Asianet Suvarna News Asianet Suvarna News

ಕಲ್ಯಾಣ ಕರ್ನಾಟಕದಲ್ಲಿ ಸೋಲುಂಡ 20 ಹಾಲಿ ಶಾಸಕರು; ಬಿಜೆಪಿಯದ್ದೇ ಸಿಂಹಪಾಲು!

ಕಲ್ಯಾಣ ಕರ್ನಾಟಕದಲ್ಲಿ ಸೋಲುಂಡ 20 ಹಾಲಿ ಶಾಸಕರು ಹೀಗೆ ಸೋಲಿನ ರುಚಿ ಉಂಡವರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಘಟಾನುಘಟಿಗಳದ್ದೇ ಸಿಂಹಪಾಲು ಪುನರಾಯ್ಕೆ, ಹ್ಯಾಟ್ರಿಕ್‌ ಗೆಲುವು ಬಯಸಿದ್ದ ಬಿಜೆಪಿ- 12, ಕಾಂಗ್ರೆಸ್‌- 5, ಜೆಡಿಎಸ್‌-3 ಶಾಸಕರಿಗೆ ಸೋಲು!

Karnataka election results 20 sitting MLAs who lost in Kalyana Karnataka assembly election rav
Author
First Published May 15, 2023, 9:19 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.15) : ಕಲ್ಯಾಣ ಕರ್ನಾಟಕ ಭಾಗದ ಸಪ್ತ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ 41 ವಿಧಾನಸಭಾ ಕ್ಷೇತ್ರಗಳ ಪೈಕಿ, ಪುನರಾಯ್ಕೆ, ಹ್ಯಾಟ್ರಿಕ್‌ ಗೆಲುವು ಬಯಸಿ 38 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದ್ದ ಹಾಲಿ ಶಾಸಕರು ಸೋಲಿನ ರುಚಿ ಉಂಡಿದ್ದಾರೆ.

ಕಲಬುರಗಿ, ಬೀದರ್‌, ರಾಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ಕಲ್ಯಾಣ ನಾಡ(Kalyana karnataka assembly election 2023)ಲ್ಲಿನ ಹಾಲಿ ಶಾಸಕರು ಈ ಪರಿ ಭಾರಿದæೂಡ್ಡ ಸಂಖ್ಯೆಯಲ್ಲಿ ಸೋಲುಂಡು ತೆರೆಮರೆಗೆ ಸರಿದಿರೋದು ಇದೇ ಮೊದಲು ಎನ್ನಲಾಗುತ್ತಿದೆ.

Karnataka election results 2023 : ಕಾಂಗ್ರೆಸ್ ವಶವಾಯ್ತು ಕಲ್ಯಾಣ ಕರ್ನಾಟಕ!

ಸೋತ ಹಾಲಿ ಶಾಸಕರಲ್ಲಿ ಬಿಜೆಪಿಯವರದ್ದೇ ಸಿಂಹಪಾಲು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಂತರದ ಸ್ಥಾನದಲ್ಲಿದ್ದಾರೆ. ಪುನರಾಯ್ಕೆ, ಹ್ಯಾಟ್ರಿಕ್‌ ಗೆಲುವು ಬಯಸಿ ಅಖಾಡದಲ್ಲಿದ್ದ 38 ಹಾಲಿ ಶಾಸಕರ ಪೈಕಿ ಬಿಜೆಪಿಯ 12, ಕಾಂಗ್ರೆಸ್‌ನ 5 ಹಾಗೂ ಜೆಡಿಎಸ್‌ನ 3 ಶಾಸಕರಿಗೆ ಹೀನಾಯ ಸೋಲಾಗಿದೆ.

ಅದರಲ್ಲೂ ಕಲಬುರಗಿ ದಕ್ಷಿಣದಿಂದ ಕಣದಲ್ಲಿದ್ದು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಯ ದತ್ತಾತ್ರೇಯ ಪಾಟೀಲ್‌ ರೇವೂರ್‌ ತಮ್ಮ ಎದುರಾಳಿ ಕಾಂಗ್ರೆಸ್‌ನ ಅಲ್ಲಂಪ್ರಭು ಪಾಟೀಲರ ಮುಂದೆ 21 ಸಾವಿರ ಮತಗಳ ಬಾರಿ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ದತ್ತಾತ್ರೇಯ ರೇವೂರ್‌ ’ಕೆ’ೖ ತಪ್ಪಿದ ಹ್ಯಾಟ್ರಿಕ್‌ ಗೆಲುವು:

