ದೇಶದ್ರೋಹಿಗಳ ವಿರು​ದ್ಧ ಕಠಿಣ ಕ್ರಮ ಕೈಗೊ​ಳ್ಳಿ: ಈಶ್ವರಪ್ಪ ಆಗ್ರಹ

ರಾಜ್ಯದಲ್ಲಿ ಚುನಾವಣಾ ಫಲಿತಾಂಶದ ಬಳಿಕ ರಾಷ್ಟ್ರದ್ರೋಹದ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸರ್ಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆಗ್ರಹಪಡಿಸಿದರು.

Karnataka assembly election Take strict action against traitors: Eshwarappa Agraha at shivamogga rav

ಶಿವಮೊಗ್ಗ (ಮೇ.15) : ರಾಜ್ಯದಲ್ಲಿ ಚುನಾವಣಾ ಫಲಿತಾಂಶದ ಬಳಿಕ ರಾಷ್ಟ್ರದ್ರೋಹದ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸರ್ಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆಗ್ರಹಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆಗಳು ಮೊಳಗಿವೆ. ಸ್ವತಃ ಪೊಲೀಸರೇ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ಇತರೆ ಕಡೆಗಳಲ್ಲಿಯೂ ಇದೇ ರೀತಿ ಗಲಾಟೆ ಮತ್ತಿತತರ ಘಟನೆ ನಡೆದಿದೆ. ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಪಡಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಸೋಲುಂಡ 20 ಹಾಲಿ ಶಾಸಕರು; ಬಿಜೆಪಿಯದ್ದೇ ಸಿಂಹಪಾಲು!...

ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯ:

ಚುನಾವಣಾ ಫಲಿತಾಂಶ (Karnataka election results)ಕುರಿತು ಜನರ ತೀರ್ಮಾನ ಸ್ವಾಗತಿಸುತ್ತೇವೆ. ಕಾವಲು ನಾಯಿಯ ರೀತಿಯ ಜವಾಬ್ದಾರಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ. ಮುಂದೆ ಲೋಕಸಭಾ ಚುನಾವಣೆ ಬರುತ್ತದೆ. ನರೇಂದ್ರ ಮೋದಿ(Narendra Modi) ಪ್ರಧಾನಿ ಆಗುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸೋತಿರಬಹುದು. ಆದರೆ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ ಬಾರಿ ಶೇ.36ರಷ್ಟುಮತ ಬಂದಿತ್ತು. ಈ ಬಾರಿ ಶೇ.36.04ರಷ್ಟುಮತ ಬಂದಿವೆ. ಸರ್ಕಾರದ ಅಭಿವೃದ್ಧಿ ಕಾರ್ಯ ಮೆಚ್ಚಿ ಜನರು ಪಕ್ಷ ಬೆಂಬಲಿಸಿದ್ದಾರೆ ಎಂದರು.

ಬಿಜೆಪಿ ಸೋಲಿಗೆ ಹಲವು ಕಾರಣಗಳಿವೆ. ರಾಜ್ಯದಲ್ಲಿ ಒಟ್ಟು ಸ್ಥಾನ ಗಳಿಕೆಯಲ್ಲಿ ನಾವು ಹಿಂದಿರಬಹುದು. ಆದರೆ, ಒಟ್ಟಾರೆ ಮತಗಳಿಕೆಯಲ್ಲಿ ಕಳೆದ ಬಾರಿಗಿಂತ ಸ್ವಲ್ಪ ಮುಂದಿದ್ದೇವೆ. ಇದು ನಮಗೆ ಸಮಾಧಾನದ ಸಂಗತಿ. ಹಾಗೆಂದು ನಮ್ಮ ಸೋಲನ್ನು ನಿರಾಕರಿಸುವುದಿಲ್ಲ. ಎಲ್ಲೆಲ್ಲಿ ತಪ್ಪಾಗಿದೆ ಎಂದು ಒಟ್ಟಾಗಿ​ ಕೂತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಸೋಲಿಗೆ ಯಾರೋ ಒಬ್ಬರು ಕಾರಣರಲ್ಲ. ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಾವು ಜವಾಬ್ದಾರಿ ಹೊರುವುದಾಗಿ ಹೇಳಿರುವುದು ಅವರ ದೊಡ್ಡತನ. ಹಾಗೆಂದು ಇದನ್ನು ಅವರ ಹೆಗಲಿಗೆ ಹಾಕಲು ನಾವು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ನಡ್ಡಾ ಎಲ್ಲರೂ ಬಂದು ಪ್ರಚಾರ ನಡೆಸಿದರು. ನಮ್ಮ ಕರೆಯ ಮೇರೆಗೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಎಲ್ಲ ಬಾರಿಯೂ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ. ಹಾಗೆಯೇ ಈ ಬಾರಿ ನಾವು ಹಿಂದೆ ಬಿದ್ದಿದ್ದೇವೆ. ಮುಂದೆ ಮತ್ತೆ ಎಲ್ಲವೂ ಸರಿಯಾಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ, ರಾಜ್ಯದ 46 ಸಾವಿರ ಬೂತ್‌ಗಳ ಪೈಕಿ 36 ಸಾವಿರ ಬೂತ್‌ಗಳಲ್ಲಿ ಪಕ್ಷ ಸಂಘಟನೆ ಮಾಡಿದೆ. ಉಳಿದ ಕಡೆಗಳಲ್ಲಿ ಇನ್ನೂ ಆಗಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿಯೂ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಾವ ಜಾತ್ಯತೀತತೆ?

