ತಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಹೇಳಿದ ಕಾರಣಕ್ಕೆ ಅನ್ಯಕೋಮಿನ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿ, ತನ್ನ ಆಟೋವನ್ನು ಜಖಂ ಮಾಡಿದ್ದಾರೆ ಎಂದು ಆಟೋ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ನಗರದ ಹೊರವಲಯದ ಸೋಮಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.

ಶಿವಮೊಗ್ಗ ಮೇ.15) ತಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಹೇಳಿದ ಕಾರಣಕ್ಕೆ ಅನ್ಯಕೋಮಿನ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿ, ತನ್ನ ಆಟೋವನ್ನು ಜಖಂ ಮಾಡಿದ್ದಾರೆ ಎಂದು ಆಟೋ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ನಗರದ ಹೊರವಲಯದ ಸೋಮಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹರೀಶ್‌ರಾವ್‌(Harish rao Auto driver shivamogga) ಎಂಬ ಆಟೋ ಚಾಲಕ ಮತ್ತು ನಜ್ರು, ಅಬ್ರಾರ್‌ ಅಲಿಯಾಸ್‌ ಇಡ್ಲಿ ಹಾಗೂ ಮತ್ತೊಬ್ಬ ಯುವಕನ ನಡುವೆ ಚುನಾವಣೆ ಸಂಬಂಧ ಮಾತುಕತೆ ನಡೆದಿದೆ. ಈ ವೇಳೆಯಲ್ಲಿ ನೀನು ಯಾರಿಗೆ ಮತ ಹಾಕಿದ್ದಿ ಎಂದು ನಜ್ರು ಕೇಳಿದ್ದಾನೆ. ಹರೀಶ್‌ ರಾವ್‌ ಬಿಜೆಪಿಗೆ ಎಂದು ತಿಳಿಸಿದ್ದಾರೆ. ತಕ್ಷಣವೇ ನಜ್ರು ಮತ್ತು ಇತರರು ಹರೀಶ್‌ ರಾವ್‌ ಅವರನ್ನು ಥಳಿಸಿದ್ದಲ್ಲದೇ, ಆಟೋವನ್ನು ಕೂಡ ಜಖಂಗೊಳಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕೆ ಎಸ್ ಈಶ್ವರಪ್ಪಗೆ ಕಜಿಕಿಸ್ತಾನದಿಂದ ಬೆದರಿಕೆ ಕರೆ, ದೂರು ದಾಖಲು

ಎಸ್‌ಪಿ ಕಚೇರಿಗೆ ಭೇಟಿ:

ಈ ಸಂಬಂಧ ಹರೀಶ್‌ ರಾವ್‌ ಜಖಂಗೊಂಡ ಆಟೋದೊಂದಿಗೆ ಎಸ್‌ಪಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆಯಲ್ಲಿ ಎಸ್‌ಪಿ ಮಿಥುನ್‌ಕುಮಾರ್‌ ಅವರಿಗೆ ತಮ್ಮ ದೂರು ಸಲ್ಲಿಸಿ ಹೊರಬಂದ ಈಶ್ವರಪ್ಪ ಅವರನ್ನು ಹರೀಶ್‌ ರಾವ್‌ ಕಂಡಿದ್ದಾರೆ. ಆಗ ಈಶ್ವರಪ್ಪರ​ವರ ಕಾಲಿಗೆ ಬಿದ್ದು, ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು.

ಕಾಂಗ್ರೆಸ್‌ ವಿಜಯೋತ್ಸವ ವೇಳೆ ಗಲಾಟೆ: ಬಿಜೆಪಿ ಕಾರ‍್ಯಕರ್ತನ ಕೊಲೆ!

ಆಗ ಈಶ್ವ​ರಪ್ಪ ಅವರು ಹೆದರಬೇಕಾಗಿಲ್ಲ, ನಾನು ಜೊತೆಗಿದ್ದೇನೆ ಎಂದು ಬೆನ್ನುತಟ್ಟಿಸಾಂತ್ವನ, ಭರವಸೆ ನೀಡಿದರು. ಕ್ಷಣವೇ ಎಸ್‌ಪಿ ಅವರಿಗೆ ಕರೆ ಮಾಡಿ ಘಟನೆ ವಿವರಿಸಿ, ಎಲ್ಲಿಗೆ ದೂರು ನೀಡಬೇಕೆಂದು ಕೇಳಿದ್ದಾರೆ. ನನ್ನ ಬಳಿ ಕಳಿಸಿ ಎಂದಾಗ ಎಸ್‌ಪಿ ಅವರ ಬಳಿಗೆ ಹರೀಶ್‌ ರಾವ್‌ ಅವ​ರ​ನ್ನು ಕಳಿಸಿಕೊಟ್ಟರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಎಸ್‌ಪಿ ಅವ​ರಿ​ಗೆ ಸೂಚನೆ ನೀಡಿದರು.