ಕಳೆದ 2 ದಶಕದಿಂದ ರೇವೂರ್‌ ಮನೆತನವೇ ಶಾಸಕರಾಗಿದ್ದ ಕಲಬುರಗಿ ದಕ್ಷಿಣದಲ್ಲಿನ ದತ್ತಾತ್ರೇಯ ರೇವೂರ್‌ ಇವರ ಸೋಲು ಬಿಜೆಪಿ ಸಂಘಟನೆಯಲ್ಲೇ ಭಾರಿ ಅಚ್ಚರಿ ಮೂಡಿಸಿದೆ. ದಿ. ಚಂದ್ರಶೇಖರ ಪಾಟೀಲ್‌ ರೇವೂರ್‌, ಅರುಣಾದೇವಿ ಪಾಟೀಲ್‌ರ ನಂತರ ದತ್ತಾತ್ರೇಯ ಪಾಟೀಲ್‌ ಈ ಕ್ಷೇತ್ರವನ್ನ ಸದನದಲ್ಲಿ 2 ದಶಕದಿಂದ ನಿರಂತರ ಪ್ರತಿನಿಧಿಸಿದ್ದರು. ಈ ಬಾರಿ ಹಾಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಈ ಕ್ಷೇತ್ರದಲ್ಲಿದ್ದ ಹಾಲಿ ಶಾಸಕ ದತ್ತಾತ್ರೇಯ ರೇವೂರ್‌ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್‌ ಪಕ್ಷದ ಅಲ್ಲಂಪ್ರಭು ಪಾಟೀಲ್‌ ಬ್ರೆಕ್‌ ಹಾಕಿದ್ದಾರೆ. ನಗರ ಹಾಗೂ ಗ್ರಾಮೀಣ ಕ್ಷೇತ್ರಗಳ ಮಿಶ್ರಣವಾಗಿದ್ದ ಕಲಬುರಗಿ ಬಿಜೆಪಿಗೆ ಹೇಳಿ ಮಾಡಿಸಿದ್ದ ಕ್ಷೇತ್ರವಾಗಿತ್ತಲ್ಲದೆ ಇಲ್ಲಿನ ಸೋಲು ಪಕ್ಷದ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸೋಲು- ಗೆಲುವು ಅದೇನೇ ಇದ್ದರೂ ನಾಲ್ಕೈದು ಸಾವಿರ ಅಂತರದಲ್ಲೇ ಇರಲಿದೆ ಎಂಬ ಚರ್ಚೆಗಳ ನಡುವೆಯೇ ಭಾರಿ ಅಂತರದಲ್ಲಿ ತಾವರೆ ಹೂವು ದಕ್ಷಿಣದಲ್ಲಿ ಕಮರಿರೋದು ಆ ಪಕ್ಷದಲ್ಲೇ ಸುದ್ದಿಗೆ ಗ್ರಾಸವಾಗಿದೆ.

ಮತ ಗಳಿಕೆಯಲ್ಲಿ ಕಾಂಗ್ರೆಸ್‌ ಮುಂದೆ:

ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿ ಶೇಕಡಾವಾರು ಮತ ಗಳಿಕೆಯಲ್ಲೂ ಕೈ ಮುಂದಿರೋದು ಸ್ಪಷ್ಟ. ಕಾಂಗ್ರೆಸ್‌ ಪಕ್ಷದ ಮತ ಗಳಿಕೆ ಈ ಬಾಗದಲ್ಲಿ 2018 ರಲ್ಲಿ ಶೇ. 41 ರಷ್ಟುಇದ್ದದ್ದು 2023 ರಲ್ಲಿ ಶೇ. 46 ರಷ್ಟುಹೆಚ್ಚಿದೆ. ಶೇಕಡಾವಾರು 5 ರಷ್ಟುಮತ ಗಳಿಕೆ ಹೆಚ್ಚಿರೋದು ಕಲ್ಯಾಣದಲ್ಲಿ ಕಾಂಗ್ರೆಸ್‌ ಮತ್ತೆ ತನ್ನ ಅಸ್ತಿತ್ವ ತೋರಿರೋದನ್ನ ಸಾಬೀತು ಪಡಿಸಿದೆ. ಬಿಜೆಪಿ 2018 ರಲ್ಲಿ ಕಲ್ಯಾಣ ಭಾಗದಲ್ಲಿ ಶೇ. 39 ರಷ್ಟುಸಾಧನೆ ಮಾಡಿತ್ತು. 2023 ರಲ್ಲಿ ಶೇ. 35 ರಷ್ಟುಮತ ಗಳಿಕೆ ಮಾಡಿ ಕಳಪೆ ಸಾಧನೆ ಮಾಡಿದೆ. ಜೆಡಿಎಸ್‌ ಈ ಪ್ರದೇಶದಲ್ಲಿ ಕಳೆದ ಬಾರಿಗಿಂತ (ಶೇ. 11. 35) ಶೇ. 2 ಪ್ರತಿಶತ ಮತಗಳನ್ನು ಕಮ್ಮಿ ಪಡೆದು (ಶೇ. 10. 5) ಅಸ್ತಿತ್ವದ ಆತಂಕ ಎದುರಿಸುತ್ತಿದೆ. ಈ ಪಕ್ಷದ ಮುಖಂಡ ಬೆಡಂಪ್ಪ ಖಾಶೆಂಪೂರ ಅವರೇ ಸೋಲುಂಡಿರೋದು ಜೆಡಿಎಸ್‌ ಸಂಘಟನೆಗೆ ಪೆಟ್ಟು ಎಂದೇ ಹೇಳಲಾಗುತ್ತಿದೆ.

ಖರ್ಗೆ ಖದರ್‌ ಮುಂದೆ ಡಬ್ಬಲ್‌ ಇಂಜಿನ್‌ ಫೇಲ್‌!

ಕಲ್ಯಾಣದ ಈ ಭೂಭಾಗ ಮೊದಲಿನಿಂದಲೂ ಕಾಂಗ್ರೆಸ್‌ ಕೋಟೆಯಾಗಿತ್ತು. ಆದರೆ 2108ರಲ್ಲಿ ಇಲ್ಲಿರುವ 41 ಸ್ಥಾನಗಳಲ್ಲಿ 19 ಬಿಜೆಪಿ, 18 ಕಾಂಗ್ರೆಸ್‌ 4 ಜೆಡಿಎಸ್‌ ಪಡೆದಿದ್ದವು. 2023ರಲ್ಲಿ ಕಲ್ಯಾಣದ 41 ಸ್ಥಾನಗಳಲ್ಲಿ ಕಾಂಗ್ರೆಸ್‌ 26ರಲ್ಲಿ ಗೆದ್ದು ಬೀಗಿದೆ. ಬಿಜೆಪಿ ಕಳಪೆ ಸಾಧನೆ ಮಾಡಿದ್ದು ಕೇವಲ 10ರಲ್ಲಿ ಕಮಲ ಅರಳಿಸಿದರೆ, ಜೆಡಿಎಸ್‌ 3ರಲ್ಲಿ ಮಾತ್ರ ಗೆದ್ದಿದೆ. ಇಬ್ಬರು ಪಕ್ಷೇತರರು ಗೆದ್ದಿದ್ದಾರೆ. ಡಬ್ಬಲ್‌ ಎಂಜಿನ್‌ ಸರ್ಕಾರವೆಂದು ರಾಜ್ಯ, ಕೇಂದ್ರದಲ್ಲೆರಡೂ ಕಡೆ ಬಿಎಪಿ ಇರೋದರಿಂದ ಪ್ರಗತಿ ಸಲೀಸೆಂದು ಬಿಜೆಪಿ ಹೇಳಿತೆ ಹೊರತು ಕಲ್ಯಾಣದ 7 ಜಿಲ್ಲೆಗಳÜಲ್ಲಿ ಈ ಹೇಳಿಕೆ ವಾಸ್ತವದಲ್ಲಿ ಅನುಭವಕ್ಕೆ ಬರಲೇ ಇಲ್ಲ ಎಂಬುದು ಕಟು ವಾಸ್ತವ. ಇದರಿಂದಾಗಿಯೇ ಬಿಜೆಪಿಯ ಡಬ್ಬಲ್‌ ಇಂಜಿನ್‌ ಇಲ್ಲಿ ಕೆಟ್ಟು ನಿಂತಿದ್ದು ಎಂದು ಜನ ಹೇಳುತ್ತಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷರಾದ ನಂತರ ಖರ್ಗೆಯವರು ಈ ಭೂಮಿಪುತ್ರನೆಂದು ಹೇಳುತ್ತ ನಡೆಸಿದ ಅಬ್ಬರದ ಪ್ರಚಾರದ ಮುಂದೆ ಬಿಜೆಪಿ ಮಂಕಾಗದ್ದು ಫಲಿತಾಂಶವೇ ಸಾರಿ ಹೇಳುತ್ತಿದೆ. ಈ ಭಾಗದ ಪ್ರಗತಿಗೆ ಪೂಕವಾಗಿದ್ದ ರೇಲ್ವೆ ಸೇರಿದಂತೆ ಹಲವು ರಂಗಗಳಲ್ಲಿನ ಯೋಜನೆಗಳು ಮೂಲೆಗುಂಪಾಗಿರೋ ಸಂಗತಿಗಳೂ ಕಲ್ಯಾಣದ ಜನರ ಆಕ್ರೋಶಕ್ಕೆ ಕಾರಣವಾಯ್ತು, ಜೊತೆಗೇ ಕಲ್ಯಾಣಕ್ಕೇ ಹುದ್ದೆ ಭರ್ತಿ, ಕಲಂ 371 (ಜೆ) ಸರಿಯಾದ ಅನು,್ಠನ ಸೇರಿದಂತೆ ಪ್ರಗತಿಯ ದಶಾಂಶ ಸೂತ್ರ ನೀಡಿರುವ ಕಾಂಗ್ರೆಸ್‌ಗೆ ಕಲ್ಯಾಣ ನಾಡು ಸುಲಭದ ತುತ್ತಾಯ್ತು ಎಂದೇ ವಿಶ್ಲೇಷಿಸಲಾಗುತ್ತಿದೆ.