ಸಿದ್ದರಾಮಯ್ಯ ಮತ್ತು ಡಿಕೆಶಿ(Siddaramaiah DK Shivakumar) ತಾವು ಜಾತ್ಯತೀತವಾದಿಗಳು ಎಂದು ಬಹಳವಾಗಿಯೇ ಬಿಂಬಿಸಿಕೊಂಡೆವು. ಆದರೆ ಈಗ ಸಿದ್ದರಾಮಯ್ಯ ಪರವಾಗಿ ಕುರುಬರು ಮತ್ತು ಡಿಕೆಶಿ ಪರವಾಗಿ ಒಕ್ಕಲಿಗರು ಲಾಬಿ ಆರಂಭಿಸಿದ್ದಾರೆ. ಇದಕ್ಕೆ ಈ ನಾಯಕರೇ ಕುಮ್ಮಕ್ಕು ನೀಡುತ್ತಿದ್ದು, ಇವರ ಜಾತ್ಯತೀತೆಯ ಕೂಗು ಎಲ್ಲಿ ಹೋಯಿತು ಎಂದು ವ್ಯಂಗ್ಯವಾಡಿದರು. ಬಿಜೆಪಿ ಎಂದರೆ ಕೋಮುವಾದಿ ಎಂದೆಲ್ಲ ಅಪಪ್ರಚಾರ ಮಾಡುತ್ತಿದ್ದವರು ಈಗ ಏನೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಭೋಜೇ​ಗೌಡ ನಡೆ ಬಹಿರಂಗ ವ್ಯಭಿಚಾರ:

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಅವರನ್ನು ಸೋಲಿಸಲು ಜೆಡಿಎಸ್‌ ನಾಯಕ ಭೋಜೇಗೌಡ ಬಹಿರಂಗವಾಗಿ ತಮ್ಮ ಪಕ್ಷದ ಅಭ್ಯರ್ಥಿ ಬದಲು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಪ್ರಚಾರ ಮಾಡಿದರು. ವಾಟ್ಸಪ್‌ನಲ್ಲಿ ಈ ವೀಡಿಯೋ ನೋಡಿ ನಾನು ಸ್ವತಃ ಭೋಜೇಗೌಡರಿಗೆ ಕರೆ ಮಾಡಿ ಏನ್ರಿ ಇದು ಎಂದು ಪ್ರಶ್ನಿಸಿದೆ? ಅದಕ್ಕೆ ಏನೇನೋ ಸಮಾಜಾಯಿಸಿ ನೀಡಿದರು. ಇದು ಬಹಿರಂಗ ವ್ಯಭಿಚಾರ ಎಂದು ಬಣ್ಣಿಸಿದರು. ನಾನು ಉದ್ದೇಶಪೂರ್ವಕವಾಗಿಯೇ ಈ ಶಬ್ದವನ್ನು ಬಳಸಿದ್ದೇನೆ. ಈ ರೀತಿಯಲ್ಲಿ ಬಹಿರಂಗ ವ್ಯಭಿಚಾರ ನಡೆಸಿದ ಜೆಡಿಎಸ್‌ ಮುಖಂಡ ಭೋಜೇಗೌಡರ ವಿರುದ್ಧ ಆ ಪಕ್ಷ ಯಾವ ಕೈಗೊಳ್ಳುತ್ತದೆ ಎಂದು ಪ್ರಶ್ನಿಸಿದರು.

ಶಿವಮೊಗ್ಗ: ಬಿಜೆಪಿಗೆ ಮತ ಹಾಕಿದ್ದಕ್ಕೆ ಆಟೋಚಾಲಕನಿಗೆ ಹಲ್ಲೆ, ಆಟೋ ಜಖಂ

ಸುದ್ದಿಗೋಷ್ಟಿಯಲ್ಲಿ ಶ್ರೀನಾಥ ನಗರಗದ್ದೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್‌, ಎಸ್‌.ದತ್ತಾತ್ರಿ, ಮಾಧ್ಯಮ ಸಂಚಾಲಕ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್‌, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಲಕ್ಷ್ಮೇ ಶಂಕರ್‌ ನಾಯ್‌್ಕ, ಎನ್‌.ಜೆ. ರಾಜಶೇಖರ್‌ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios