ಈ ಚುನಾವಣೆ ಶೆಟ್ಟರ್‌ ವರ್ಸಸ್‌ ಜೋಶಿ ಎಂಬಂತಾಗಿ : ಶೆಟ್ಟರ್ ವಿಶ್ಲೇಷಣೆ

ಇಡೀ ರಾಜ್ಯದ ಗಮನ ಸೆಳೆದಿರುವ ಹು-ಧಾ ಸೆಂಟ್ರಲ್‌ ಕ್ಷೇತ್ರದಲ್ಲಿ ಶೆಟ್ಟರ್‌ ವರ್ಸ್‌ಸ್‌ ಜೋಶಿ ಮಧ್ಯೆ ಹೋರಾಟ ನಡೆದಿದ್ದು, ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಇದಾಗಿದೆ ಎಂದು ಮಾಜಿ ಸಿಎಂ, ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ವಿಶ್ಲೇಷಿಸಿದ್ದಾರೆ.

Karnataka assembly election  hubball central assembly election as Shettar vs. Joshi Shettar analysis rav

ಹುಬ್ಬಳ್ಳಿ (ಏ.29) : ಇಡೀ ರಾಜ್ಯದ ಗಮನ ಸೆಳೆದಿರುವ ಹು-ಧಾ ಸೆಂಟ್ರಲ್‌ ಕ್ಷೇತ್ರದಲ್ಲಿ ಶೆಟ್ಟರ್‌ ವರ್ಸ್‌ಸ್‌ ಜೋಶಿ ಮಧ್ಯೆ ಹೋರಾಟ ನಡೆದಿದ್ದು, ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಇದಾಗಿದೆ ಎಂದು ಮಾಜಿ ಸಿಎಂ, ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ವಿಶ್ಲೇಷಿಸಿದ್ದಾರೆ.

ಮಾಧ್ಯಮದವರ ಜತೆ ಶುಕ್ರವಾರ ಮಾತನಾಡಿದ ಅವರು, ಬೆಂಬಲಿಗರು, ಪಾಲಿಕೆ ಸದಸ್ಯರು, ಕೆಲವು ಪದಾಧಿಕಾರಿಗಳು ಮಾನಸಿಕವಾಗಿ ನಮ್ಮ ಜತೆಗಿದ್ದಾರೆ. ಆದರೆ, ಕೇಂದ್ರ ಸಚಿವ ಪ್ರಹ್ಲಾದ ಜೊಶಿ (Pralhad jjoshi) ಅವರನ್ನು ದೈಹಿಕವಾಗಿ ಕಟ್ಟಿಹಾಕಿದ್ದಾರೆ. ಅವರಿಗೆ ಒತ್ತಡ, ಧಮಕಿ ಹಾಕುತ್ತಿದ್ದಾರೆ. ಗೂಢಚರ್ಯೆ ಬಿಟ್ಟು ಕಾರ್ಪೋರೇಟರ್‌ಗಳ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ. ಅದಕ್ಕಾಗಿ ಒಬ್ಬೊಬ್ಬ ಸದಸ್ಯರ ಮೇಲೆ ಮೂರ್ನಾಲ್ಕು ಉಸ್ತುವಾರಿ ವ್ಯಕ್ತಿಗಳನ್ನು ನೇಮಿಸಿದ್ದಾರೆ. ಅವರು ವೈಯಕ್ತಿಕ ಬದುಕನ್ನು ಅನುಭವಿಸಲು ಸಚಿವ ಜೋಶಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Karnataka election 2023: ಮತಬೇಟೆಗೆ ಸ್ಟಾರ್‌ ನಾಯಕರ ವಾರ್‌!

ಬಿಜೆಪಿ ಸದಸ್ಯರನ್ನು ಹಿಡಿದಿಡುವುದಲ್ಲದೇ ಬಿಜೆಪಿ ಸೇರುವಂತೆ ಕಾಂಗ್ರೆಸ್‌ ಕಾರ್ಫೋರೇಟರ್‌ಗಳಿಗೂ ಬೆದರಿಕೆವೊಡ್ಡಿ ಒತ್ತಡ ಹೇರುತ್ತಿದ್ದಾರೆ. ನಮ್ಮ ಮನೆ ಸುತ್ತ ಗುಪ್ತಚರ ಸಿಬ್ಬಂದಿ ನೇಮಿಸಿದ್ದಾರೆ. ಇಲ್ಲಿ ಕಂಡು ಬರುವ ವ್ಯಕ್ತಿಗಳಿಗೆ ಪೋನ್‌ ಮಾಡಿ ಅಲ್ಲಿ ಯಾಕೆ ಇದ್ದೀರಿ, ಅಲ್ಲಿಗೇಕೆ ಹೋಗಿದ್ದೀರಿ ಎಂದು ಬೆದರಿಕೆ ಹಾಕುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಜೋಶಿ ಮತ್ತು ಬಿಜೆಪಿಯವರು ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ. ಗೂಂಡಾಯಿಸಂ, ಧಮಕಿ, ಹಣ, ಅಧಿಕಾರದ ಬಗ್ಗೆ ಬೇರೆ ಪಾರ್ಟಿ ಬಗ್ಗೆ ಮಾತನಾಡುತ್ತಿದ್ದವರು ಇದೀಗ ಇವರೇ ಆ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದಾರೆ. ಇದು ಅಧಿಕಾರದ ಮದ ಹಾಗೂ ಹಣದ ಬೆಂಬಲ ಅವರನ್ನು ಈ ರೀತಿ ಮಾಡಿಸುತ್ತಿದೆ. ಇದಕ್ಕೆಲ್ಲ ಮೇ 10 ಅಂತ್ಯ ಹಾಡಲಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ (BL Santosh)ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌(Jagadish shettar), ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ಹೊರಗಿಟ್ಟು ಅಧಿಕಾರ ಮಾಡಬೇಕೆನ್ನುವ ಷಡ್ಯಂತ್ರ ನಡೆಸಿದ್ದಾರೆ ಎಂದು ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ. ಜತೆಗೆ ತೇಜಸ್ವಿನಿ ಅನಂತಕುಮಾರರಿಗೆ ಟಿಕೆಟ್‌ ತಪ್ಪಲು ಸಂತೋಷ ಅವರೇ ಕಾರಣ ಎಂದು ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನನಗೆ ಟಿಕೆಟ್‌ ನೀಡಿದರೆ, ನಾನೇ ಲಿಂಗಾಯತ ಸಮುದಾಯದ ಹಿರಿಯನಾಗಿ ನಾಯಕತ್ವ ಸ್ಥಾನಕ್ಕೆ ಪೈಪೋಟಿ ಮಾಡುತ್ತಾರೆ ಎಂದುಕೊಂಡು ಸಂತೋಷ ಟಿಕೆಟ್‌ ತಪ್ಪಿಸಿದ್ದಾರೆ. ಪೇಶ್ವೆ ಸಿಎಂ ಮಾಡುವ ಹುನ್ನಾರವೂ ಇದರಲ್ಲಿದೆಯೇ ಎಂಬ ಪ್ರಶ್ನೆಗೆ, ಅವರಲ್ಲಿ ಹಿಡನ್‌ ಅಜೆಂಡಾ ಇದೆ ಎಂದಷ್ಟೇ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಕಟ್ಟಿಬೆಳೆಸಿದ ನಾಯಕರಲ್ಲೊಬ್ಬರಾದ ಅನಂತಕುಮಾರ ನಿಧನ ನಂತರ ಅವರ ಪತ್ನಿ ತೇಜಸ್ವಿನಿಯರಿಗೆ ಟಿಕೆಟ್‌ ನೀಡಬೇಕೆಂಬ ಎಲ್ಲರ ಒತ್ತಾಯ ಇತ್ತು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲೂ ಬಿ.ಎಲ್‌. ಸಂತೋಷ ಟಿಕೆಟ್‌ ತಪ್ಪಿಸಿದರು ಎಂದು ಶೆಟ್ಟರ್‌ ಬಹಿರಂಗ ಪಡಿಸಿದರು.

