Karnataka election 2023: ಮತಬೇಟೆಗೆ ಸ್ಟಾರ್‌ ನಾಯಕರ ವಾರ್‌!

ವಿಧಾನಸಭೆ ಚುನಾವಣೆಯ ಪ್ರಚಾರ ಬಿಸಿಲಿನೊಂದಿಗೆ ಭಾರೀ ಕಾವು ಪಡೆದುಕೊಂಡಿದೆ. ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಕಾರಣಕ್ಕೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಜತೆಗೆ ಆಪ್‌ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಉರಿಬಿಸಿಲನ್ನು ಲೆಕ್ಕಿಸದೇ ಮತಬೇಟೆಗೆ ಅಕ್ಷರಶಃ ವಾರ್ ನಡೆಸಿವೆ.

Star leaders compete to win karnataka assembly elections rav

ವಿಶೇಷ ವರದಿ

ಬೆಳಗಾವಿ (ಏ.29) : ವಿಧಾನಸಭೆ ಚುನಾವಣೆಯ ಪ್ರಚಾರ ಬಿಸಿಲಿನೊಂದಿಗೆ ಭಾರೀ ಕಾವು ಪಡೆದುಕೊಂಡಿದೆ. ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಕಾರಣಕ್ಕೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಜತೆಗೆ ಆಪ್‌ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ತಮ್ಮ ಕಸರತ್ತುಗಳನ್ನು ನಡೆಸಿವೆ. ಈ ಉರಿ ಬಿಸಿಲಿನಲ್ಲಿಯೂ ಸೂರ್ಯನ ಪ್ರಖರದಷ್ಟೇ ಪ್ರಚಾರವನ್ನು ಎಲ್ಲ ಪಕ್ಷಗಳು ನಡೆಸಿವೆ. ಇದರ ಜತೆಗೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ಅನೇಕ ಸ್ಟಾರ್‌ ಪ್ರಚಾರಕರು ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಭರ್ಜರಿ ಮತಬೇಟೆ ಆರಂಭಿಸಿದ್ದಾರೆ.

ಒಂದು ಪಕ್ಷಕ್ಕಿಂತ ಮತ್ತೊಂದು ಪಕ್ಷಗಳು ತಮ್ಮ ನಾಯಕರನ್ನು ಕರೆಸಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿವೆ. ಈ ಮೂಲಕ ಮತದಾರರ ಮನವೊಲಿಸುವತ್ತ ಚಿತ್ತ ಹರಿಸಿವೆ. ಸ್ಥಳೀಯ ಅಭ್ಯರ್ಥಿಗಳು, ಬೇರುಮಟ್ಟದ ನಾಯಕರಲ್ಲದೆ ಜನಪ್ರಿಯವಾದ ನಾಯಕರನ್ನು ಕೂಡ ಕರೆಸಿ ಪ್ರಚಾರ ನಡೆಸುವ ಮೂಲಕ ಮತ ಲೆಕ್ಕಾಚಾರ ಹಾಕುತ್ತಿವೆ ಪಕ್ಷಗಳು.

ಬೆಳಗಾವಿ: ಕುಡಚಿಯಲ್ಲಿಂದು ಪ್ರಧಾನಿ ಮೋದಿ ಪ್ರಚಾರ Rally...

ಬಿಜೆಪಿಗೆ ವರವಾದ ರಾಷ್ಟ್ರೀಯ ನಾಯಕರು:

ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿನ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಅದಕ್ಕಾಗಿ ರಾಷ್ಟ್ರಮಟ್ಟದ ಅನೇಕ ನಾಯಕರು ಸ್ಟಾರ್‌ ಪ್ರಚಾರಕರಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆಯ ಪ್ರಕ್ರಿಯೆ ಆರಂಭವಾಗುವ ಮೊದಲೇ ಪ್ರಧಾನಿ ಮೋದಿ(PM Narendra Modi)ಯವರನ್ನು ಕರೆಸಿ ಪ್ರಚಾರ ನಡೆಸಿದ್ದ ಬಿಜೆಪಿ, ಈಗ ಮತ್ತೊಮ್ಮೆ ಏ.29ರಂದು ಕರೆಸಿ ಪ್ರಚಾರ ನಡೆಸುತ್ತಿದೆ.

ಪ್ರಧಾನಿ ಮೋದಿ ಅವರ ಜತೆಗೆ ಬಿಜೆಪಿಯು ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit shah), ರಕ್ಷಣಾ ಸಚಿವ ರಾಜನಾಥ ಸಿಂಗ್‌(Rajnath singh), ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್‌ ಚೌವಾಣ್‌, ಕೇಂದ್ರ ಸಚಿವರಾದ ಸಚಿವೆ ಸ್ಮೃತಿ ಇರಾನಿ, ಪ್ರಹ್ಲಾದ ಜೋಶಿ, ನರೇಂದ್ರಸಿಂಗ್‌ ತೊಮರ, ಅನ್ನಪೂರ್ಣ, ಯುಪಿ ಡಿಸಿಎಂ ಕೇವಶಪ್ರಸಾದ ಮೌರ್ಯ, ಬಿಹಾರ ಸಂಸದ ಹರೀಶ್‌ ದ್ವಿವೇದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ರಾಷ್ಟ್ರ, ರಾಜ್ಯ ನಾಯಕರು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಭರ್ಜರಿ ಮತಬೇಟೆ ನಡೆಸಿದ್ದಾರೆ. ಅಲ್ಲದೆ, ಬಿಹಾರ, ದೆಹಲಿ, ಮಹಾರಾಷ್ಟ್ರದಿಂದಲೂ ಅನೇಕ ಶಾಸಕರು, ಸಂಸದರು ಪ್ರಚಾರವನ್ನೂ ನಡೆಸಿದ್ದಾರೆ. ಇನ್ನು ಮುಂದೆಯೂ ಚಿತ್ರ ನಟ ಸುದೀಪ ಇನ್ನೂ ಅನೇಕ ನಾಯಕರು ಸೇರಿದಂತೆ ಹಲವರು ಪ್ರಚಾರ ನಡೆಸಲಿದ್ದಾರೆ.

