BJP Manifesto 2023: ಪ್ರಣಾಳಿಕೆಯಲ್ಲಿ ಬಿಜೆಪಿ ಯಾವ ಕ್ಷೇತ್ರಕ್ಕೆ ಎಷ್ಟು ಭರವಸೆ ನೀಡಿದೆ?

ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಬರೋಬ್ಬರಿ 16 ಪ್ರಮುಖ ಭರವಸೆಗಳನ್ನು ಇಟ್ಟುಕೊಂಡು ಬಿಜೆಪಿ ತನ್ನ ಭರಪೂರ ಯೋಜನೆಗಳನ್ನು ಘೋಷಿಸಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಭರವಸೆ ನೀಡಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

Karnataka BJP releases Election manifesto here is Here are top poll promises gow

ಬೆಂಗಳೂರು (ಮೇ.1): ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಬರೋಬ್ಬರಿ 16 ಪ್ರಮುಖ ಭರವಸೆಗಳನ್ನು ಇಟ್ಟುಕೊಂಡು ಬಿಜೆಪಿ ತನ್ನ ಭರಪೂರ ಯೋಜನೆಗಳನ್ನು ಘೋಷಿಸಿದೆ.  ಈ ಮೂಲಕ ಕಾಂಗ್ರೆಸ್‌ ‘ಗ್ಯಾರಂಟಿ’ಗಳಿಗೆ ಮತ್ತು ಜೆಡಿಎಸ್‌ ನ ಭರವಸೆಗೆ ಸೆಡ್ಡು ಹೊಡೆದಿದೆ.

ಅನ್ನ, ಅಭಯ, ಅಕ್ಷರ , ಆರೋಗ್ಯ, ಅಭಿವೃದ್ಧಿ ಮತ್ತು ಆದಾಯ ಈ 6 ವಿಷಯವನ್ನು ಮೂಲ ಮಂತ್ರವನ್ನಾಗಿಟ್ಟುಕೊಂಡು  ಬಿಜೆಪಿ ಈ ಬಾರಿ ಪ್ರಜಾ ಪ್ರಣಾಳಿಗೆ ಬಿಡುಗಡೆ ಮಾಡಿದೆ. ಇದರಲ್ಲಿ ಕೃಷಿ, ಎಲ್ಲವನ್ನೊಳಗೊಂಡ ಅಭಿವದ್ಧಿ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ , ಗ್ರಾಮಾಭಿವೃದ್ಧಿ , ಆರ್ಥಿಕತೆ, ಕೈಗಾರಿಕೆ ಮತ್ತು ಮೂಲಸೌಕರ್ಯ, ಉತ್ತಮ ಆಡಳಿತ, ಮಹಿಳೆಯರು ಮತ್ತು ಮಕ್ಕಳು, ಯುವಜನ ಮತ್ತು ಕ್ರೀಡೆ, ಸಂಸ್ಕೃತಿ ಮತ್ತು ಪರಂಪರೆ, ಬೆಂಗಳೂರು ಅಭಿವೃದ್ಧಿ, ಮಧ್ಯ ಕರ್ನಾಟಕ , ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ ಮತ್ತು ಹಳೆ ಮೈಸೂರು ಭಾಗಗಳಿಗೆ ವಿಶೇಷ ಭರವಸೆಯನ್ನು ಘೋಷಿಸಿದೆ.

ಕೃಷಿ ಭರವಸೆ:
200 ಮೀನು ಕೃಷಿ ಉತ್ಪಾದನಾ ಕೇಂದ್ರ ಮತ್ತು 1000 ಕೃಷಿ ಉತ್ಪಾದನಾ ಕೇಂದ್ರ ಸ್ಥಾಪನೆ
ಭಗೀರಥ ಯೋಜನೆಯಡಿ ಬಾಕಿ ಉಳಿದಿರುವ ಎಲ್ಲಾ ಪ್ರಮುಖ ನಿರಾವರಿ ಯೋಜನೆಗಳ ಪೂರ್ಣ
ಏತ ನೀರಾವರಿ ಯೋಜನೆ ಸಂಯೋಜನೆ, ಇಸ್ರೇಲ್ ಮಾದರಿಯ ಹನಿ ನಿರಾವರಿ ಯೋಜನೆ ಮೂಲಕ ಜಮೀನುಗಳಿಗೆ ನೀರು
30 ಸಾವಿರ ಕೋಟಿ ಮೊತ್ತದ ಕೆ ಅಗ್ರಿ ಫಂಡ್ ಮೂಲಕ ಹಲವು ಯೋಜನೆ, ಎಪಿಎಂಸಿಗಳ ಆಧುನೀಕರಣ, ಡಿಜಿಟಲೀಕರಣ
ಎಲ್ಲಾ ವಿಮಾನ ನಿಲ್ದಾಣ ಮತ್ತು ಬಂದರುಗಳ ಸಮೀಪ ಕೋಲ್ಡ್ ಸ್ಟೋರೇಜ್ ಸೌಲಭ್ಯ
ಹೈನುಗಾರಿಕೆಗೆ ಉತ್ತೇಜನ-ಪ್ರತೀ ಲೀಟರ್ ಹಾಲಿನ ದರ 5ರಿಂದ 7ಕ್ಕೆ ಹೆಚ್ಚಳ ಮತ್ತು ಪತ್ರೀ ತಾಲೂಕಿನಲ್ಲಿ ಪಶು ಆರೋಗ್ಯ ಕ್ಲಿನಿಕ್
ಸಿರಿಧಾನ್ಯ ಕೃಷಿಗೆ ಒತ್ತು- ಸಿರಿಧಾನ್ಯ ಬೆಳೆಯುವ ರೈತರಿಗೆ 15ಸಾವಿರ ಸಹಾಯಧನ, ಅತ್ಯಾಧುನಿಕ ಸಂಸ್ಕರಣಾ ಘಟಕ
ಕೃಷಿ ಉತ್ಪನ್ನ ಸಾಗಿಸುವವರಿಗೆ ಉಚಿತ ಬಸ್ ಟಿಕೆಟ್ ಸೌಲಭ್ಯ
ಮೀನುಗಾರರ ಹಿತಾಸಕ್ತಿಗೆ ಕಡಲ ಮಕ್ಕಳು ಮಿಷನ್ ಯೋಜನೆ- ಸಮಗ್ರ ಬೆಂಬಲ
ಕುಸಮಾ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಬಳಸುವ ರೈತರಿಗೆ 80% ಸಬ್ಸಿಡಿ
500 ಕೋಟಿ ಮೊತ್ತದ ಸಾಮಯವ ಕೃಷಿ ಮಿಷನ್ ಜೊತೆಗೆ ಮಳಿಗೆ ಸ್ಥಾಪನೆ
ಪ್ರತೀ ಜಿಲ್ಲೆಯಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ
ಮಾರುಕಟ್ಟೆ ಬೆಲೆ ಏರಿಳಿತದಿಂಧ ತೊಂದರೆಯಾಗದಂತೆ 1000 ಕೋಟಿ ವೆಚ್ಚದ ಬೆಲೆ ಸ್ಥಿರೀಕರಣ ನಿಧಿ

ಎಲ್ಲವನ್ನೊಳಗೊಂಡ ಅಭಿವದ್ಧಿ ಭರವಸೆ:
ಬಿಪಿಎಲ್ ಕುಟುಂಬಕ್ಕೆ ಯುಗಾದಿ, ದೀಪಾವಳಿ ಗಣೇಶ ಹಬ್ಬಕ್ಕೆ 3 ಫ್ರೀ ಸಿಲಿಂಡರ್
ರಾಜ್ಯದ ಪ್ರಮುಖ ನಗರಗಳಲ್ಲಿ ಬಹುಮಹಡಿ ಯೋಜನೆಯಡಿ 5 ಲಕ್ಷ ಮನೆ ನಿರ್ಮಿಸುವ ಗುರಿ
ಕೈಗೆಟಕುವ ದರದಲ್ಲಿ ಅಟಲ್  ಆಹಾರ ಕೇಂದ್ರ ಸ್ಥಾಪನೆಯ ಭರವಸೆ,
ಪೋಷಣೆ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀ. ನಂದಿನಿ ಹಾಲು, 5 ಕೆಜಿ ಸಿರಿಧಾನ್ಯ
ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ನಿವೇಶನ
10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ, 5 ಲಕ್ಷದ ವರೆಗೆ ಆರ್ಥಿಕ ನೆರವು
ಮಲ ಹೊರುವ ಪದ್ದತಿ ನಿರ್ಮೂಲನೆಗೆ ಸಿಂಗಾಪುರ ಮಾದರಿಯಲ್ಲಿ ಯಾಂತ್ರೀಕರಣ ಸ್ವಚ್ಚತೆ ತಮಕೂರು , ಹ-ಧಾ ಅನುಷ್ಠಾನ

ಆರೋಗ್ಯ ಭರವಸೆ:
ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ 10 ಲಕ್ಷ ಆರೋಗ್ಯ ವಿಮೆ, ಎಪಿಎಲ್  ಕುಟುಂಬಕ್ಕೆ 5ಲಕ್ಷ ಆರೋಗ್ಯ ವಿಮೆ
ಎಲ್ಲಾ ತಾಲೂಕುಗಳಲ್ಲಿ ಕೀಮೋಥೆರಫಿ, ಡಯಾಲಿಸಿಸ್ ಸೇವೆ
ಪ್ರತೀ ಜಿಲ್ಲೆಯಲ್ಲಿ ಒಂದು ನರ್ಸಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಭರವಸೆ
ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ 
ಅನಿಮೀಯಾ-ಮುಕ್ತ ಕರ್ನಾಟಕ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಬಿಣಿಯರಿಗೆ ಐರನ್ ಪೊಳಿಕ್ ಆಸಿಡ್ ಸಪ್ಲಿಮೆಂಟ್ 

ಶಿಕ್ಷಣ ಭರವಸೆ:
ಎನ್‌ಇಪಿ ಮಾರ್ಗಸೂಚಿ ಪ್ರಕಾರ ಗುಣಮಟ್ಟದ ಶಿಕ್ಷಣಕ್ಕೆ ಒತ್ತು
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಸರಳ ಗಣಿತ ಕಲಿಯಲು ಪ್ರಿ-ಕ್ಷಣ ಮಿಷನ್ ಪ್ರಾರಂಭ
ಅಂಗನವಾಡಿಗಳ ಮೇಲ್ದರ್ಜೆ, ಅಂಗನವಾಡಿ ಕಾರ್ಯಕರ್ತರನ್ನು ಶೈಕ್ಷಣಿಕ ಸಂಪನ್ಮೂಲ ವಕ್ತಿಗಳಾಗಿ ಪರಿಗಣನೆ
ಪ್ರತೀ ಜಿಲ್ಲೆಯಲ್ಲಿ ಐಐಟಿ ಮಾದರಿಯಲ್ಲಿ ಕರ್ನಾಟಕ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ
ವಿಶ್ವೇಶ್ವರಯ್ಯ ವಿದ್ಯಾಯೋಜನೆಯಡಿ ಸರ್ಕಾರಿ ಶಾಲೆಗಳ ಉನ್ನತೀಕರಣ

ಗ್ರಾಮೀಣಾಭಿವೃದ್ಧಿ ಭರವಸೆ:
ರಾಜ್ಯದ 17 ನದಿಗಳು ಮತ್ತು 500 ಕೆರೆಗಳ ಹೂಳು ತೆಗೆಯಲು 3000 ಕೋಟಿ ನಿಧಿ
ಮಿಷನ್ ಕನೆಕ್ಟ್ ಕರ್ನಾಟಕ ಯೋಜನೆಯಡಿ ಎಲ್ಲಾ ಗ್ರಾಮಗಳಲ್ಲಿ 5ಜಿ ನೆಟ್‌ವರ್ಕ್, ಹೈಸ್ಪೀಡ್ ಬ್ರಾಡ್ ಬ್ಯಾಂಡ್  ಸಂಪರ್ಕ್
1350 ಕೋಟಿ ವೆಚ್ಚದಲ್ಲಿ ಬೆಣ್ಣೆ ಹಳ್ಳನದಿ ಪ್ರವಾಹ ನಿಯಂತ್ರಣ ಸೇರಿ 1800 ಕೋಟಿ ವೆಚ್ಚದಲ್ಲಿ ರಾಜ್ಯ ಮಟ್ಟದ ಪ್ರವಾಹ ನಿಯಂತ್ರಣ ಯೋಜನೆ 

ಆರ್ಥಿಕತೆ , ಕೈಗಾರಿಕೆ ಮತ್ತು ಮೂಲ ಸೌಕರ್ಯ ಭರವಸೆ:
ಸ್ಟಾರ್ಟ್ ಅಪ್‌ಗಳಿಗೆ 5000 ಕೋಟಿ ಫಂಡ್ 
ಮೈಸೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಪುನೀತ್ ರಾಜ್ ಕುಮಾರ್ ಫಿಲ್ಮ್ ಸಿಟಿ ಸ್ಥಾಪನೆ
ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ
ಮಿಷನ್ ಕನೆಕ್ಟ್ ಕರ್ನಾಟಕ ಯೋಜನೆಯಡಿ ಹುಬ್ಬಳ್ಳಿ-ಧಾರಾವಾಢ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಯಲ್ಲಿ ಮೆಟ್ರೋ ಸೌಲಭ್ಯ  
ಪಳೆಯುಳಿಕೆ ಇಂಧನಕ್ಕಾಗಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಸ್ಥಾಪನೆ, 
ಇವಿ ಭರವಸೆಗಳು:
ಬೆಂಗಳೂರಿನ ಹೊರವಲಯದಲ್ಲಿ ಇವಿ ಸಿಟಿ ಅಭಿವೃದ್ಧಿ
ಫಾರ್ಮುಲಾ -ಇ ಸರ್ಕಕ್ಯೂಟ್ ಅಭಿವೃದ್ಧಿ
ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆ ವಿನಾಯಿತಿ
ಮೊದಲ 1000 ಸ್ಟಾರ್ಟ್ ಅಪ್‌ಗಳಿಗೆ  ಪ್ರೋತ್ಸಾಹ 
ರಾಜ್ಯದಾದ್ಯಂತ ಇವಿ ಚಾರ್ಜಿಂಗ್ ಸ್ಟೇಷನ್ 
ಬಿಎಂಟಿಸಿ ಬಸ್‌ಗಳು ಎಲೆಕ್ಟ್ರಿಕ್ ಆಗಿ ಪರಿವರ್ತನೆ 

ಮಹಿಳೆಯರು ಮತ್ತು ಮಕ್ಕಳು:
ಪ್ರತೀ ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್ 
ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಮೈಸೂರು, ಮಂಗಳೂರು, ತುಮಕೂರುಮ ಮತ್ತು ದಾವಣಗೆರೆಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸ್ಥಾಪನೆ 
ಗರ್ಭಿಣಿಯರಿಗೆ ಸುರಕ್ಷಾ ಜನನಿ ಭರವಸೆ ಕಿಟ್, ಆರ್ಥಿಕ ನೆರವು 
ವಿಧವೆಯರ ಮಾಸಿಕ ಪಿಂಚಣಿ 2000ಕ್ಕೆ ಹೆಚ್ಚಳ 
ಕಡ್ಡಾಯ ಶಿಶುವಿಹಾರ
ಎಸ್‌ಸಿ ಎಸ್‌ಟಿ ಮಹಿಳೆಯರಿಗೆ 5 ವರ್ಷಕ್ಕೆ 10 ಸಾವಿರ ಠೇವಣಿ

ಯುವಜನ ಮತ್ತು ಕ್ರೀಡೆ:
ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್ , ಸರಕಾರಿ ಉದ್ಯೋಗ ಅಭ್ಯರ್ಥಿಗಳ ಕೋಚಿಂಗ್ ಗೆ  ಆರ್ಥಿಕ ನೆರವು
ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವಸಹಾಯ ಸಂಘದ ಒರ್ವ ಸದಸ್ಯನಿಗೆ ಸ್ಟಾರ್ಟ್ ಅಪ್ ಆರಂಭಿಸಲು 10 ಲಕ್ಷ ಬಂಡವಾಳ ನಿಧಿ ಸೌಲಭ್ಯ
ಕ್ರೀಡಾಪಟುಗಳಿಗೆ ಆರ್ಥಿಕ ನೆರವು, ಕೊಡಗಿನಲ್ಲಿ ಹಾಕಿ ಕ್ರೀಡಾಂಗಣ
ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಬಡ್ಡಿ ತರಭೇತಿ ಕೇಂದ್ರ ಸ್ಥಾಪನೆ

Karnataka BJP Manifesto 2023: 16 ಭರವಸೆಗಳ ಬಿಜೆಪಿ ಪ್ರಣಾಳಿಕೆ ಬಿಡುಗಡೆ,

ಸಂಸ್ಕೃತಿ ಪರಂಪರೆ:
ವಿಸಿಟ್ ಕರ್ನಾಟಕ ಪ್ರವಾಸೋಧ್ಯಮ ಸಹಾಯವಾಣಿ
ಕರ್ನಾಟಕ ಪ್ರವಾಸೋಧ್ಯಮಕ್ಕೆ 1500 ಕೋಟಿ
ಯಾತ್ರಾ ಸ್ಥಳ ಪ್ರವಾಸಕ್ಕೆ ಕನ್ನಡದಲ್ಲಿ ಸಹಾಯವಾಣಿ ಮತ್ತು ಬಡ ಕುಟುಂಬದ ಯಾತ್ರೆಗೆ 25,000 ರೂ ಧನಸಹಾಯ
ದೇವಾಲಯ ಜೀರ್ಣೋಧ್ಥಾರಕ್ಕೆ1000 ಕೋಟಿ ಅನುದಾನ
ಟೂರಿಸ್ಟ್ ಗೈಡ್ ಮತ್ತು ಪರವಾನಿಗೆ 

Latest Videos
Follow Us:
Download App:
  • android
  • ios