ಟಿಕೆಟ್ ಆಕಾಂಕ್ಷಿಗಳಿಂದ ಕ್ರೀಡಾ ರಾಜಕೀಯ, ಯುವಜನತೆಯನ್ನು ಸೆಳೆಯಲು ಕ್ರೀಡೆಯಲ್ಲಿ ಗೆದ್ದವರಿಗೆ 1 ಲಕ್ಷ ನಗದು!

 ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಎಲ್ಲಾ ಪಕ್ಷದ ಆಕಾಂಕ್ಷಿಗಳು ಈಗ ಕ್ಷೇತ್ರದಲ್ಲಿ ಯುವ ಜನಾಂಗದ ಮನಸೆಳೆಯಲು ಕ್ರೀಡೆಗಳ ಮೊರೆ ಹೋಗಿದ್ದಾರೆ.  ಕ್ರೀಡೆಯಲ್ಲಿ ವಿಜೇತರಿಗೆ ಟ್ರೋಫಿ ಜೊತೆಗೆ ಪ್ರಥಮ ಬಹುಮಾನ 1 ಲಕ್ಷ ನಗದು ಕ್ಯಾಶ್  ನೀಡಲಾಗುತ್ತಿದೆ.

Karnataka assembly election ticket aspirants conduct sports politics in Raichuru gow

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಮಾ.5): ರಾಜ್ಯದಲ್ಲಿ ಇನ್ನೇನು 1-2 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಎಲ್ಲಾ ಪಕ್ಷದ ಆಕಾಂಕ್ಷಿಗಳು ಈಗ ಕ್ಷೇತ್ರದಲ್ಲಿ ಯುವ ಜನಾಂಗದ ಮನಸೆಳೆಯಲು ಕ್ರೀಡೆಗಳ ಮೊರೆ ಹೋಗಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದ ಯುವಕರನ್ನೇ ಟಾರ್ಗೆಟ್ ಮಾಡಿದ ರಾಜಕಾರಣಿಗಳು ಕ್ರೀಡಾಕೂಟಗಳನ್ನ ಆಯೋಜನೆಗೆ ಮುಂದಾಗಿದ್ದಾರೆ. ಇದರಿಂದಾಗಿ ಈಗ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಗಳ ಸುಗ್ಗಿ ಶುರುವಾಗಿದೆ. ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಕೆಲ ಆಕಾಂಕ್ಷಿಗಳ ಮುಖವೇ ಕ್ಷೇತ್ರದಲ್ಲಿ ಪರಿಚಯ ಇರುವುದಿಲ್ಲ. ಹೀಗಾಗಿ ಜನರಿಗೆ ಪರಿಚಯವಾಗಬೇಕು. ಮತದಾರರ ಮನಸೆಳೆಯಬೇಕು ಮತ್ತು ಯುವಕರು ನಮ್ಮ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಮಾಡಬೇಕು ಎಂಬ ಉದ್ದೇಶದಿಂದ ರಾಜಕಾರಣಿಗಳು  ಟೂರ್ನಮೆಂಟ್ ಹೆಸರಿನಲ್ಲಿ ಮತದಾರರ ಮನ ಗೆಲ್ಲಲು ಮುಂದಾಗಿದ್ದು, ಮುಖ್ಯವಾಗಿ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಗಳನ್ನು ಹೆಚ್ಚಾಗಿ ಆಯೋಜನೆ ಮಾಡಲಾಗುತ್ತಿದೆ. 

ಅಭಿಮಾನಿ ಬಳಗದ ಹೆಸರಿನಲ್ಲಿ ಕ್ರೀಡೆಗಳ ಆಯೋಜನೆ:
ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತೆ. ಹೀಗಾಗಿ ಕ್ರಿಕೆಟ್  ಟೂರ್ನಮೆಂಟ್ ಗಳನ್ನು ಆಯೋಜನೆ ‌ಮಾಡಿ ಅಕ್ಕ- ಪಕ್ಕದ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಜನರನ್ನು ಸೇರಿಸುತ್ತಾರೆ. ಆ ಕಾರ್ಯಕ್ರಮಕ್ಕೆ ಟಿಕೆಟ್ ಆಕಾಂಕ್ಷಿಗಳನ್ನ ‌ಕರೆಸಿ ಉದ್ಘಾಟನೆ ‌ಮಾಡಿಸುವುದರ ಮುಖಾಂತರ ರಾಜಕೀಯ ಭಾಷಣ ಮಾಡುವುದು ಕಾಣಬಹುದಾಗಿದೆ. ಅಭಿಮಾನಿಗಳ ಬಳಗದ ಹೆಸರಿನಲ್ಲಿ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಕ್ರೀಡಾ ರಾಜಕೀಯ ಶುರು ಮಾಡಿದ್ದಾರೆ. 

ವಿಜೇತರಿಗೆ ಟ್ರೋಫಿ ಜೊತೆಗೆ ಭರ್ಜರಿ ಕ್ಯಾಶ್ ಬಹುಮಾನ:
ಶಾಸಕರು ಮತ್ತು ಮಾಜಿ ಶಾಸಕರು ಹಾಗೂ ಜನನಾಯಕರು ಹೀಗೆ ನಾನಾ ನಾಯಕರ ಹೆಸರಿನ ಅಭಿಮಾನಿಗಳ ಬಳಗದಿಂದ ಕ್ರೀಡೆಗಳು ಆಯೋಜನೆ ಮಾಡಲಾಗುತ್ತಿದೆ. ಕ್ರೀಡಾಕೂಟದ ವೇಳೆಯಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ ಮತ್ತು ಸಂಜೆ ಊಟದ ವ್ಯವಸ್ಥೆಯ ಜೊತೆಗೆ ಕ್ರೀಡೆಯಲ್ಲಿ ವಿಜೇತರಿಗೆ ಟ್ರೋಫಿ ಜೊತೆಗೆ ಪ್ರಥಮ ಬಹುಮಾನ 1 ಲಕ್ಷ ನಗದು ಕ್ಯಾಶ್ ಮತ್ತು ದ್ವೀತಿಯ ಬಹುಮಾನ 50 ಸಾವಿರ , ತೃತೀಯ ಬಹುಮಾನ 25 ಸಾವಿರ ಹೀಗೆ ನೀಡಲಾಗುತ್ತೆ. ಅಷ್ಟೇ ಅಲ್ಲದೇ ಕ್ರಿಕೆಟ್ ನಲ್ಲಿ ಬೆಸ್ಟ್ ಆಟಗಾರ, ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬಾಲರ್, ಆಲ್ ರೌಂಡರ್ ಹೀಗೆ ಹತ್ತಾರು ರೀತಿಯ ಬಹುಮಾನ ನೀಡಿ ಯುವ ಸಮುದಾಯವನ್ನ ಸೆಳೆಯಲು ರಾಜಕಾರಣಿಗಳು ಮುಂದಾಗಿದ್ದಾರೆ.

ಪ್ರತಾಪ ಸಿಂಹ ಎಸಿಬಿ ಬಗ್ಗೆ ಸರಿಯಾಗಿ ಅಭ್ಯಾಸ ಮಾಡಲಿ: ಎಂ.ಬಿ.ಪಾಟೀಲ

ಊರಿಗೆ ಒಂದು ಟ್ರೋಫಿ ಜೊತೆಗೆ ಫ್ರೀ ಟಿ ಶರ್ಟ್ :
ಚುನಾವಣೆಗಳು ಹತ್ತಿರ ಬರುತ್ತಿವೆ. ರಾಜಕಾರಣಿಗಳು ಮತದಾರರ ಮನಸೆಳೆಯಲು ನಾನಾ ಕಸರತ್ತು ನಡೆಸಿದ್ದಾರೆ. ‌ಅದರಲ್ಲೂ ಕ್ರೀಡಾ ರಾಜಕೀಯಕ್ಕೆ ಮುಂದಾಗಿರುವ   ನಾಯಕರು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರಿಕೆಟ್ ಮತ್ತು ಕಬಡ್ಡಿ ಟೂರ್ನಮೆಂಟ್ ಗಳನ್ನು ಆಯೋಜನೆ ಮಾಡಿ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟ್ಟುಗಳಿಗೆ ತಮ್ಮ ಭಾವಚಿತ್ರ ಇರುವ ಟಿ ಶರ್ಟ್ ಗಳನ್ನು ಉಚಿತವಾಗಿ ವಿತರಣೆ ಮಾಡುತ್ತಾರೆ. ಕ್ರೀಡೆಯಲ್ಲಿ ಸೋತರೂ ಸಹ ಕ್ರೀಡಾಪಟುಗಳಿಗೆ ಸನ್ಮಾನಿಸಿ ಅವರಿಗೆ ನೆನಪಿನ ಕಾಣಿಕೆಯಾಗಿ ಟ್ರೋಫಿ ನೀಡಿ ಗೌರವಿಸುವುದು ಕಂಡು ಬರುತ್ತಿದೆ.

SUVARNA SPECIAL: ಕೇಸರಿ ಪಕ್ಷದ ಕಡೆ ಮಂಡ್ಯ ಗೌಡ್ತಿಯ ನಿಗೂಢ ಹೆಜ್ಜೆ..!?

ಹೀಗಾಗಿ ಯುವಕರು ನಾ ಮುಂದು ತಾ ಮುಂದು ಅಂತ ಕ್ರೀಡೆಯಲ್ಲಿ ಭಾಗವಹಿಸಲು ಶುರು ಮಾಡಿದ್ದಾರೆ. ಇದರಿಂದಾಗಿ ಇಡೀ ಜಿಲ್ಲೆಯ ವಿವಿಧೆಡೆ ಕ್ರೀಡೆಯ ಕಲರವ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಭರ್ಜರಿಯಾಗಿ ಕ್ರೀಡಾ ರಾಯಕೀಯ ನಡೆಯುತ್ತಿದೆ. ಇದು ಟಿಕೆಟ್ ಆಕಾಂಕ್ಷಿಗಳಿಗೆ ಯಾವ ರೀತಿಯಲ್ಲಿ ವಕೌಟ್ ಆಗುತ್ತೆ ಎಂಬುವುದು ಕಾದು ನೋಡಬೇಕಾಗಿದೆ.

Latest Videos
Follow Us:
Download App:
  • android
  • ios