ಕೈಗೆ ರಾಹುಲ್‌, ಪ್ರಿಯಾಂಕ ಆಸರೆ:

ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಇರುವುದರಿಂದ ಸಹಜವಾಗಿ ದೊಡ್ಡ ಪ್ರಮಾಣದ ಸ್ಟಾರ್‌ ಪ್ರಚಾರಕರನ್ನು ಕರೆಸಿ ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್‌ ಪಕ್ಷ ಕೂಡ ತಮ್ಮ ನಾಯಕರನ್ನು ಕರೆಸಿಕೊಂಡು ಮತಬೇಟೆ ನಡೆಸುತ್ತಿದೆ. ಚುನಾವಣೆ ಘೋಷಣೆ ಪೂರ್ವದಲ್ಲಿ ರಾಹುಲ್‌ ಗಾಂಧಿ ಬೆಳಗಾವಿಯಲ್ಲಿ ಪ್ರಚಾರ ನಡೆಸಿದ್ದಾರೆ. ಚುನಾವಣೆಯ ಘೋಷಣೆ ನಂತರ ಈಗ ಪ್ರಿಯಾಂಕ ವಾದ್ರಾ ಅವರು ಏ.29ರಂದು ಖಾನಾಪುರದಲ್ಲಿ ಪ್ರಚಾರ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತಬೇಟೆ ನಡೆಸಿದ್ದಾರೆ. ಇವರ ಜತೆಗೆ ರಾಜ್ಯಮಟ್ಟದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸತೀಶ ಜಾರಕಿಹೊಳಿ ಸೇರಿದಂತೆ ಸ್ಥಳೀಯ ಮಟ್ಟದ ನಾಯಕರೇ ಸ್ಟಾರ್‌ ಪ್ರಚಾರಕರಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿಯುತವಾಗಿಲ್ಲ. ಮೊದಲಿನ ರೂಪ ಕಳೆದುಕೊಂಡಿರುವ ಜೆಡಿಎಸ್‌ಗೆ ಆಯಾ ಕ್ಷೇತ್ರಗಳಲ್ಲಿನ ಸ್ಥಳೀಯ ಅಭ್ಯರ್ಥಿಗಳೇ ಸ್ಟಾರ್‌ ಪ್ರಚಾರಕರಾಗಿದ್ದಾರೆ.

Karnataka election 2023: ಖರ್ಗೆ ಹೇಳಿಕೆ ನೋಡಿದರೆ ಕಾಂಗ್ರೆಸ್‌ ನಿರ್ಲಜ್ಜ ಪಕ್ಷ: ಸ್ಮೃತಿ ಇರಾನಿ ವಾಗ್ದಾಳಿ

ಸ್ಟಾರ್‌ ಕ್ಷೇತ್ರವಾದ ಅಥಣಿ

ಅಥಣಿ ಈಗ ಬೆಳಗಾವಿ ಜಿಲ್ಲೆಯ ಸ್ಟಾರ್‌ ಕ್ಷೇತ್ರವೆಂದೇ(Athani assembly constituency) ಪರಿಗಣಿತವಾಗಿದೆ. ಬಿಜೆಪಿಯಲ್ಲಿದ್ದ ಲಕ್ಷ್ಮಣ ಸವದಿ(Laxman savadi) ಕಾಂಗ್ರೆಸ್‌ ಸೇರಿ, ಆ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರ ಎದುರಾಳಿಯಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh jarkiholi) ಆಪ್ತ ಮಹೇಶ ಕುಮಟಳ್ಳಿ(Mahesh kumatahalli) ಸ್ಪರ್ಧೆ ಮಾಡಿದ್ದಾರೆ. ಶತಾಯಗತಾಯ ಸವದಿ ಅವರನ್ನು ಸೋಲಿಸಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ, ರಮೇಶ ಜಾರಕಿಹೊಳಿ ಸೇರಿದಂತೆ ಅನೇಕರು ನಾನಾ ರಣತಂತ್ರಗಳನ್ನು ಹೂಡಿದ್ದಾರೆ. ನಾನಾ ನಾಯಕರನ್ನು ಬಿಜೆಪಿಗೆ ಕರೆತರುತ್ತಿದ್ದಾರೆ. ಇದಕ್ಕೆ ಪ್ರತಿತಂತ್ರವಾಗಿ ಸವದಿ ಮತ್ತು ಕಾಂಗ್ರೆಸ್‌ನ ನಾಯಕರು ಹೆಣೆಯುತ್ತಿದ್ದಾರೆ. ಆದರೆ, ಅಥಣಿ ಕ್ಷೇತ್ರದಲ್ಲಿ ಯಾರು ಧಣಿ ಆಗುತ್ತಾರೆ ಎನ್ನುವುದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ.

Latest Videos
Follow Us:
Download App:
  • android
  • ios