Asianet Suvarna News Asianet Suvarna News

ಮೈಸೂರು-ಚಾಮರಾಜನಗರದಲ್ಲಿ 9 ದಿನ ಸಿಎಂ ಪ್ರಚಾರ, 2 ಕ್ಷೇತ್ರ ಗೆಲ್ಲದಿದ್ದರೆ ಅಲುಗಾಡುತ್ತಾ ಸಿಎಂ ಕುರ್ಚಿ?

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕ್ಷೇತ್ರಗಳ ಪೈಕಿ ಮೈಸೂರು ಹಾಗೂ ಚಾಮರಾಜನಗರ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಈ ಎರಡು ಕ್ಷೇತ್ರ ಗೆಲ್ಲಲು ಪಣತೊಟ್ಟಿದ್ದಾರೆ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯಲು ಈ ಕ್ಷೇತ್ರದ ಗೆಲುವು ಅನಿವಾರ್ಯವೇ?
 

Karnataka Bjp holds PM Modi Roadshow vs CM siddaramaiah Mysuru Kodagu Chamarajanagar Constituencies ckm
Author
First Published Apr 12, 2024, 9:19 PM IST

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದೆ.. ರಾಜ್ಯದ 28 ಕ್ಷೇತ್ರಗಳಲ್ಲೂ ಪ್ರಚಾರ ಭರ್ಜರಿಯಾಗಿ ನಡೀತಿದ್ರೆ, ಸಿಎಂ ತವರು ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮತ್ತೊಂದು ಹಂತಕ್ಕೆ ತಲುಪಿದೆ. ಮೈಸೂರು-ಚಾಮರಾಜನಗರದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ 9 ದಿನ ಪ್ರಚಾರ ಮಾಡಿದ್ದಾರೆ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು.. ಈ ಎರಡು ಕ್ಷೇತ್ರಗಳ ಮೇಲೆ ಸಿಎಂಗ್ಯಾಕೆ ಇಷ್ಟೊಂದು ಪ್ರೀತಿ ಅಂತಾ ನೋಡೋದಾದ್ರೆ.. ಸಿಎಂ ಕುರ್ಚಿ ಭವಿಷ್ಯ ಈ ಎರಡು ಕ್ಷೇತ್ರಗಳ ಮೇಲೆ ನಿಂತಿದೆ ಎನ್ನಲಾಗ್ತಿದೆ. 

ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಆದ್ರು, ಮುಖ್ಯಮಂತ್ರಿಗಳು ಪ್ರತಿನಿಧಿಸುವ ವರುಣಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ಹೀಗಾಗಿ ಎರಡು ಕ್ಷೇತ್ರಗಳ ಜವಾಬ್ದಾರಿ ಸ್ವತಃ ಸಿಎಂ ಸಿದ್ದರಾಮಯ್ಯ ಹೆಗಲಿಗೆ ಬಿದ್ದಿದೆ. ಹೀಗಾಗಿ ಸಿದ್ದರಾಮಯ್ಯ ಈ ಎರಡು ಕ್ಷೇತ್ರಗಳ ಉಸ್ತುವಾರಿ ಹೊತ್ತು ಸುಮ್ಮನೆ ಕೂತಿಲ್ಲ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರಕ್ಕೆ ಇಳಿದಿದ್ದು. ಕಳೆದ 20 ದಿನಗಳಲ್ಲಿ ಸಿಎಂ 9 ದಿನಗಳ ಕಾಲ ಈ ಎರಡು ಕ್ಷೇತ್ರದಲ್ಲೇ ಪ್ರಚಾರ ಮಾಡಿದ್ದಾರೆ ಅಂದ್ರೆ ಅರ್ಥ ಮಾಡಿಕೊಳ್ಳಿ ಸಿಎಂ ಮೇಲಿನ ಒತ್ತಡ ಎಷ್ಟಿದೆ ಎಂದು. ಒಂದು ವೇಳೆ ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಗೆಲ್ಲದೇ ಹೋದ್ರೆ ಸಿಎಂ ಕುರ್ಚಿಗೆ ಸಂಕಷ್ಟ ಫಿಕ್ಸ್ ಎಂದೇ ಹೇಳಲಾಗ್ತಿದೆ. ಹೀಗಾಗಿ ಸಿದ್ದರಾಮಯ್ಯ ಸಮಯ ಸಿಕ್ಕಷ್ಟು ಈ ಎರಡು ಕ್ಷೇತ್ರದಲ್ಲೇ ಪ್ರಚಾರಕ್ಕೆ ಇಳಿದಿದ್ದಾರೆ. 

Siddaramaiah: ಎಮೋಷನ್ ಅಸ್ತ್ರ..ವೈರಿಗಳಿಗೆ ಸ್ನೇಹದ ಸೂತ್ರ.. ಭಯದಲ್ಲಿ ಮಠ-ಮಂದಿರಕ್ಕೆ ಭೇಟಿ ನೀಡುತ್ತಿದ್ದಾರಾ ಸಿದ್ದು..?

20 ದಿನದಲ್ಲಿ 2 ಕ್ಷೇತ್ರದಲ್ಲಿ 9 ದಿನ ಪ್ರಚಾರ
ಈ ಬಾರಿ ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆ ಪ್ರಚಾರ ಶುರು ಮಾಡಿದ್ದೇ ತವರು ಜಿಲ್ಲೆಯಿಂದ ಮಾರ್ಚ್ 24 ರಿಂದ 4 ದಿನಗಳ ಕಾಲ ಎರಡು ಕ್ಷೇತ್ರದಲ್ಲಿ ಸಿಎಂ ಪ್ರಚಾರ ಮಾಡಿದ್ರೆ, ಏಪ್ರಿಲ್ 01ರಿಂದ    ಮತ್ತೆ 3 ದಿನಗಳ ಕಾಲ ಸಿದ್ದರಾಮಯ್ಯ ತಮ್ಮ ಸಮಯವನ್ನ ಎರಡು ದಿನಗಳ ಮೈಸೂರು ಹಾಗೂ ಚಾಮರಾಜನಗರಕ್ಕೆ ಮೀಸಲಿಟ್ಟಿದ್ರು. ಇದೀಗ ಶುಕ್ರವಾರದಿಂದ ಮತ್ತೆ ಎರಡು ದಿನಗಳ ಪ್ರಚಾರ ಶುರು ಮಾಡಿದ್ದು, ಮೈಸೂರು-ಚಾಮರಾಜನಗರಕ್ಕೆ ಸಿಎಂ ಒಟ್ಟು 9 ದಿನ ಪ್ರಚಾರ ಮಾಡಿದಂತಾಗಲಿದೆ.

ಎಚ್ಚೆತ್ತ ರಾಜ್ಯ ಬಿಜೆಪಿ - ಮೋದಿ ಸಮಾವೇಶ ಆಯೋಜನೆ
ಸಿಎಂ ಸಿದ್ದರಾಮಯ್ಯ ರಣತಂತ್ರ ಗೊತ್ತಾಗುತ್ತಿದ್ದಂತೆ ಸುಮ್ಮನೆ ಕೂರದ ರಾಜ್ಯ ಬಿಜೆಪಿ ಮೋದಿ ಸಮಾವೇಶವನ್ನ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಸಿದ್ಧಪಡಿಸಿದ ವೇಳಾಪಟ್ಟಿ ಪ್ರಕಾರ ಪ್ರಧಾನಿ ಮೋದಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರೋಡ್ ಶೋ ಮಾಡಬೇಕಿತ್ತು.. ಆದ್ರೆ ಇದಕ್ಕಿದ್ದಂತೆ ರಾಜ್ಯ ಬಿಜೆಪಿ ಬೆಂಗಳೂರು ರೋಡ್ ಷೋ ಬದಲು ಮೈಸೂರಿನಲ್ಲಿ ಸಮಾವೇಶ ಆಯೋಜನೆ ಮಾಡಿದೆ. ಈ ಮೂಲಕ ಮೈಸೂರು, ಚಾಮರಾಜನಗರ, ಮಂಡ್ಯ ಗುರಿಯಾಗಿಸಿ ಪ್ರಚಾರ ಮಾಡಲಿದ್ದಾರೆ. 

BK Hariprasad: ಏನೇ ಭಿನ್ನಾಭಿಪ್ರಾಯ ಇದ್ರೂ ಪೆನ್‌ಡ್ರೈವ್‌ನಲ್ಲಿಟ್ಟು ಚುನಾವಣೆ ಬಳಿಕ ಹೇಳ್ತೀನಿ: ಬಿ.ಕೆ. ಹರಿಪ್ರಸಾದ್

ಕಳೆದ ಬಾರಿ ಮೈಸೂರು ಹಾಗೂ ಚಾಮರಾಜನಗರ ಎರಡು ಕ್ಷೇತ್ರವನ್ನ ಬಿಜೆಪಿ ಗೆದ್ದುಕೊಂಡಿದೆ. ಮೈಸೂರಿನಲ್ಲಿ 2019ರಲ್ಲಿ ಬಿಜೆಪಿ 1 ಲಕ್ಷ 30 ಸಾವಿರ ಅಂತರದಿಂದ ಗೆಲುವು ಸಾಧಿಸಿದ್ರೆ. ಚಾಮರಾಜನಗರವನ್ನ ಬಿಜೆಪಿ ಕೇವಲ 1 ಸಾವಿರದ 800 ಮತಗಳಿಂದ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ಮೈಸೂರಿನಲ್ಲಿ ಎರಡು ಪಕ್ಷಗಳ ಜಾತಿ ಸಮೀಕರಣ ಬದಲಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಕಣಕ್ಕಿಳಿದು ಜಯ ಸಾಧಿಸಿದ್ರು. ಆದ್ರೆ ಈ ಬಾರಿ ಬಿಜೆಪಿ ಹಿಂದುಳಿದ ವರ್ಗಕ್ಕೆ ಬರುವ ಯಾದವ ಸಮುದಾಯದ ಯದುವೀರ್ ಒಡೆಯರ್ಗೆ ಟಿಕೆಟ್ ನೀಡಿದೆ. ಇನ್ನೂ ಮೈಸೂರಿನಲ್ಲಿ ಪ್ರತಿಬಾರಿ ಕುರುಬರಿಗೆ ಟಿಕೆಟ್ ನೀಡುತ್ತಿದ್ದ ಕಾಂಗ್ರೆಸ್, ಈ ಬಾರಿ ಒಕ್ಕಲಿಗ ಸಮುದಾಯದ ಎಂ ಲಕ್ಷ್ಮಣ್ರನ್ನ ಕಣಕ್ಕೆ ಇಳಿಸಿದೆ.

ಶಿವರಾಜ್, ಬುಲೆಟಿನ್ ಪ್ರೊಡ್ಯೂಸರ್

Follow Us:
Download App:
  • android
  • ios