ಕರುನಾಡ ಮುಡಿ ಜಾರಿದ ಕಮಲ: ಎಲ್ಲೆಡೆ 'ಕೈ' ಎತ್ತಿ ಹಿಡಿದ ಮತದಾರರು

ಪುನರಾಯ್ಕೆ- ಹ್ಯಾಟ್ರಿಕ್‌ ಗೆಲುವು ಬಯಸಿ ಮುಗ್ಗಿಸಿದ ಹಾಲಿ ಶಾಸಕರಿವರು

ಭಾರತೀಯ ಜನತಾ ಪಕ್ಷ

  • ದತ್ತಾತ್ರೇಯ ಪಾಟೀಲ್‌ ರೇವೂರ್‌- ಕಲಬುರಗಿ ದಕ್ಷಿಣ
  • ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌- ಸೇಡಂ
  • ಸುಭಾಷ ಗುತ್ತೇದಾರ್‌- ಆಳಂದ
  • ರಾಜೂಗೌ​ಡ- ಸುರಪುರ
  • ವೆಂಕಟರೆಡ್ಡಿ ಮುದ್ನಾಳ್‌- ಯಾದಗಿರಿ
  • ಶಿವನಗೌಡ ನಾಯಕ- ದೇವದುರ್ಗ
  • ಬಸವರಾಜ ಧಡೆಸುಗೂರ್‌- ಕನಕಗಿರಿ
  • ಹಾಲಪ್ಪ ಆಚಾರ್‌- ಯಲಬುರ್ಗಾ
  • ಪರಣ್ಣ ಮುನವಳ್ಳಿ- ಗಂಗಾವತಿ
  • ಜಿ. ಕರುಣಾಕರ ರೆಡ್ಡಿ- ಹರಪನಹಳ್ಳಿ
  • ಸೋಮಶೇಖರ ರೆಡ್ಡಿ- ಬಳ್ಳಾರಿ ನಗರ
  • ಸೋಮಲಿಂಗಪ್ಪ - ಸಿರಗುಪ್ಪ

ಕಾಂಗ್ರೆಸ್‌ ಪಕ್ಷ:

  • ರಾಜಶೇಖರ ಪಾಟೀಲ್‌ - ಹುಮ್ನಾಬಾದ್‌
  • ದುರ್ಗಪ್ಪ ಹುಲಗೇರಿ- ಲಿಂಗಸುಗೂರ್‌
  • ಅಮರೇಗೌಡ ಬಯ್ಯಾಪುರ- ಕುಷ್ಟಗಿ
  • ಪರಮೇಶ್ವರ ನಾಯಕ್‌- ಹೂವಿನ ಹಡಗಲಿ
  • ಭೀಮಾ ನಾಯಕ್‌- ಹಗರಿಬೊಮ್ಮನಹಳ್ಳಿ

ಜಾತ್ಯತೀತ ಜನತಾದಳ:

  • ಬಂಡೆಪ್ಪ ಖಾಶೆಂಪೂರ್‌ - ಬೀದರ್‌ ದಕ್ಷಿಣ
  • ರಾಜಾ ವೆಂಕಟಪ್ಪ ನಾಯಕ್‌- ಮಾನ್ವಿ
  • ವೆಂಕಟರಾವ ನಾಡಗೌಡ (ಸಿಂಧನೂರ)
Follow Us:
Download App:
  • android
  • ios