ ಇನ್ನೂ ಬೇಕನ್ ಕೇಂದ್ರ, 'ಯುವಗುರು-ಡಿಜಿಟಲ್ 4.0' ಯೋಜನೆ ಪ್ರಾರಂಭ.
  • ಜರ್ಮನಿ ಮತ್ತು ಜಪಾನ್‌ನಲ್ಲಿರುವಂತೆ ವೇಗದ ಇಂಟರ್ನೆಟ್ ಸೌಲಭ್ಯ ಮೂಲಕ ಬೆಂಗಳೂರಿನಲ್ಲಿ ಗಿಗಾಬಿಟ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಸ್ಥಾಪನೆ.
  • ಮಗು ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 'ವರ್ಚುವಲ್ ರಿಯಾಲಿಟಿ ಲ್ಯಾಬ್' ಸ್ಥಾಪನೆ. 'ವರ್ಚುವಲ್ ವಿದ್ಯಾಯೋಜನೆ' ಪ್ರಾರಂಭ
  • ಬೆಂಗಳೂರಿನಲ್ಲಿ ಅತ್ಯಾಧುನಿಕ 'ಟೆಕ್-ನೇತೃತ್ವದ ರೂಪಾಂತರ ಸಂಶೋಧನಾ ಕೇಂದ್ರ' ಸ್ಥಾಪನೆ
  • ಬೆಂಗಳೂರು ಆನ್ ಬೋರ್ಡ್' ಎಂಬ ಡ್ಯಾಶ್‌ಬೋರ್ಡ್ ಪರಿಚಯಿಸುವ ಮೂಲಕ ಬೆಂಗಳೂರಿನಲ್ಲಿ ಡಿಜಿಟಲ್ ಆಡಳಿತಕ್ಕೆ ಒತ್ತು.
  • ನೀರಿನ ಸಮರ್ಪಕ ಬಳಕೆಗಾಗಿ ಬೆಂಗಳೂರಿನಲ್ಲಿ 'ಸ್ಮಾರ್ಟ್ ವಾಟರ್ ಯೋಜನೆ' ಆರಂಭ 

ರಾಜಕಾಲುವೆಗಳ ಪುನಶ್ವೇತನಕ್ಕಾಗಿ 'ಮಿಷನ್ ರಾಜಕಾಲುವೆ' ಆರಂಭ:

  • ಒಳಚರಂಡಿಗೆ ಸಂಬಂಧಿಸಿ ಸಮಗ್ರ ರಾಜಕಾಲುವೆ ವ್ಯವಸ್ಥೆಯ ಪುನಾರಚನೆ
  • ರಾಜಕಾಲುವೆಗಳ ಮೇಲಿನ ಒತ್ತುವರಿಗಳನ್ನು ತೆರವು ಗೊಳಿಸಿ, ಅದರ ಮೇಲೆ ಪಾದಚಾರಿ ಮಾರ್ಗಗಳ ನಿರ್ಮಾಣ

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸುಲಲಿತ ಜೀವನಕ್ಕಾಗಿ ಈ ಕೆಳಗಿನ ಭರವಸೆ:

  • ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ, 1972ಅನ್ನು ಪರಿಶೀಲಿಸಿ, ಸೂಕ್ತ ತಿದ್ದುಪಡಿ 
  • ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ಎಲ್ಲ ಅಪ್ಲಿಕೇಷನ್‌ಗಳು ಆನ್‌ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವುದು, ಮಾನಿಟರಿಂಗ್ ಸಿಸ್ಟಮ್ ಜಾರಿ 
  • ಕರ್ನಾಟಕ ಮನೆ ಮಾಲೀಕರ ಕುಂದುಕೊರತೆ ನಿವಾರಣಾ ಕೇಂದ್ರ ಸ್ಥಾಪನೆ

ಮಹಿಳೆಯ ಸುರಕ್ಷತೆ ಮತ್ತು ಭದ್ರತೆಗಾಗಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಸಿಸಿಟಿವಿಗಳ ಅಳವಡಿಕೆ

Karnataka BJP Manifesto 2023: 16 ಭರವಸೆಗಳ ಬಿಜೆಪಿ ಪ್ರಣಾಳಿಕೆ ಬಿಡುಗಡೆ,

ಹಳೆ ಮೈಸೂರಿಗೆ ಬಿಜೆಪಿ ಭರವಸೆಗಳು:

  1. ಮೈಸೂರಿನಲ್ಲಿ ಆಹಾರ ಸಂಸ್ಕರಣಾ ಪಾರ್ಕ್ ಸ್ಥಾಪಿಸಲು ಕೆ-ಅಗ್ರಿ ಫಂಡ್ ಬಳಕೆ.
  2. ಇಂಟರ್ನ್ಯಾಷನಲ್ ಸೆಮಿಕಂಡಕ್ಟರ್ ಕಸ್ಫೋರ್ಟಿಯಂನೊಂದಿಗೆ ಜಿಲ್ಲಾ ಮಟ್ಟದಲ್ಲಿ 'ಎಲೆಕ್ಟ್ರಾನಿಕ್ ಉತ್ಪಾದನಾ ಕ್ಲಸ್ಟರ್' ಮತ್ತು "ಇಂಟಿಗ್ರೇಟೆಡ್ ಪಾರ್ಕ್" ಸ್ಥಾಪನೆ
  3. 'ಮಿಷನ್ ಕನೆಕ್ಟ್ ಕರ್ನಾಟಕ'ದ ಅಡಿಯಲ್ಲಿ ಪ್ರಾದೇಶಿಕ ವಾಯುಯಾನ ಸಂಪರ್ಕ ಕಲ್ಪಿಸಲು ಉಡಾನ್ ಯೋಜನೆಯಡಿ ತುಮಕೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪನೆ
  4. ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲು, ಪಿಪಿಪಿ ಮಾದರಿಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರದಲ್ಲಿ ಶೀತಲೀಕರಣ ಘಟಕಗಳ ಸ್ಥಾಪನೆ.
  5. ಈ ಪ್ರದೇಶದ ಜಿಲ್ಲಾ ಕೇಂದ್ರಗಳಲ್ಲಿ ನೂಲು ಬ್ಯಾಂಕ್‌ಗಳನ್ನು ಸ್ಥಾಪನೆ ಮತ್ತು ಸ್ಟಾರ್ಟ್‌ ಅಪ್‌ಗಳ ಸಹಭಾಗಿತ್ವದೊಂದಿಗೆ ಡಿಜಿಟಲ್ ಪರಿಸರ ವ್ಯವಸ್ಥೆ ರೂಪಿಸಲು 'ಫಾರ್ಮ್ ಟು ರಿಟೇಲ್' ಯೋಜನೆ ಜಾರಿ.
  6. ಈ ಪ್ರದೇಶದ ತೆಂಗು ಆಧಾರಿತ ಕೈಗಾರಿಕೆಗಳನ್ನು ಪುನರುಜ್ಜಿವನ ಮತ್ತು ತೆಂಗು ಉತ್ಪನ್ನಗಳ ರಫ್ತು ಉತ್ತೇಜಿಸಲು 50 ಕೋಟಿ ಅನುದಾನ.

BJP Manifesto 2023: ಪ್ರಣಾಳಿಕೆಯಲ್ಲಿ ಬಿಜೆಪಿ ಯಾವ ಕ್ಷೇತ್ರಕ್ಕೆ ಎಷ್ಟು ಭರವಸೆ ನೀಡಿದೆ?

ಹಳೇ ಮೈಸೂರು ಪ್ರದೇಶದಲ್ಲಿ ಪ್ರವಾಸೋದ್ಯಮದ ಸುಧಾರಣೆಗಾಗಿ 100 ಕೋಟಿ ಮಂಜೂರು 

  • ಶ್ರವಣಬೆಳಗೊಳದಲ್ಲಿ ಆಧುನಿಕ ವಸತಿ ಸೌಕರ್ಯ ಸ್ಥಾಪನೆ ಮತ್ತು ಬಸ್ ಸಂಪರ್ಕ ಸುಧಾರಣೆ.
  • ಟಿ ನರಸೀಪುರ ಮತ್ತು ಕೆ.ಆರ್ ಪೇಟೆ ನಡೆಯುವ ತ್ರಿವೇಣಿ ಸಂಗಮ ಕುಂಭ ಮೇಳಕ್ಕೆ ಅಗತ್ಯ ವ್ಯವಸ್ಥೆ 
  • ಚಾಮರಾಜನಗರದಲ್ಲಿ ಏಮ್ಸ್ ಮಾದರಿಯ ಕಿಮ್ಸ್ ಸ್ಥಾಪನೆ