ದೇಶದಲ್ಲಿ ಸಂತೋಷ ವಿರುದ್ಧ ಮಾತನಾಡುವ ಹಾಗಿಲ್ಲ. ಆದರೆ, ನಾನು ಮಾತನಾಡಿದ್ದರಿಂದ ಸಂತೋಷ ಅವರಿಂದ ಅನ್ಯಾಯಕ್ಕೆ ಒಳಗಾದ ರಾಜ್ಯವಷ್ಟೇ ಅಲ್ಲದೇ ಅನ್ಯರಾಜ್ಯದ ಪಕ್ಷದ ಹಲವಾರು ನಾಯಕರು ಪೋನ್‌ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಬಿಜೆಪಿಗೆ ಕಟಿಬದ್ಧರಾಗಿರುವ ವ್ಯಕ್ತಿ. ಒಂದೆರಡು ದಿನ ಮಾತನಾಡಿ ಸುಮ್ಮನಾಗುತ್ತಾರೆ ಎಂದುಕೊಂಡಿದ್ದ ಬಿಜೆಪಿಯವರಿಗೆ ಕಾಂಗ್ರೆಸ್‌ ಸೇರಿದ ಮೇಲೆ ತಳಮಳ ಶುರುವಾಗಿದೆ ಎಂದರು.

ಬಿಜೆಪಿಯಿಂದ ಹೊರಬಂದ ಬಳಿಕ ನನ್ನ ಸಾಮರ್ಥ್ಯ ಏನೆಂದು ಅವರಿಗೆ ಗೊತ್ತಾಗಿದೆ. ಹಾಗಾಗಿ ನನ್ನನ್ನು ಸೋಲಿಸಿ ರಾಜಕೀಯವಾಗಿ ಮುಗಿಸಬೇಕೆಂಬ ಒನ್‌ ಪಾಯಿಂಟ್‌ ಅಜೆಂಡಾ ಅವರಲ್ಲಿದೆ. ಹಾಗಾಗಿ ಬಿಜೆಪಿಯ ನಾಯಕರು ಶೆಟ್ಟರ್‌ ಸೋಲಿಸಿ ಎಂದು ಅಭಿಯಾನ ಆರಂಭಿಸಿದ್ದು, ಇದು ಕ್ಷೇತ್ರದಲ್ಲಿ ನನ್ನ ಬಗ್ಗೆ ಜನರಲ್ಲಿ ಪ್ರೀತಿ ಹೆಚ್ಚಾಗುವಂತೆ ಮಾಡಿದೆ. ಕಾರ್ಯಕರ್ತರಲ್ಲಿ ಶೆಟ್ಟರನ್ನು ಗೆಲ್ಲಿಸಬೇಕೆಂಬ ಛಲ ಹೆಚ್ಚಿಸಿದೆ. ಬಿಜೆಪಿ ನನ್ನನ್ನು ಟೀಕಿಸಿದಷ್ಟುನಾನು ಜಯದ ಹತ್ತಿರ ಹೋಗುತ್ತೇನೆ. ಎಲ್ಲವನ್ನೂ ಎದುರಿಸುತ್ತಿದ್ದು, ಐತಿಹಾಸಿಕ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖರ್ಗೆ ಹೇಳಿಕೆ ನೋಡಿದರೆ ಕಾಂಗ್ರೆಸ್‌ ನಿರ್ಲಜ್ಜ ಪಕ್ಷ: ಸ್ಮೃತಿ ಇರಾನಿ ವಾಗ್ದಾಳಿ

ಬಿ.ಎಲ್‌. ಸಂತೋಷಗೆ ನೇರವಾಗಿ ಯುದ್ಧ ಮಾಡುವ ಜಾಯಮಾನ ಇಲ್ಲ. ಹಿಂಬಾಗಿಲ ರಾಜಕೀಯ ಮಾಡುತ್ತಿದ್ದಾರೆ. ಮತ್ತೊಬ್ಬರ ಮೂಲಕ ಮಾತನಾಡಿಸುವುದನ್ನು ಬಿಟ್ಟು ನೇರ ನನ್ನ ಜತೆ ಯುದ್ಧಕ್ಕೆ ಬರಲಿ.

ಜಗದೀಶ ಶೆಟ್ಟರ, ಕಾಂಗ್ರೆಸ್‌ ಅಭ್ಯರ್ಥಿ

Latest Videos
Follow Us:
Download App:
  • android
  • ios