Karnataka election 2023: ಖರ್ಗೆ ಹೇಳಿಕೆ ನೋಡಿದರೆ ಕಾಂಗ್ರೆಸ್‌ ನಿರ್ಲಜ್ಜ ಪಕ್ಷ: ಸ್ಮೃತಿ ಇರಾನಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದರೆ ಸತ್ತು ಹೋಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಹೇಳಿಕೆ ನೋಡಿದರೆ, ಕಾಂಗ್ರೆಸ್‌ ನಿರ್ಲಜ್ಜ ಪಕ್ಷ ಎನ್ನುವುದು ಗೊತ್ತಾಗುತ್ತದೆ. ಇಂತಹ ನಿರ್ಲಜ್ಜ ಪಕ್ಷ ಮೋದಿ ಸಾವಿನ ಕೂಪಕ್ಕೆ ತಳ್ಳುವ ಆಹ್ವಾನ ನೀಡಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

If Kharge's statement is seen Congress is a shameless party says Smriti Irani at belgum rav

ಬೆಳಗಾವಿ (ಏ.29) : ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದರೆ ಸತ್ತು ಹೋಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಹೇಳಿಕೆ ನೋಡಿದರೆ, ಕಾಂಗ್ರೆಸ್‌ ನಿರ್ಲಜ್ಜ ಪಕ್ಷ ಎನ್ನುವುದು ಗೊತ್ತಾಗುತ್ತದೆ. ಇಂತಹ ನಿರ್ಲಜ್ಜ ಪಕ್ಷ ಮೋದಿ ಸಾವಿನ ಕೂಪಕ್ಕೆ ತಳ್ಳುವ ಆಹ್ವಾನ ನೀಡಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti irani)ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ(Belgum rural assembly constituency)ದ ಹಿಂಡಲಗಾದಲ್ಲಿ ಬಿಜೆಪಿ ಚುನಾವಣಾ ಪ್ರಚಾರ(BJP election campaigning) ಸಭೆಯಲ್ಲಿ ಮಾತನಾಡಿದ ಅವರು, ಈ ಕಾಂಗ್ರೆಸ್‌ ಪಕ್ಷ ನರೇಂದ್ರ ಮೋದಿ(Narendra Modi)ಯವರ ಶತಾಯುಷಿ ತಾಯಿ ಬಗ್ಗೆ ಅವಹೇಳನ ಮಾಡಿದ್ದ ಪಕ್ಷ. ನರೇಂದ್ರ ಮೋದಿಯವರ ಸ್ವರ್ಗೀಯ ತಂದೆಯವರ ಅಪಮಾನ ಮಾಡಿದ ನಿರ್ಲಜ್ಜ ಪಕ್ಷ ಕಾಂಗ್ರೆಸ್‌. ನಾನು ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರಿಗೆ ಹೇಳಬಯಸುತ್ತೇನೆ. ನೀವು ಇಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದೀರಿ. ಆ ರಾಜಕೀಯ ಪಕ್ಷದ ಇತಿಹಾಸ ಹೇಗಿದೆ ಅಂದರೆ ದಲಿತ ನಾಯಕನಾದರೆ ರಾಹುಲ… ಗಾಂಧಿ ತಮ್ಮ ಚಪ್ಪಲಿ ಅವರಿಂದ ತೆಗೆಸುತ್ತಾರೆ ಎಂದು ಟೀಕಿಸಿದರು.

