ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ.  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರು (ಮೇ.1): ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಪ್ರಜಾ ಪ್ರಣಾಳಿಕೆ ಹೆಸರಿನಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿರುವ ಬಿಜೆಪಿಯು ಇದೀಗ ಮತದಾರರನ್ನು ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳ ಗಣ್ಯರ ಸಲಹೆ ಪಡೆದು ಈ ಪ್ರಣಾಳಿಕೆ ತಯಾರು ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್‌ ‘ಗ್ಯಾರಂಟಿ’ಗಳಿಗೆ ಸೆಡ್ಡು ಹೊಡೆದಿದೆ.

16 ಭರವಸೆಗಳ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಿಜೆಪಿಯ ಭರವಸೆಗಳು ಇಂತಿದೆ

  1. ಬಿಪಿಎಲ್ ಕುಟುಂಬಕ್ಕೆ ಯುಗಾದಿ, ದೀಪಾವಳಿ, ಗಣೇಶ ಹಬ್ಬಕ್ಕೆ 3 ಫ್ರೀ ಸಿಲಿಂಡರ್
  2. ಪೋಷಣಾ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀ. ನಂದಿನಿ ಹಾಲು
  3. ಪ್ರತೀ ಕುಟುಂಬಕ್ಕೆ ಪಡಿತರದಲ್ಲಿ 5 ಕೆಜಿ ಸಿರಿಧಾನ್ಯ
  4. ಎಸ್‌ಸಿ ಎಸ್‌ಟಿ ಮಹಿಳೆಯರಿಗೆ 5 ವರ್ಷಕ್ಕೆ 10 ಸಾವಿರ ಠೇವಣಿ
  5. ಪ್ರತೀ ಮಹಾನಗರ ಪಾಲಿಕೆ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರ
  6. ವಿಶ್ವೇಶ್ವರಯ್ಯ ವಿದ್ಯಾಯೋಜನೆಯಡಿ ಸರ್ಕಾರಿ ಶಾಲೆಗಳ ಉನ್ನತೀಕರಣ
  7. ಐಎಎಸ್‌ ಕೆಎಎಸ್‌ ಅಭ್ಯರ್ಥಿಗಳಿಗೆ ಆರ್ಥಿಕ ನೆರವು
  8. ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತನೆ
  9. ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ
  10. ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ಸೌಲಭ್ಯ
  11. ಸಮನ್ವಯ ಯೋಜನೆಯಡಿ ಸಣ್ಣ ಕೈಗಾರಿಗಳಲ್ಲಿ ಉದ್ಯೋಗಕ್ಕಾಗಿ ಒಡಂಬಡಿಕೆ
  12. ಮಿಷನ್ ಸ್ವಾಸ್ಠ್ಯ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ
  13. ಕರ್ನಾಟಕವನ್ನು ದೇಶದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವನ್ನಾಗಿ ರೂಪಿಸಲು 1,500 ಕೋಟಿ ವಿನಿಯೋಗ
  14. ಕರ್ನಾಟಕ ಅಪಾರ್ಟ್ಮೆಂಟ್ ಕಾಯಿದೆ ತಿದ್ದುಪಡಿ
  15. ಬೆಂಗಳೂರಿನ ಹೊರಗೆ ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಹಬ್
  16. ಮೂರು ಜಿಲ್ಲೆಗೆ ಮೆಟ್ರೋ ಸೌಲಭ್ಯ ವಿಸ್ತರಣೆ ಹುಬ್ಬಳ್ಳಿ-ಧಾರಾವಾಢ, ಬೆಳಗಾವಿ ಮತ್ತು ಮೈಸೂರು.

Karnataka Assembly Election 2023: ಗ್ಯಾರಂಟಿಯಲ್ಲ ನಾವು ಅಡ್ವಾನ್ಸನ್ನೇ ಕೊಟ್ಟಿದ್ದೇವೆ!

ಹೀಗೇ ಬರೋಬ್ಬರಿ 16 ಭರವಸೆಗಳ ಜತೆಗೆ ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ಜಿಲ್ಲೆಗಳಿಗೆ ವಿಶೇ‍ ಸೌಲಭ್ಯವನ್ನು ಘೋಷಿಲಾಗಿದೆ. ಜೊತೆಗೆ ಬಿಜೆಪಿ ಈವರೆಗೆ ಮಾಡಿರುವ ಸಾಧನೆಗಳ ಬಗ್ಗೆ ಕೂಡ ತನ್ನ ಪ್ರಣಾಳಿಯಲ್ಲಿ ಉಲ್ಲೇಖಿಸಿದೆ.

ಪ್ರಣಾಳಿಕೆ ಬಿಡುಗಡೆ ಗೂ ಮುನ್ನ ಮಾತನಾಡಿದ ಸಚಿವ ಡಾ. ಸುಧಾಕರ್ , 179 ಕ್ಷೇತ್ರದಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. 6 ಲಕ್ಷ ಸಲಹೆ ಬಂದಿದೆ. 17 ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಸಿದ್ಧತಾ ಸಭೆಯಲ್ಲಿ ಭಾಗಿಯಾಗಿದ್ದರು. 900 ಸಲಹೆಗಳು ತಜ್ಞರಿಂದ ಬಂದಿದೆ. ಬೇರೆಯವರ ರೀತಿ ನಾವು ಸುಳ್ಳು ಭರವಸೆ ನೀಡೋದಿಲ್ಲ. ನಮ್ಮ ಭರವಸೆ ಮೇಲೆ ಜನರಿಗೆ ನಂಬಿಕೆ ಇದೆ. ಕಾಂಗ್ರೆಸ್ 13 ರಾಜ್ಯಗಳಲ್ಲಿ ಇದೇ ರೀತಿ ಭರವಸೆ ನೀಡಿದ್ರು ಅವರ ಭರವಸೆ ಜನ ನಂಬೋದಿಲ್ಲ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕೆಲ ದಿನ ಮಹಾರಾಷ್ಟ್ರ ಇಲ್ಲಿ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಹೇಳಿದರು.

ಶ್ರಮಿಕ ಸ್ತ್ರೀಯರಿಗೆ ಬಂಪರ್‌: ಅಂಗನವಾಡಿ, ಆಶಾ, ಬಿಸಿಯೂಟ ವೇತನ ಏರಿಕೆ; ಪ್ರಿಯಾಂಕಾ ಗಾಂ

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಸಚಿವ ಡಾ. ಸುಧಾಕರ್ ಸೇರಿದಂತೆ ಪ್ರಮುಖ ನಾಯಕರು ಈ ವೇಳೆ ಉಪಸ್ಥಿತರಿದ್ದರು.