ಶೆಟ್ಟರ್‌ ಯಾರಿಗೂ ಹೆದರೋ ಅಗತ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ದೇಶದಲ್ಲಿ ಮೊದಲ ಬಾರಿ ಆದಿವಾಸಿ ಮಹಿಳೆಗೆ ರಾಷ್ಟ್ರಪತಿ ಅಭ್ಯರ್ಥಿ ಮಾಡಿದರೆ ಅವರ ಬಗ್ಗೆ ಅವಹೇಳನ ಹೇಳಿಕೆ ನೀಡುವಂತ ಪಕ್ಷ ಕಾಂಗ್ರೆಸ್‌. ನಿಮ್ಮ ಪಕ್ಷ ಹಿಂದೂ ಸಮಾಜಕ್ಕೆ ಅಪಮಾನ ಮಾಡುವರನ್ನು ಸ್ಟಾರ್‌ ಪ್ರಚಾರಕ ಮಾಡಿದೆ. ಕಾಂಗ್ರೆಸ್‌ ಪಕ್ಷ ಎಸ್‌ಡಿಪಿಐ ಬೆಂಬಲ ಕೇಳುತ್ತದೆ. ಪಿಎಫ್‌ಐ ಗೂಂಡಾಗಳನ್ನು ಬಿಡುಗಡೆ ಮಾಡುವ ಮಾತುಗಳನ್ನಾಡುತ್ತದೆ.ಕಾಂಗ್ರೆಸ್‌ ನಾಯಕು ಈಗ ಮತ್ತೊಮ್ಮೆ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಖರ್ಗೆ ಅವರು ವಯಸ್ಸಿನಲ್ಲಿ ನನಗಿಂತ ದೊಡ್ಡವರು, ನಿಮಗೆ ಇದು ಶೋಭೆ ತರುವುದಿಲ್ಲ. ನಿಮಗೂ ಗೊತ್ತು, ನಮಗೂ ಗೊತ್ತಿದೆ. ಮೇಡಮ್‌ ಆದೇಶ ಬಂದಿದ್ದಕ್ಕೆ ನರೇಂದ್ರ ಮೋದಿಗೆಖರ್ಗೆ ಬೈಯ್ದಿದ್ದಾರೆ ಎಂದು ಇರಾನಿ ಟೀಕಿಸಿದರು.

ನಾನು ಗಾಂಧಿ ಕುಟುಂಬಕ್ಕೆ ಹೇಳಬಯಸುತ್ತೇನೆ. ನೀವು ಮೋದಿ ಸಾವು ಬಯಸಿದರೆ, ಕರ್ನಾಟಕದ ಮಹಿಳೆಯರು ಅವರ ದೀರ್ಘಾಯುಷ್ಯ ಪ್ರಾರ್ಥನೆ ಮಾಡುತ್ತಾರೆ. ಇಂದು ಮೋದಿ ಗೆಲ್ಲಿಸುವಂತೆ ಮಹಿಳೆಯರಿಗೆ ವಿಶೇಷ ಪ್ರಾರ್ಥನೆ ಮಾಡುತ್ತೇನೆ ಎಂದ ಅವರು, ಕೋವಿಡ್‌ ವೇಳೆ ಕಾಂಗ್ರೆಸ್‌ ಸರ್ಕಾರ ಇದ್ದರೆ ಉಚಿತ ವ್ಯಾಕ್ಸಿನ್‌ ಸಿಗುತ್ತಿತ್ತಾ ಎಂದು ಪ್ರಶ್ನಿಸಿದರು. ಒಂದು ಇಂಜೆಕ್ಷನ್‌ ಬೆಲೆ . 600 ಮೂರು ಡೋಸ್‌ ವ್ಯಾಕ್ಸಿನ್‌ಗೆ . 1800 ಆಗುತ್ತದೆ. ಕಾಂಗ್ರೆಸ್‌ ಪಕ್ಷ ಮೋದಿ ಹಠಾವೋ ವ್ಯಾಕ್ಸಿನ್‌ ಹಠಾವೋ, ವಿದೇಶದಿಂದ ವ್ಯಾಕ್ಸಿನ್‌ ತರಿಸಿ ಅನ್ನುತ್ತಿದ್ದರು. 160 ದೇಶಗಳಲ್ಲಿ ಭಾರತದ ವ್ಯಾಕ್ಸಿನ್‌ ಹೋಗಿದೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆ(Karnataka assembly election 2023)ಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲುವುದು ಗ್ಯಾರಂಟಿ. ಸೋಲಿನ ಭೀತಿಯಿಂದ ಬಿಜೆಪಿ ವಿರುದ್ಧ ಹೇಳಿಕೆ ನೀಡಲಾಗುತ್ತಿದೆ. ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ಜಗಳ ಎಲ್ಲರಿಗೂ ಗೊತ್ತಿದೆ. ನಾವು ರಾಜ್ಯದ ಜನರ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.

ಕಾಂಗ್ರೆ​ಸ್‌​ನಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಹೀರೋ ಅಲ್ಲ, ವಿಲ​ನ್‌: ಕೆ.ಎಸ್‌.ಈಶ್ವರಪ್ಪ

ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ, ಪಕ್ಷದ ಮುಖಂಡ ಕಿರಣ ಜಾಧವ ಮೊದಲಾದವರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios